ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಸಮಾಚಾರ ಮತ್ತು ಪ್ರಸಾರ ಸಚಿವಾಲಯ:2018 ವರ್ಷಾಂತ್ಯದ ಪರಾಮರ್ಶೆ

Posted On: 19 DEC 2018 3:16PM by PIB Bengaluru

ಸಮಾಚಾರ ಮತ್ತು ಪ್ರಸಾರ ಸಚಿವಾಲಯ:2018 ವರ್ಷಾಂತ್ಯದ ಪರಾಮರ್ಶೆ

ಸಮಾಚಾರ ಮತ್ತು ಪ್ರಸಾರ ಸಚಿವಾಲಯ ಅತ್ಯಂತ ಪ್ರಮುಖ ಸಚಿವಾಲಯಗಳಲ್ಲಿ ಒಂದಾಗಿದ್ದು, ಸಮುದಾಯಗಳನ್ನು ತಲುಪುವಲ್ಲಿ ಸರ್ಕಾರವನ್ನು ಪ್ರತಿನಿಧಿಸುತ್ತದೆ. ಸಚಿವಾಲಯಕ್ಕೆ ವಿವಿಧ ಸಂವಹನ ಮಾಧ್ಯಮಗಳ ಮೂಲಕ ಸರ್ಕಾರದ ನೀತಿಗಳುಯೋಜನೆಗಳು ಮತ್ತು ಕಾರ್ಯಕ್ರಮಗಳ ಬಗ್ಗೆ ಮಾಹಿತಿಯನ್ನು ಪ್ರಸಾರ ಮಾಡುವ ಕಾರ್ಯವನ್ನು  ವಹಿಸಿಕೊಡಲಾಗಿದೆ.

ಈ ಉದ್ದೇಶಗಳನ್ನು ಪೂರೈಸಲು 2018ರಲ್ಲಿ ಸಚಿವಾಲಯವು ಹಲವು ಪ್ರಮುಖ ಉಪಕ್ರಮಗಳನ್ನು ಕೈಗೊಂಡಿದ್ದು, ಅದರ ಚಿತ್ರಣವನ್ನು ಈ ಕೆಳಗೆ ನೀಡಲಾಗಿದೆ.

ಮಾಹಿತಿ ವಲಯ

·    ಸಂವಹನ ಮತ್ತು ಜನಸಂಪರ್ಕ ಶಾಖೆ  ಗೊಂದಲದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮಾಧ್ಯಮ ಘಟಕಗಳ ನಡುವೆ ಸಹಮತ ಖಾತ್ರಿಪಡಿಸಲು ಜಾಹೀರಾತು ಮತ್ತು ದೃಶ್ಯ ಪ್ರಚಾರ ನಿರ್ದೇಶನಾಲಯ  (ಡಿಎವಿಪಿ)ಕ್ಷೇತ್ರ ಪ್ರಚಾರದ ನಿರ್ದೇಶನಾಲಯ (ಡಿಎಫ್.ಪಿ) ಮತ್ತು ಸಂಗೀತ ಮತ್ತು ನಾಟಕ ವಿಭಾಗ (ಎಸ್ ಮತ್ತು ಡಿಡಿ)ಗಳ ಏಕೀಕರಣ ಮೂಲಕ ರೂಪಿಸಲಾಗಿದೆ.

·    ವಾರ್ಷಿಕ ಭಾರತ 2018 ಉಲ್ಲೇಖ ಮತ್ತು ಭಾರತ 2018 ಬಿಡುಗಡೆ  ಪ್ರಕಾಶನ ವಿಭಾಗದಿಂದ ಹೊರತರಲಾದ ಮಹತ್ವಾಕಾಂಕ್ಷೆಯ ಪ್ರಕಟಣೆ. ಎರಡು ವಾರ್ಷಿಕ ಉಲ್ಲೇಖಗಳನ್ನು ಹೆಚ್ಚಾಗಿ ಬಳಸಲಾಗುವ ಇ-ಪಬ್ ಸ್ವರೂಪದಲ್ಲಿ ಇ-ಪುಸ್ತಕವಾಗಿಯೂ ದೊರಕುವಂತೆ ಮಾಡಲಾಗಿದೆ, ಹೀಗಾಗಿ ಅವುಗಳನ್ನು ಟ್ಯಾಬ್ಲೆಟ್ಸ್, ಕಂಪ್ಯೂಟರ್ ಗಳು, ಇ-ರೀಡರ್ ಗಳು ಮತ್ತು ಸ್ಮಾರ್ಟ್ ಫೋನ್ ಗಳಂತ ಸಾಧನಗಳಲ್ಲಿ ಸುಲಭವಾಗಿ ನೋಡಬಹುದಾಗಿದೆ.

