ಪ್ರಧಾನ ಮಂತ್ರಿಯವರ ಕಛೇರಿ

ವಾರಣಾಸಿಯಲ್ಲಿ ಪ್ರಧಾನಮಂತ್ರಿ: ಬಹು ಮಾದರಿ ನಿಲ್ದಾಣವನ್ನು ದೇಶಾರ್ಪಣೆ ಮಾಡಿದರು; ಬೃಹತ್ ರಸ್ತೆ ಯೋಜನೆಗಳನ್ನು ಉದ್ಘಾಟಿಸಿದರು

Posted On: 12 NOV 2018 9:19PM by PIB Bengaluru

ವಾರಣಾಸಿಯಲ್ಲಿ ಪ್ರಧಾನಮಂತ್ರಿ: ಬಹು ಮಾದರಿ ನಿಲ್ದಾಣವನ್ನು ದೇಶಾರ್ಪಣೆ ಮಾಡಿದರು; ಬೃಹತ್ ರಸ್ತೆ ಯೋಜನೆಗಳನ್ನು ಉದ್ಘಾಟಿಸಿದರು

 

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಾರಣಾಸಿಗೆ ಭೇಟಿ ನೀಡಿದರು. 

 

ಪ್ರಧಾನಮಂತ್ರಿ ರೂ 2400 ಕೋಟಿಗೂ ಅಧಿಕ ಮೌಲ್ಯದ ಯೋಜನೆಗಳ ಶಂಕುಸ್ಥಾಪನೆ, ಉದ್ಘಾಟನೆ ಮತ್ತು ದೇಶಾರ್ಪಣೆ ಮಾಡಿದರು. 

 

ಗಂಗಾ ನದಿಯ ಮೇಲೆ ನಿರ್ಮಿಸಲಾದ ಬಹು ಮಾದರಿ ನಿಲ್ದಾಣವನ್ನು ದೇಶಾರ್ಪಣೆ ಮಾಡಿದರು ಮತ್ತು ಪ್ರಥಮ ಸರಕು ಹಡಗನ್ನು ಸ್ವಾಗತಿಸಿದರು. ವಾರಣಾಸಿ ವರ್ತುಲ ರಸ್ತೆಯ ಮೊದಲ ಹಂತವನ್ನು ಮತ್ತು ರಾ.ಹೆ. 56ರ ವಾರಣಾಸಿ-ಬಬತ್ಪುರ್ ವಿಭಾಗದಲ್ಲಿ ನಿರ್ಮಿಸಿ ,  ಅಭಿವೃದ್ಧಿಪಡಿಸಿದ ಚತುಷ್ಪಥಗಳನ್ನು ಉದ್ಘಾಟಿಸಿದರು.  ಬಳಿಕ ವಾರಣಾಸಿಯಲ್ಲಿ ಇತರ ವಿವಿಧ ಅಭಿವೃದ್ಧಿ ಯೋಜನೆಗಳ ಶಂಕುಸ್ಫಾಪನೆ ಮತ್ತು ಉದ್ಘಾಟನೆ ನೆರವೇರಿಸಿದರು.

 

ಉತ್ಸಾಹಿತ ಬೃಹತ ಸಭೆಯನ್ನುದ್ಧೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು,  ಕಾಶಿಗೆ, ಪೂರ್ವಾಂಚಲಕ್ಕೆ, ಪೂರ್ವಭಾರತಕ್ಕೆ ಮತ್ತು ಸಂಪೂರ್ಣ ಭಾರತಕ್ಕೆ ಇಂದು ಐತಿಹಾಸಿಕ ದಿನವಾಗಿದೆ ಎಂದು ಹೇಳಿದರು. ಇಂದು ಆಗುತ್ತಿರುವ ಅಭಿವೃದ್ಧಿ ಕಾರ್ಯಗಳು, ನಿಜವಾಗಿಯೂ ದಶಕಗಳ ಹಿಂದೆಯೇ ಆಗಬೇಕಿತ್ತು ಎಂದು ಪ್ರಧಾನಮಂತ್ರಿ ಹೇಳಿದರು. ಮುಂದಿನ ಜನಾಂಗದ ಮೂಲಸೌಕರ್ಯಗಳು ಯಾವರೀತಿ ಸಾರಿಗೆ ವ್ಯವಸ್ಥೆಗಳನ್ನು ಸುಧಾರಣೆ ಮಾಡುತ್ತವೆ ಎಂಬುದಕ್ಕೆ ವಾರಣಾಸಿಯ ಜತೆ ಸಂಪೂರ್ಣ ದೇಶವಿಂದು ಸಾಕ್ಷಿಯಾಗಿದೆ.  

