ಸಂಪುಟ
ಆರೋಗ್ಯ ಹಾಗೂ ಸೌಖ್ಯ ಕ್ಷೇತ್ರದಲ್ಲಿ ಭಾರತ ಮತ್ತು ಜಪಾನ್ ನಡುವಿನ ಸಹಕಾರ ಜ್ಞಾಪನಾ ಪತ್ರಕ್ಕೆ (MOC) ಸಂಪುಟ ಸಭೆ ಒಪ್ಪಿಗೆ
ಪ್ರಕಟಣಾ ದಿನಾಂಕ:
06 DEC 2018 9:19PM by PIB Bengaluru
ಆರೋಗ್ಯ ಹಾಗೂ ಸೌಖ್ಯ ಕ್ಷೇತ್ರದಲ್ಲಿ ಭಾರತ ಮತ್ತು ಜಪಾನ್ ನಡುವಿನ ಸಹಕಾರ ಜ್ಞಾಪನಾ ಪತ್ರಕ್ಕೆ (MOC) ಸಂಪುಟ ಸಭೆ ಒಪ್ಪಿಗೆ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಭಾರತ ಮತ್ತು ಜಪಾನ್ ದೇಶದ ಕನಗವಾ ಪ್ರಾಂತೀಯ ಆಡಳಿತಾಧಿಕಾರಿಯ ಸರಕಾರದ ನಡುವೆ ಈಗಾಗಲೇ ಆಗಿರುವ ಆರೋಗ್ಯ ಮತು ಸೌಖ್ಯ ಕ್ಷೇತ್ರದ ಸಹಕಾರ ಜ್ಞಾಪನಾ ಪತ್ರಕ್ಕೆ (MOC) ಪೂರ್ವಾನ್ವಯ ಒಪ್ಪಿಗೆ ನೀಡಿದೆ
ಅನುಷ್ಠಾನ ಹಾಗೂ ಗುರಿಗಳು
ಸಹಿ ಮಾಡಿದ ಎಂಒಸಿ ದೊರೆತ ನಂತರ ಎರಡೂ ಕಡೆಯಿಂದ ಚಟುವಟಿಕೆಗಳು ಆರಂಭವಾಗುತ್ತವೆ. ಎಂಒಸಿಯಲ್ಲಿ ಉಲ್ಲೇಖಿಸಿದ ನಿಯಮಗಳಂತೆ ಎರಡೂ ರಾಷ್ಟ್ರಗಳು ಉಪಕ್ರಮಗಳನ್ನು ತೆಗೆದುಕೊಳ್ಳುತ್ತವೆ. ಎಂಒಸಿಯು ಕಾರ್ಯಾಚರಣೆ ಸ್ಥಿತಿಯಲ್ಲಿರುವವರೆಗೆ ಇದು ಮುಂದುವರೆಯುತ್ತಿರುತ್ತದೆ.
ಪ್ರಮುಖ ಪರಿಣಾಮ
ಈ ಎಂಒಸಿಯಿಂದ ಸಾಂಪ್ರದಾಯಿಕ ಔಷಧೀಯ ವ್ಯವಸ್ಥೆಯಲ್ಲಿ ಎರಡೂ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಸಹಕಾರ ವೃದ್ಧಿಸಲಿದೆ. ಇದು ಎರಡೂ ರಾಷ್ಟ್ರಗಳಿಗೆ ಬಹುಮುಖ್ಯವಾಗಿದೆ.
ಖರ್ಚು ವೆಚ್ಚ
ಇದರಿಂದ ಹೆಚ್ಚವರಿಯಾಗಿ ಯಾವುದೇ ಖರ್ಚು ವೆಚ್ಚಗಳಿರುವುದಿಲ್ಲ. ಸಂಶೋಧನೆ, ತರಬೇತಿ ಕೋರ್ಸ್‍ಗಳು, ಸಮ್ಮೇಳನಗಳು/ ಸಭೆಗಳು ಹಾಗೂ ತಜ್ಞರ ನಿಯೋಜನೆಗಳಿಗಾಗಿ ಬೇಕಾಗುವ ಹಣಕಾಸು ಸಂಪನ್ಮೂಲಗಳು ಈಗಾಗಲೇ ನಿಗದಿಯಾಗಿರುವ ಬಜೆಟ್ ಹಾಗೂ ಆಯುಷ್ ಸಚಿವಾಲಯದ ಪ್ರಸ್ತುತ ಯೋಜನೆಗಳನುಸಾರವಾಗಿರುತ್ತವೆ.
ಹಿನ್ನಲೆ:
ಸಾಂಪ್ರಾದಾಯಿಕ ಔಷಧೀಯ ವ್ಯವಸ್ಥೆಯು ಭಾರತಕ್ಕೆ ವರಪ್ರದವಾದುದು. ಜಾಗತಿಕ ಆರೋಗ್ಯ ಸನ್ನಿವೇಶದಲ್ಲಿ ಇದು ಪ್ರಬಲ ಸಾಮಥ್ರ್ಯ ಹೊಂದಿದೆ. ಭಾರತ ಸರ್ಕಾರದ ಆಯುಷ್ ಸಚಿವಾಲಯವು ಈ ಸಾಂಪ್ರದಾಯಿಕ ವ್ಯವಸ್ಥೆಯನ್ನು ಉತ್ತೇಜಿಸಲು, ಪ್ರಚುರಗೊಳಿಸಲು ಮತ್ತು ಜಾಗತೀಕರಣಗೊಳಿಸಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿದೆ. ಸಾಂಪ್ರದಾಯಿಕ ಔಷಧ ವಲಯದಲ್ಲಿ ಸಹಕಾರಕ್ಕಾಗಿ 14 ರಾಷ್ಟ್ರಗಳೊಂದಿಗೆ ಪರಸ್ಪರ ತಿಳುವಳಿಕೆ ಪತ್ರಗಳಿಗೆ ಸಹಿ ಹಾಕಲಾಗಿದೆ.
ಭಾರತ ಮತ್ತು ಜಪಾನ್ ನಡುವಿನ ದ್ವಿಪಕ್ಷೀಯ ಸಂಬಂಧಗಳು ಆಧ್ಯಾತ್ಮಿಕ ಆಕರ್ಷಣೆ, ಬಲವಾದ ಸಾಂಸ್ಕೃತಿಕ ಹಾಗೂ ನಾಗರೀಕತೆ ಸಂಬಂಧಗಳಲ್ಲಿ ಬೇರೂರಿವೆ. ಭಾರತ ಮತ್ತು ಜಪಾನ್ ನಡುವಿನ ರಾಜಕೀಯ, ಆರ್ಥಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಅಂತರ್‍ಕ್ರಿಯೆಗಳು ಗಣನೀಯವಾಗಿವೆ. ಸಾಂಪ್ರದಾಯಿಕ ಔಷಧ ವ್ಯವಸ್ಥೆಯ ಪ್ರಬಲ ಹಿನ್ನೆಲೆ ಹೊಂದಿರುವ ಜಪಾನ್‍ನಲ್ಲಿ ಆಯುರ್ವೇದ ಮತ್ತು ಯೋಗದ ಬಗ್ಗೆ ಆಸಕ್ತಿ ಬೆಳೆಯುತ್ತಿದೆ.
(ಪ್ರಕಟಣೆ ಐ.ಡಿ.: 1555368)
ವಿಸಿಟರ್ ಕೌಂಟರ್ : 92