·      ಪತ್ರಕರ್ತರ ಕಲ್ಯಾಣ ಯೋಜನೆ ಕುರಿತ ಸಮಿತಿಯ ಪುನಾರಚನೆ – ಇದೇ ಮೊದಲ ಬಾರಿಗೆ ಪತ್ರಕರ್ತರನ್ನೂ ಸಮಿತಿಯ ಸದಸ್ಯರನ್ನಾಗಿ ಮಾಡಲಾಗಿದೆ. ಇದನ್ನು ಕೇವಲ ಕಾರ್ಯದರ್ಶಿ (ಐ ಮತ್ತು ಬಿ)ಜಂಟಿ ಕಾರ್ಯದರ್ಶಿ (ಪಿ ಮತ್ತು ಎ)ಪ್ರಧಾನ ಮಹಾ ನಿರ್ದೇಶಕಪಿಐಬಿ ಅವರನ್ನು ಮಾತ್ರ ಅಧಿಕೃತ ಸದಸ್ಯರನ್ನಾಗಿ ಮಾಡಿ ರೂಪಿಸಲಾಗಿತ್ತು.

·    ದೀನ್ ದಯಾಳ್ ಉಪಾಧ್ಯಾಯ ವಿದ್ಯಾರ್ಥಿ ವೇತನ ಅಭಿವೃದ್ಧಿ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಭಾರತೀಯ ಮೂಲದ ಜನರಿಗಾಗಿ ಘೋಷಿಸಲಾಗಿದೆ.

·    ಉದ್ಯೋಗ ಮತ್ತು ಸ್ವಯಂ ಉದ್ಯೋಗ ಕುರಿತು ಯೋಜನಾದ ವಿಶೇಷ ಸಂಚಿಕೆ ಬಿಡುಗಡೆ -  ಜೀವನೋಪಾಯದ ಅವಕಾಶಗಳುಉದ್ಯಮಶೀಲತೆಉದ್ಯೋಗ ದತ್ತಾಂಶಕ್ಕೆ ಸಂಬಂಧಿಸಿದ ವಿಷಯಗಳು ಸೇರಿದಂತೆ ವ್ಯಾಪಕ ವಿಷಯಗಳುಮುದ್ರಾ ಯೋಜನೆಯಂಥ ಕಾರ್ಯಕ್ರಮಗಳ ಯಶೋಗಾಥೆಗಳನ್ನು ಸಹ ಇದು ಒಳಗೊಂಡಿತ್ತು.

·    ಮಹಾತ್ಮಾ ಗಾಂಧಿ ಅವರ 150ನೇ ಜನ್ಮೋತ್ಸವದ ಆಚರಣೆ ಕುರಿತಂತೆ ಬಹು ಮಾಧ್ಯಮ ವಸ್ತು ಪ್ರದರ್ಶನ – ಸಂವಹನ ಮತ್ತು ಜನ ಸಂಪರ್ಕ ಶಾಖೆಯಿಂದ ಆಯೋಜನೆ. ಈ ವಸ್ತುಪ್ರದರ್ಶನವು ಮಹಾತ್ಮಾ ಗಾಂಧಿ ಅವರ ಜೀವನ ಕುರಿತ ರಸಪ್ರಶ್ನೆ, ಮಹಾತ್ಮಾ ಗಾಂಧಿ ಅವರ ಬದುಕು ಬಿಂಬಿಸುವ ಸಂವಾದಾತ್ಮಕ ಕಾಲಘಟ್ಟ, ಆಯ್ದ ವಿವಿಧ ಹಿನ್ನೆಲೆಗಳೊಂದಿಗಿನ ಚಿತ್ರ ಸಂಪುಟ3ಡಿ ವೀಡಿಯೊ ಬಿತ್ತಿಇತ್ಯಾದಿಗಳನ್ನು ಒಳಗೊಂಡಿತ್ತು. ಇದು ಮಹಾತ್ಮಾ ಗಾಂಧಿ ಅವರ ಜೀವನ ಕುರಿತ ಹಲವು ಪುಸ್ತಕಗಳನ್ನೂ ಪ್ರದರ್ಶಿಸಿತು.

