ಸಂಪುಟ

ವಿಶ್ವಸಂಸ್ಥೆಯ ಸದಸ್ಯರಾಗಿರುವ ಎಲ್ಲ ರಾಷ್ಟ್ರಗಳಿಗೆ ಐ.ಎಸ್.ಎ. ಸದಸ್ಯತ್ವವನ್ನು ಮುಕ್ತಗೊಳಿಸಲು ಅಂತಾರಾಷ್ಟ್ರೀಯ ಸೌರ ಒಕ್ಕೂಟ (ಐ.ಎಸ್.ಎ. )ದ ಚೌಕಟ್ಟು ಒಪ್ಪಂದ ತಿದ್ದುಪಡಿಗಾಗಿ ಐ.ಎಸ್.ಎ. ಪ್ರಥಮ ಅಧಿವೇಶನದಲ್ಲಿ ನಿರ್ಣಯ ಮಂಡಿಸಲು ಸಂಪುಟದ ಅನುಮೋದನೆ

Posted On: 01 NOV 2018 11:39AM by PIB Bengaluru

ವಿಶ್ವಸಂಸ್ಥೆಯ ಸದಸ್ಯರಾಗಿರುವ ಎಲ್ಲ ರಾಷ್ಟ್ರಗಳಿಗೆ ಐ.ಎಸ್.ಎ. ಸದಸ್ಯತ್ವವನ್ನು ಮುಕ್ತಗೊಳಿಸಲು ಅಂತಾರಾಷ್ಟ್ರೀಯ ಸೌರ ಒಕ್ಕೂಟ (ಐ.ಎಸ್.ಎ. )ದ ಚೌಕಟ್ಟು ಒಪ್ಪಂದ ತಿದ್ದುಪಡಿಗಾಗಿ ಐ.ಎಸ್.ಎ. ಪ್ರಥಮ ಅಧಿವೇಶನದಲ್ಲಿ ನಿರ್ಣಯ ಮಂಡಿಸಲು ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ವಿಶ್ವಸಂಸ್ಥೆಯ ಸದಸ್ಯರಾಗಿರುವ ಎಲ್ಲ ರಾಷ್ಟ್ರಗಳಿಗೆ ಐ.ಎಸ್.ಎ. ಸದಸ್ಯತ್ವವನ್ನು ಮುಕ್ತಗೊಳಿಸಲು ಐ.ಎಸ್.ಎ.ಯ ಚೌಕಟ್ಟು ಒಪ್ಪಂದ ತಿದ್ದುಪಡಿಗಾಗಿ ಅಂತಾರಾಷ್ಟ್ರೀಯ ಸೌರ ಒಕ್ಕೂಟ  (ಐ.ಎಸ್.ಎ.)ದ ಪ್ರಥಮ ಅಧಿವೇಶನದಲ್ಲಿ ನಿರ್ಣಯ ಮಂಡಿಸಲು ತನ್ನ ಪೂರ್ವಾನ್ವಯ ಅನುಮೋದನೆ ನೀಡಿದೆ.

ಪ್ರಯೋಜನಗಳು :

ಐ.ಎಸ್.ಎ.ಯ ಸದಸ್ಯತ್ವವನ್ನು ಮುಕ್ತಗೊಳಿಸುವುದರಿಂದ ಸೌರಶಕ್ತಿಯನ್ನು ಅಭಿವೃದ್ಧಿಪಡಿಸಲು ಮತ್ತು ನಿಯುಕ್ತಿಗೊಳಿಸಲು ಸಾರ್ವತ್ರಿಕ ಮನವಿಯೊಂದಿಗೆ ಸೌರ ಶಕ್ತಿಯನ್ನು ಜಾಗತಿಕ ಕಾರ್ಯಕ್ರಮದಲ್ಲಿ ಸೇರುವಂತೆ ಮಾಡುತ್ತದೆ. ವಿಶ್ವ ಸಂಸ್ಥೆಯ ಸದಸ್ಯರಾಗಿರುವ  ಎಲ್ಲ ಸದಸ್ಯ ರಾಷ್ಟ್ರಗಳೂ ಐ.ಎಸ್.ಎ. ಸದಸ್ಯರಾಗಲು ಅವಕಾಶ ನೀಡುವ ಮೂಲಕ ಇದು ಐ.ಎಸ್.ಎ.ಯನ್ನು ಸಮಗ್ರಗೊಳಿಸುತ್ತದೆ, ಸದಸ್ಯತ್ವದ ವಿಸ್ತರಣೆಯು ಐ.ಎಸ್.ಎ. ಉಪಕ್ರಮದ ಲಾಭ ಜಗತ್ತಿಗೆ ದೊರಕುವಂತೆ ಮಾಡುತ್ತದೆ.

(Release ID: 1551677) Visitor Counter : 281