ಸಂಪುಟ

ಭಾರತ ಮತ್ತು ಮೊರಕ್ಕೋ ನಡುವೆ ಅಪರಾಧಿಗಳ ಹಸ್ತಾಂತರ ಒಪ್ಪಂದಕ್ಕೆ ಸಹಿ ಹಾಕಲು ಮತ್ತು ಸ್ಥಿರೀಕರಿಸಲು ಸಂಪುಟದ ಅನುಮೋದನೆ

Posted On: 08 NOV 2018 8:44PM by PIB Bengaluru

ಭಾರತ ಮತ್ತು ಮೊರಕ್ಕೋ ನಡುವೆ ಅಪರಾಧಿಗಳ ಹಸ್ತಾಂತರ ಒಪ್ಪಂದಕ್ಕೆ ಸಹಿ ಹಾಕಲು ಮತ್ತು ಸ್ಥಿರೀಕರಿಸಲು ಸಂಪುಟದ ಅನುಮೋದನೆ

 

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ ಭಾರತ ಮತ್ತು ಮೊರಕ್ಕೋ ನಡುವೆ ಅಪರಾಧಿಗಳ ಹಸ್ತಾಂತರ ಒಪ್ಪಂದಕ್ಕೆ ಅಂಕಿತ ಹಾಕಲು ಮತ್ತು ಸ್ಥಿರೀಕರಿಸಲು ತನ್ನ ಅನುಮೋದನೆಯನ್ನು ನೀಡಿದೆ. ಈ ಒಪ್ಪಂದಕ್ಕೆ 2018ರ ನವೆಂಬರ್ 11-18ರವರೆಗೆ ಮೊರಕ್ಕೋದ ಗಣ್ಯರ ಉದ್ದೇಶಿತ ಭೇಟಿಯ ವೇಳೆ ಸಹಿ ಹಾಕಲಾಗುವುದು.

 

 

ಪ್ರಯೋಜನಗಳು:

 

ಒಪ್ಪಂದ ಮಾಡಿಕೊಂಡ ಒಂದು ರಾಷ್ಟ್ರದಲ್ಲಿ ಆರ್ಥಿಕ ಅಪರಾಧಗಳು, ಭಯೋತ್ಪಾದನೆ ಮತ್ತು ಇತರ ಗಂಭೀರ ಸ್ವರೂಪದ ಅಪರಾಧಗಳಲ್ಲಿ ಆರೋಪ ಹೊತ್ತು ಮತ್ತೊಂದು ರಾಷ್ಟ್ರದಲ್ಲಿ ಪತ್ತೆಯಾಗುವ ದೇಶತೊರೆದ ಅಪರಾಧಿಗಳ ಹಸ್ತಾಂತರಕ್ಕೆ ಈ ಒಪ್ಪಂದ ಬಲವಾದ ಕಾನೂನು ನೆಲೆ ಒದಗಿಸಲಿದೆ. ಈ ಒಪ್ಪಂದವು ಭಾರತ ಮತ್ತು ಮೊರಾಕ್ಕೋ ಎರಡೂ ರಾಷ್ಟ್ರಗಳ ಹಿತಾಸಕ್ತಿಗೆ ವಿರುದ್ಧವಾಗಿ ವರ್ತಿಸುವ ಘಾತುಕ ಶಕ್ತಿಗಳನ್ನು ನಿಗ್ರಹಿಸುವ ದ್ವಿಪಕ್ಷೀಯ ಸಂಬಂಧಗಳನ್ನೂ ಬಲಪಡಿಸುತ್ತದೆ. 

 

*****   



(Release ID: 1552222) Visitor Counter : 70