·    ದಿ ರಿಪಬ್ಲಿಕನ್ ಎಥಿಕ್” ಮತ್ತು “ಲೋಕತಂತ್ರ ಕೆ ಸ್ವರ್” ಪುಸ್ತಕಗಳ ಬಿಡುಗಡೆ – ರಾಷ್ಟ್ರಪತಿ ಶ್ರೀ ರಾಮನಾಥ್ ಕೋವಿಂದ್ ಅವರ ಆಯ್ದ ಭಾಷಣಗಳು, ಪ್ರಕಾಶನ ವಿಭಾಗದಿಂದ ಹೊರತರಲಾಗಿದೆ.

ಪ್ರಸಾರ ವಲಯ

·    15ನೇ ಏಷ್ಯಾ ಮಾಧ್ಯಮ ಶೃಂಗ ನಮ್ಮ ಗಾಥೆಯನ್ನು ಹೇಳಿ – ಏಷ್ಯಾ ಮತ್ತು ಹೆಚ್ಚು ವಿಷಯದ ಮೇಲೆ ದೆಹಲಿಯಲ್ಲಿ ಆಯೋಜನೆ; ಇದು ವಲಯದ ಮಾಧ್ಯಮ ರಂಗದಲ್ಲಿ ಸಹಕಾರ ಮತ್ತು ಸಂವಾದಕ್ಕೆ ಉತ್ತೇಜನ ನೀಡಿತು.

·    ಆಕಾಶವಾಣಿಯ  ಪ್ರಸಾರ (ಸ್ಟ್ರೀಮಿಂಗ್) ಸೇವೆ ಅಮೇಜಾನ್ ಅಲೆಕ್ಸಾ ಸ್ಮಾರ್ಟ್ ಸ್ಪೀಕರ್ಸ್ ನಲ್ಲಿ ಚಾಲನೆ -  ಹಳೆ ಮತ್ತು ಆಧುನಿಕ ಸ್ವರೂಪದ ಸಂವಹನದ ಸಮ್ಮಿಲನ. ಈ ಉಪಕ್ರಮವು ಭಾರತೀಯ ಸಮುದಾಯಕ್ಕೆ ಪ್ರಯೋಜನವಾಗಲಿದ್ದು, ಈಗಿನಿಂದ ವಿಶ್ವದ ಯಾವುದೇ ಭಾಗದಲ್ಲಿರುವ ಯಾವುದೇ ವ್ಯಕ್ತಿ ಅಲೆಕ್ಸಾ ಮೂಲಕ ಆಕಾಶವಾಣಿಯ ಕಾರ್ಯಕ್ರಮಗಳನ್ನು ಕೇಳಬಹುದಾಗಿದೆ.

·    ದೂರದರ್ಶನದ ಡಿ.ಎಸ್.ಎನ್.ಜಿ. ವಾಹನಗಳಿಗೆ ಹಸಿರು ನಿಶಾನೆ – ಈ 9 ಡಿ.ಎಸ್.ಎನ್.ಜಿ.ಗಳ ಪೈಕಿ ನಾಲ್ಕು ಗ್ಯಾಂಗ್ಟೋಕ್, ಕೋಹಿಮಾ, ಇಂಪಾಲ ಮತ್ತು ಅಗರ್ತಲಾಕ್ಕೆ ಸೀಮಿತವಾಗಿದ್ದು, ಈಶಾನ್ಯ ಭಾಗದ ಜನರ ಅಭಿವೃದ್ಧಿಯ ಗಾಥೆಗಳು ಹೆಚ್ಚಿನ ಜನರಿಗೆ ತಲುಪಲಿವೆ..