 

ವಾರಣಾಸಿಗೆ ಬಂದ ಪ್ರಪ್ರಥಮ ಒಳನಾಡ ಸರಕು ಹಡಗನ್ನುದ್ಧೇಶಿಸಿ ಪ್ರಧಾನಮಂತ್ರಿ ಅವರು  ಪೂರ್ವ ಉತ್ತರ ಪ್ರದೇಶವೀಗ ಜಲಮಾರ್ಗವಾಗಿ ಬಂಗಾಳಕೊಲ್ಲಿಗೆ ಸಂಪರ್ಕ ಹೊಂದಿದೆ ಎಂದು ಹೇಳಿದರು 

 

ಇಂದು ಉದ್ಘಾಟನೆಗೊಂಡ ಅಥವಾ ಶಂಕುಸ್ಥಾಪನೆ ಮಾಡಿರುವ ರಸ್ತೆಗಳು ಮತ್ತು ನಮಾಮಿ ಗಂಗೆ ಸಂಬಂಧಿತ ಯೋಜನೆಗಳು ಸೇರಿದಂತೆ ಇತರ ವಿವಿಧ ಯೋಜನೆಗಳನ್ನು ಪ್ರಧಾನಮಂತ್ರಿ ಅವರು ಉಲ್ಲೇಖಿಸಿದರು. 

 

ಒಳನಾಡು ಜಲಮಾರ್ಗಗಳು ಹಣ ಮತ್ತು ಸಮಯವನ್ನು ಉಳಿಸುತ್ತವೆ, ರಸ್ತೆ ದಟ್ಟಣೆ ಕಡಿಮೆ ಮಾಡುತ್ತದೆ, ಇಂಧನ ವೆಚ್ಚ ಕಡಿಮೆ ಮಾಡುತ್ತದೆ ಮತ್ತು ವಾಹನಗಳಿಂದಾಗುವ ಪರಿಸರ ಮಾಲಿನ್ಯವನ್ನೂ ಕಡಿಮೆ ಮಾಡುತ್ತದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು. 

 

ವಾರಣಾಸಿಯಿಂದ ಬಬತ್ಪುರ್ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ರಸ್ತೆಯು ಪ್ರಯಾಣಿಕರಿಗೆ ಉತ್ತಮ ಸೌಕರ್ಯ ನೀಡುತ್ತದೆ ಮಾತ್ರವಲ್ಲದೆ ಪ್ರವಾಸಿಗರ ಆಕರ್ಷಣೀಯ ತಾಣವಾಗುತ್ತಿದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು. 

 

ಕಳೆದ ನಾಲ್ಕು ವರ್ಷಗಳಲ್ಲಿ ಅಧುನಿಕ ಮೂಲಸೌಕರ್ಯಗಳನ್ನು ಕ್ಷಿಪ್ರ ವೇಗದಲ್ಲಿ ನಿರ್ಮಿಸಲಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಸಂಪರ್ಕ ರಹಿತ ಪ್ರದೇಶಗಳಿಗೆ ವಿಮಾನಸಂಪರ್ಕ  , ಈಶಾನ್ಯಭಾರತದ ಪ್ರದೇಶಗಳಿಗೆ ರೈಲ್ವೇ ಸಂಪರ್ಕಗಳು, ಗ್ರಾಮೀಣ ರಸ್ತೆಗಳು ಮತ್ತು ಹೆದ್ದಾರಿಗಳು ಇಂದು  ಕೇಂದ್ರ ಸರಕಾರದ ಗುರುತಿನ ಅಂಗಗಳಾಗಿವೆ ಎಂದು ಪ್ರಧಾನಮಂತ್ರಿ ಹೇಳಿದರು.

 

ನಮಾಮಿ ಗಂಗೆಯಡಿ ರೂ 23,000 ಕೋಟಿ ಮೌಲ್ಯದ ಯೋಜನೆಗಳು ಅನುಮೋದನೆಗೊಂಡಿವೆ ಎಂದು ಪ್ರಧಾನಮಂತ್ರಿ ಹೇಳಿದರು. ಗಂಗಾನದಿ ತಟದ ಬಹುತೇಕ ಗ್ರಾಮಗಳೆಲ್ಲಾ ಇಂದು ಬಯಲು ಬಹಿರ್ದೆಶೆ ಮುಕ್ತವಾಗಿವೆ ಎಂದು ಪ್ರಧಾನಮಂತ್ರಿ ಹೇಳಿದರು. ಈ ಯೋಜನೆಗಳೆಲ್ಲಾ ಕೇಂದ್ರ ಸರಕಾರದ ಗಂಗಾ ನದಿಯನ್ನು ಶುಚಿಗೊಳಿಸುವ ಬದ್ಧತೆಯ ಅಂಗವಾಗಿವೆ ಎಂದು ಪ್ರಧಾನಮಂತ್ರಿ ಹೇಳಿದರು. 



(Release ID: 1552678) Visitor Counter : 99