ಪ್ರಧಾನ ಮಂತ್ರಿಯವರ ಕಛೇರಿ
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಭೇಟಿ ನೀಡಲಿದ್ದಾರೆ ಪ್ರಧಾನ ಮಂತ್ರಿ
Posted On:
28 DEC 2018 3:54PM by PIB Bengaluru
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಭೇಟಿ ನೀಡಲಿದ್ದಾರೆ ಪ್ರಧಾನ ಮಂತ್ರಿ
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2018 ರ ಡಿಸೆಂಬರ್ 29 ಮತ್ತು 30 ರಂದು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಭೇಟಿ ನೀಡಲಿದ್ದಾರೆ. ಡಿಸೆಂಬರ್ 29 ರಂದು ಸಂಜೆ ಅವರು ಪೋರ್ಟ್ ಬ್ಲೇರ್ ಗೆ ಆಗಮಿಸುವರು.
ಡಿಸೆಂಬರ್ 30 ರಂದು ಪ್ರಧಾನ ಮಂತ್ರಿ ಅವರು ಕಾರ್ ನಿಕೋಬಾರಿನಲ್ಲಿಯ ಸುನಾಮಿ ಸ್ಮಾರಕಕ್ಕೆ ಭೇಟಿ ನೀಡಿ ಅಲ್ಲಿ ಪುಷ್ಪ ನಮನ ಸಲ್ಲಿಸುವರು ಹಾಗು ಅಗಲಿದ ಆತ್ಮಗಳ ಗೋಡೆಯ ಬಳಿ ಕ್ಯಾಂಡಲ್ ಬೆಳಗುವರು. ಅರೋಂಗ್ ನಲ್ಲಿ ಅವರು ಐ.ಟಿ.ಐ. ಯನ್ನು ಉದ್ಘಾಟಿಸುವರು ಮತ್ತು ಹಲವು ಮೂಲಸೌಕರ್ಯ ಸಂಬಂಧಿ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸುವರು. ಅವರು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುವರು.
ನಂತರ ಪ್ರಧಾನ ಮಂತ್ರಿ ಅವರು ಪೋರ್ಟ್ ಬ್ಲೇರ್ ನಲ್ಲಿರುವ ಹುತಾತ್ಮರ ಸ್ಥಂಭಕ್ಕೆ ಪುಷ್ಪ ನಮನ ಸಲ್ಲಿಸುವರು . ನಗರದಲ್ಲಿರುವ ಸೆಲ್ಲ್ಯುಲಾರ್ ಜೈಲಿಗೆ ಅವರು ಭೇಟಿ ನೀಡುವರು.
ಪೋರ್ಟ್ ಬ್ಲೇರಿನ ದಕ್ಷಿಣ ಬಿಂದುವಿನಲ್ಲಿ ಹೈಮಾಸ್ಟ್ ಬಾವುಟವನ್ನು ಅವರು ಅರಳಿಸುವರು. ಪೋರ್ಟ್ ಬ್ಲೇರ್ ನಲ್ಲಿಯ ಮರೀನಾ ಉದ್ಯಾನವನದಲ್ಲಿ ನೇತಾಜಿ ಪ್ರತಿಮೆಗೆ ಅವರು ಪುಷ್ಪ ನಮನ ಸಲ್ಲಿಸುವರು.
ನೇತಾಜಿ ಸುಭಾಶ್ ಚಂದ್ರ ಬೋಸ್ ಅವರು ಭಾರತದ ಮಣ್ಣಿನಲ್ಲಿ ತ್ರಿವರ್ಣ ಧ್ವಜ ಅರಳಿಸಿದ್ದರ 75 ನೇ ವರ್ಷಾಚರಣೆಯ ಅಂಗವಾಗಿ ನೇತಾಜಿ ಕ್ರೀಡಾಂಗಣದಲ್ಲಿ ಪ್ರಧಾನ ಮಂತ್ರಿ ಅವರು ಸ್ಮರಣಾರ್ಥ ಅಂಚೆ ಚೀಟಿ, ನಾಣ್ಯ ಮತ್ತು ಮೊದಲ ದಿನದ ಕವರ್ ಬಿಡುಗಡೆ ಮಾಡಲಿದ್ದಾರೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಅನ್ವಯಿಸಿ ಅನ್ವೇಷಣಾ ಮತ್ತು ನವೋದ್ಯಮ ನೀತಿಯನ್ನು ಪ್ರಧಾನ ಮಂತ್ರಿಗಳು ಬಿಡುಗಡೆ ಮಾಡುವರು. ಅವರು 7 ಮೆ.ವಾ. ಸೌರ ವಿದ್ಯುತ್ ಸ್ಥಾವರ, ಸೌರ ಗ್ರಾಮವನ್ನೂ ಉದ್ಘಾಟಿಸುವರು. ಅವರು ಹಲವಾರು ಅಭಿವೃದ್ಧಿ ಯೋಜನೆಗಳಿಗೂ ಶಿಲಾನ್ಯಾಸ ಮಾಡುವರು. ಪ್ರಧಾನಿ ಅವರು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುವರು.
(Release ID: 1557834)