ಚಲನಚಿತ್ರ ವಲಯ

·    ಭಾರತ ಮತ್ತು ಇಸ್ರೇಲ್ ನಡುವೆ ಚಲನಚಿತ್ರ ಸಹ ನಿರ್ಮಾಣದ ಬಗ್ಗೆ ಒಪ್ಪಂದಕ್ಕೆ ಸಹಿ – ಕಲೆ ಮತ್ತು ಸಂಸ್ಕೃತಿಯ ಪರಸ್ಪರ ವಿನಿಮಯಕ್ಕೆ, ಅಭಿಮಾನ ರೂಪಿಸಲು, ಚಲನಚಿತ್ರ ನಿರ್ಮಾಣದ ವಿವಿಧ ಅಂಶಗಳ ಬಗ್ಗೆ ಜೊತೆಗೆ ಎರಡೂ ದೇಶಗಳ ಜನರ ನಡುವೆ ಉತ್ತಮ ತಿಳಿವಳಿಕೆ ಮೂಡಿಸಲು ಅನುವು ಮಾಡಿಕೊಡುತ್ತದೆ. ಈ ಒಪ್ಪಂದವು ಕಲಾತ್ಮಕ, ತಾಂತ್ರಿಕ ಮತ್ತು ತಾಂತ್ರಿಕವಲ್ಲದ ಸಿಬ್ಬಂದಿಯ ಉದ್ಯೋಗ ಸೃಷ್ಟಿಗೂ ನೆರವಾಗಲಿದೆ.

·    65ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಆಯೋಜನೆ –ಹಿರಿಯ ನಟ ದಿವಂಗತ ಶ್ರೀ ವಿನೋದ್ ಖನ್ನಾ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರದಾನಹೆಸರಾಂತ ತಾರೆ ದಿವಂಗತ ಶ್ರೀದೇವಿ ಅವರಿಗೆ ಮಾಮ್ ಹಿಂದಿ ಚಿತ್ರಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿ; ರಿದ್ಧಿ ಸೆನ್ ಅವರಿಗೆ ನಗರ್ ಕೀರ್ತನ್ ಗಾಗಿ ಅತ್ಯುತ್ತಮ ನಟ ಪ್ರಶಸ್ತಿ; ಅಸ್ಸಾಮಿ ಚಿತ್ರ ವಿಲೇಜ್ ರಾಕ್ ಸ್ಟಾರ್ಸ್ ಅತ್ಯುತ್ತಮ ಚಲನಚಿತ್ರ ಮತ್ತು ಬಾಹುಬಲಿಗೆ ಸಂಪೂರ್ಣ ಮನರಂಜನೆ ನೀಡಿದ ಅತ್ಯುತ್ತಮ ಜನಪ್ರಿಯ ಚಿತ್ರ; ಮಲೆಯಾಳಂ ಚಲನಚಿತ್ರ ಭಯಂಕಂಗಾಗಿ ಜೈ ರಾಜ್ ಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪ್ರದಾನ.

·    ಆಸಿಯಾನ್ ಭಾರತ ಚಿತ್ರೋತ್ಸವ  ದೆಹಲಿಯಲ್ಲಿ ಯೋಜನೆ – ಸಂಸ್ಕೃತಿಯ ವಿನಿಮಯದ ವಾಹಕವಾಗಿ ಕಾರ್ಯ ನಿರ್ವಹಿಸಿದ ಚಿತ್ರೋತ್ಸವ, ಸದಸ್ಯ ರಾಷ್ಟ್ರಗಳ ಜನರ ಅದರಲ್ಲೂ ಯುವಕರ ನಡುವೆ ಸಂಪರ್ಕಕ್ಕೆ ಅನುವು.

