ಪ್ರಧಾನ ಮಂತ್ರಿಯವರ ಕಛೇರಿ

ಪಶ್ಚಿಮ ಬಾಹ್ಯ ವೇಗಗತಿ ಹೆದ್ದಾರಿಯ ಕುಂಡ್ಲಿ - ಮನೆಸಾರ್ ವಿಭಾಗ ಮತ್ತು ಬಲ್ಲಭಘರ್ –ಮೆಟ್ರೊ ಸಂಪರ್ಕವನ್ನು ಪ್ರಧಾನಮಂತ್ರಿ ಉದ್ಘಾಟಿಸಿದರು 

Posted On: 19 NOV 2018 7:04PM by PIB Bengaluru

ಪಶ್ಚಿಮ ಬಾಹ್ಯ ವೇಗಗತಿ ಹೆದ್ದಾರಿಯ ಕುಂಡ್ಲಿ - ಮನೆಸಾರ್ ವಿಭಾಗ ಮತ್ತು ಬಲ್ಲಭಘರ್ –ಮೆಟ್ರೊ ಸಂಪರ್ಕವನ್ನು ಪ್ರಧಾನಮಂತ್ರಿ ಉದ್ಘಾಟಿಸಿದರು 
 

ಹರ್ಯಾಣದ ಗುರುಗ್ರಾಮದ ಸುಲ್ತಾನಪುರದಲ್ಲಿ ಕುಂಡ್ಲಿ – ಮನೆಸಾರ್ - ಪಲ್ವಾಲ್  ( ಕೆ.ಎಮ್.ಪಿ.) ಪಶ್ಚಿಮ ಬಾಹ್ಯ ವೇಗಗತಿಹೆದ್ದಾರಿಯ ಕುಂಡ್ಲಿ – ಮನೆಸಾರ್ ವಿಭಾಗ ಮತ್ತು ಬಲ್ಲಭಘರ್ –ಮೆಟ್ರೊ ಸಂಪರ್ಕವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉದ್ಘಾಟಿಸಿದರು.  ಬಳಿಕ  ಶ್ರೀ ವಿಶ್ವಕರ್ಮ ಕೌಶಲ್ಯ ವಿಶ್ವವಿದ್ಯಾಲಯಕ್ಕೆ ಶಂಕುಸ್ಥಾಪನೆಗೈದರು.

ಬೃಹತ್ ಸಭಿಕರನ್ನದ್ಧೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು, ವೇಗಗತಿಯ ಹೆದ್ದಾರಿ ಮತ್ತು ಮೆಟ್ರೋ ಸಂಪರ್ಕಗಳು ಹರ್ಯಾಣದ ಸಾರಿಗೆ ಕ್ರಾಂತಿಯ ಮಾರ್ಗದರ್ಶಕಗಳಾಗಲಿವೆ ಎಂದು ಹೇಳಿದರು. ಶ್ರೀ ವಿಶ್ವಕರ್ಮ ಕೌಶಲ್ಯ ವಿಶ್ವವಿದ್ಯಾಲಯದಿಂದ ಈ ಪ್ರದೇಶದ ಯುವಜನಾಂಗಕ್ಕೆ ಅಗಾಧ ಪ್ರಮಾಣದಲ್ಲಿ ಪ್ರಯೋಜನವಾಗಲಿದೆ ಎಂದು ಪ್ರಧಾನಮಂತ್ರಿ  ಈ ಸಂದರ್ಭದಲ್ಲಿ ಹೇಳಿದರು.   

ಕೆ.ಎಮ್.ಪಿ. ವೇಗಗತಿ ಹೆದ್ದಾರಿ ಯೋಜನೆಯನ್ನು ಕೇಂದ್ರ ಸರಕಾರ  ಆದ್ಯತೆಯ ಆಧಾರದಲ್ಲಿ ಪೂರ್ಣಗೊಳಿಸುವ ಆಶ್ವಾಸನೆ ನೀಡಿದೆ.  ಈ ವೇಗಗತಿ ಹೆದ್ದಾರಿಯು ದೆಹಲಿ ಮತ್ತು ಆಸುಪಾಸಿನ   ಪ್ರದೇಶಗಳಲ್ಲಿ ವಾಯುಮಾಲಿನ್ಯವನ್ನು ಕಡಿಮೆಗೊಳಿಸುವಲ್ಲಿ ಪ್ರಧಾನಪಾತ್ರ ವಹಿಸಲಿದೆ.  ಸರಳ ಜೀವನದ  ಜೊತೆಯಲ್ಲಿ ಪರಿಸರಸ್ನೇಹಿ  ಪ್ರಯಾಣವೂ ಇದರಿಂದ ಸಾಧ್ಯವಾಗಲಿದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು

