ಪ್ರಧಾನ ಮಂತ್ರಿಯವರ ಕಛೇರಿ
ಶ್ರೀ ಅಂಬರೀಷ್ ನಿಧನಕ್ಕೆ ಪ್ರಧಾನಿ ಸಂತಾಪ
ಪ್ರಕಟಣಾ ದಿನಾಂಕ:
25 NOV 2018 9:58AM by PIB Bengaluru
ಶ್ರೀ ಅಂಬರೀಷ್ ನಿಧನಕ್ಕೆ ಪ್ರಧಾನಿ ಸಂತಾಪ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ರೀ ಅಂಬರೀಷ್ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ
“ಶ್ರೀ ಅಂಬರೀಷ್ ಅವರು ಒಬ್ಬ ನಟನಾಗಿ ತಮ್ಮ ಸ್ಮರಣೀಯ ಪ್ರದರ್ಶನದಿಂದ ಮತ್ತು ರಾಜಕಾರಣಕ್ಕೆ ನೀಡಿರುವ ಅಪಾರ ಕೊಡುಗೆಯಿಂದ ಸದಾ ನೆನಪಿನಲ್ಲಿರುತ್ತಾರೆ. ಅವರು ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಕರ್ನಾಟಕದ ಕಲ್ಯಾಣಕ್ಕೆ ಗಟ್ಟಿ ದನಿಯಾಗಿದ್ದರು. ಅವರ ನಿಧನದಿಂದ ದುಃಖಿತನಾಗಿದ್ದೇನೆ. ಅವರ ಕುಟುಂಬದವರಿಗೆ ಮತ್ತು ಅಭಿಮಾನಿಗಳಿಗೆ ಸಂತಾಪ ಸೂಚಿಸುವೆ”.ಎಂದುಪ್ರಧಾನಿ ತಿಳಿಸಿದ್ದಾರೆ.
***
(ಪ್ರಕಟಣೆ ಐ.ಡಿ.: 1553810)
ವಿಸಿಟರ್ ಕೌಂಟರ್ : 101