·    ಸಮರ್ಪಿತ ವೆಬ್ ಪೋರ್ಟಲ್  ಭಾರತದಲ್ಲಿನ ಚಿತ್ರೀಕರಣದ ತಾಣಗಳ ಬಗ್ಗೆ ಮಾಹಿತಿ ಮತ್ತು ಭಾರತದಲ್ಲಿ ಲಭ್ಯವಿರುವ ಚಲನಚಿತ್ರ ನಿರ್ಮಾಣದ ಸೌಲಭ್ಯಗಳು / ನಿರ್ಮಾಣೋತ್ತರ ಸೌಲಭ್ಯಗಳ ಬಗ್ಗೆ ಮಾಹಿತಿ ಪಸರಿಸಲು ಮತ್ತು ಭಾರತದಲ್ಲಿ ವಿದೇಶೀ ಚಿತ್ರ ತಯಾರಿಕರಿಗೆ ಆನ್ ಲೈನ್ ಮೂಲಕ ಅರ್ಜಿ ಹಾಕಿ ಚಲನಚಿತ್ರ, ರಿಯಾಲಿಟಿ ಟಿವಿ ಶೋಗಳು ಮತ್ತು ವಾಣಿಜ್ಯಾತ್ಮಕ ಟಿ.ವಿ. ಧಾರಾವಾಹಿಗಳ ಚಿತ್ರೀಕರಣಕ್ಕೆ ಅನುಮತಿ ಪಡೆಯಲು ಸೌಕರ್ಯ ಕಚೇರಿ ಪ್ರಾರಂಭಿಸಲಾಗಿದೆ.

·    ಕ್ಯಾನೇ ಚಿತ್ರೋತ್ಸವ 2018ರಲ್ಲಿ ಭಾರತೀಯ ಪೆವಿಲಿಯನ್ ಆಯೋಜನೆಭಾರತ ಮತ್ತು ಫ್ರಾನ್ಸ್ ನಡುವೆ ಸಹ-ನಿರ್ಮಾಣದ ಅವಕಾಶಗಳ ಪರಿಶೋಧನೆಯೊಂದಿಗೆ ಮೇ 2018 ರಲ್ಲಿ ಆಯೋಜನೆ. ಬರ್ಲಿನ್ ಚಿತ್ರೋತ್ಸವ (2018ರ ಫೆಬ್ರವರಿ) ಮತ್ತು ಟೊರಾಂಟೋ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (2018ರ ಸೆಪ್ಟೆಂಬರ್)ದಲ್ಲೂ ಭಾರತೀಯ ಪೆವಿಲಿಯನ್ ಆಯೋಜನೆ.

·    ಐರೋಪ್ಯ ಒಕ್ಕೂಟದ ಚಲನಚಿತ್ರೋತ್ಸವಕ್ಕೆ ಭಾರತದ ಆತಿಥ್ಯ – 23 ಐರೋಪ್ಯ ಒಕ್ಕೂಟದ ಸದಸ್ಯ ದೇಶಗಳ 24 ಇತ್ತೀಚಿನ ಐರೋಪ್ಯ ಚಲನಚಿತ್ರಗಳನ್ನು ಪ್ರದರ್ಶಿಸಲಾಯಿತು. ನವದೆಹಲಿ, ಚೆನ್ನೈ, ಪೋರ್ಟ್ ಬ್ಲೇರ್, ಪುಣೆ, ಪುದುಚೇರಿ, ಕೋಲ್ಕತ್ತಾ, ಜೈಪುರ್, ವಿಶಾಖಪಟ್ಟಣಂ, ತ್ರಿಸ್ಸೂರ್, ಹೈದ್ರಾಬಾದ್ ಮತ್ತು ಗೋವಾ ಸೇರಿದಂತೆ ಭಾರತದ 11 ನಗರಗಳಲ್ಲಿ 2018ರ ಜೂನ್ 18ರಿಂದ ಆಗಸ್ಟ್ 31ರವರೆಗೆ ಚಿತ್ರೋತ್ಸವ ಜರುಗಿತು.