ಸಾರಿಗೆ  ವ್ಯವಸ್ಥೆಯು, ಪ್ರಗತಿ, ಸಬಲೀಕರಣ ಮತ್ತು ಲಭ್ಯತೆಯ ಸಾಧ್ಯತೆಗಳಿಗೆ ಮಾಧ್ಯಮವಾಗಿವೆ.  ಹೆದ್ದಾರಿಗಳು, ಮೆಟ್ರೋಗಳು ಮತ್ತು ಜಲಮಾರ್ಗಗಳು ಪರಿಸರಪೂರಕ ವ್ಯವಸ್ಥೆಗಳಲ್ಲಿ ನಿರ್ಮಾಣವಾಗುವುದರಿಂದಾಗಿ, ವಿಶೇಷವಾಗಿ ಉತ್ಪಾದನೆ, ನಿರ್ಮಾಣ ಮತ್ತು ಸೇವಾ ಕ್ಷೇತ್ರಗಳಲ್ಲಿ ಉದ್ಯೋಗ ಸೃಷ್ಠಿಯ ಅವಕಾಶವಾಗುತ್ತದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು. 2014ರ ಪ್ರತಿದಿನದ 12ಕಿಮೀ ಹೆದ್ದಾರಿ ನಿರ್ಮಾಣಕ್ಕೆ ತುಲನೆ ಮಾಡಿದಾಗ, ಇಂದು ಪ್ರತಿದಿನ ಸರಾಸರಿ 27ಕಿಮೀ ಹೆದ್ದಾರಿಗಳ ನಿರ್ಮಾಣವಾಗುತ್ತಿದೆ. ಇದು ಭಾರತವನ್ನು ಪರಿವರ್ತನೆಗೊಳಿಸುವ   ಕೇಂದ್ರ ಸರಕಾರದ ಸಂಕಲ್ಪ ಯೋಜನೆ ಹಾಗೂ  ಇಚ್ಛಾಶಕ್ತಿಯನ್ನು ಸ್ಪಷ್ಟವಾಗಿ ತೋರಿಸುತ್ತದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು.

ದೇಶದ ಯುವಜನಾಂಗದ ಆಶೋತ್ತರಗಳನ್ನು ಪೂರೈಸುವ ನಿಟ್ಟಿನಲ್ಲಿ ಸರಕಾರವ ಬದ್ಧವಾಗಿದೆ. ಹೊಸ ಅವಕಾಶಗಳನ್ನು ಪಡೆಯುವ ನಿಟ್ಟಿನಲ್ಲಿ ಯುವಜನಾಂಗವನ್ನು  ಪರಿಣಿತರನ್ನಾಗಿಸುವಲ್ಲಿ ಶ್ರೀ ವಿಶ್ವಕರ್ಮ ಕೌಶಲ್ಯ ವಿಶ್ವವಿದ್ಯಾಲಯವು ಪ್ರಮುಖಪಾತ್ರವಹಿಸಲಿದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು.

ಕೇಂದ್ರ ಸರಕಾರದ ಸಂಕಲ್ಪ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವಲ್ಲಿ ಹರ್ಯಾಣ ರಾಜ್ಯ ಸರಕಾರದ ಪ್ರಯತ್ನಗಳ ಬಗ್ಗೆ ಪ್ರಧಾನಮಂತ್ರಿ ಅವರು ಪ್ರಶಂಸೆ ವ್ಯಕ್ತಪಡಿಸಿದರು. ಹರ್ಯಾಣದ ಯುವಕರು ದೇಶಕ್ಕೆ, ಅದರಲ್ಲೂ ವಿಶೇಷವಾಗಿ ಕ್ರೀಡಾಕ್ಷೇತ್ರದಲ್ಲಿ, ನೀಡಿರುವ  ಕೊಡುಗೆಗಳನ್ನು ಪ್ರಧಾನಮಂತ್ರಿ ಅವರು ಈ ಸಂದರ್ಭದಲ್ಲಿ ಶ್ಲಾಘಿಸಿದರು. 

 

*******



(Release ID: 1553247) Visitor Counter : 76