·     ರೋಮ್ ಚಲನಚಿತ್ರೋತ್ಸವದ ವಿಡಿಯೋಚಿಟ್ಟ 2018ರಲ್ಲಿ ಭಾರತೀಯ ಪೆವಿಲಿಯನ್ ಆಯೋಜನೆ .  ವರ್ಚುವಲ್ ರಿಯಾಲಿಟಿವೀಡಿಯೊ ಗೇಮಿಂಗ್ಅನಿಮೇಶನ್ಚಿತ್ರ ನಿರ್ಮಾಣಇತ್ಯಾದಿಗಳ ಮೇಲೆ ಕೇಂದ್ರೀಕರಿಸುವ ಕಾರ್ಯಕ್ರಮ ವಿಡಿಯೋಚಿಟ್ಟಾ 2018ರಲ್ಲಿ ಭಾರತ ಪಾಲುದಾರ ರಾಷ್ಟ್ರವಾಗಿತ್ತು. ವಿಡಿಯೋಚಿಟ್ಟಾದ ಭಾರತೀಯ ಪೆವಿಲಿಯನ್ ಭಾರತೀಯ ಚಲನಚಿತ್ರದ ಪರಂಪರೆ, ಭಾರತದಲ್ಲಿ ಸುಗಮವಾಗಿ ಚಿತ್ರ ಪ್ರದರ್ಶನ, ಭಾರತದ ತಾಣಗಳಲ್ಲಿ ಚಿತ್ರೀಕರಣಕ್ಕೆ ಉತ್ತೇಜನ, ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ, ವಿವಿಧ ವಲಯಗಳ ಭಾರತೀಯ ಸಿನಿಮಾಗಳು ಮತ್ತು ಭಾರತ ಮತ್ತು ಇಟಲಿ ನಡುವಿನ ವಾಕ್ ಶ್ರವಣ ಸಹ ನಿರ್ಮಾಣವನ್ನು ಬಿಂಬಿಸಿತು.

·    ಗೋವಾದಲ್ಲಿ 49ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಆಯೋಜನೆ. ಚಿತ್ರೋತ್ಸವದ ವೇಳೆ ಇಸ್ರೇಲ್ ಗಮನ ಕೇಂದ್ರೀಕೃತ ರಾಷ್ಟ್ರ ಮತ್ತು ಜಾರ್ಖಂಡ್ ಗಮನ ಕೇಂದ್ರಿತ ರಾಜ್ಯವಾಗಿತ್ತು. ದಿ ಆಸ್ಪರ್ನ್ ಪೇಪರ್ಸ್ ಪ್ರಥಮ ಪ್ರದರ್ಶನದೊಂದಿಗೆ ಉತ್ಸವವು ಪ್ರಾರಂಭವಾಯಿತು. ಸೆರ್ಗೆಯ್ ಲೊಜ್ನಿಟ್ಸಾ ನಿರ್ದೇಶನದ 'ಡಾನ್ಬಾಸ್ಅಸ್ಕರ್ ಗೋಲ್ಡನ್ ಪೀಕಾಕ್ ಪ್ರಶಸ್ತಿ ಪಡೆದರೆಲಿಜೊ ಜೋಸ್ ಪೆಲ್ಲಿಸ್ಸ್ರೆ 'ಇ ಮಾ. ಯೌ ಗಾಗಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆದರುಚೆಂಬನ್ ವಿನೋದ್ ಅತ್ಯುತ್ತಮ ನಟ  ಮತ್ತು ಅನಸ್ತಾಸಿಯಾ ಪುಸ್ತೊವಿಟ್ ಅತ್ಯುತ್ತಮ ನಟಿ ಪ್ರಶಸ್ತಿಗೆ ಭಾಜನರಾದರು. ಡಾನ್ ವೋಲ್ಮನ್ ಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಲಾಯಿತು. ಚಿತ್ರಕಥೆಗಾರ ಸಲೀಮ್ ಖಾನ್ ಅವರಿಗೆ ಚಿತ್ರರಂಗಕ್ಕೆ ನೀಡಿರುವ ಜೀವಮಾನದ ಕೊಡುಗೆಗಾಗಿ ಇಫ್ಪಿ ವಿಶೇಷ ಪ್ರಶಸ್ತಿಯನ್ನು ಇಫ್ಪಿ 2018ರ ಸಮಾರೋಪ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು.

*******(Release ID: 1556942) Visitor Counter : 133