ಪ್ರಧಾನ ಮಂತ್ರಿಯವರ ಕಛೇರಿ

ಅಕ್ಟೋಬರ್ 12ರಂದು ಎನ್.ಎಚ್.ಆರ್.ಸಿ. ಸಂಸ್ಥಾಪನಾ ದಿನದ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಲಿರುವ ಪ್ರಧಾನಮಂತ್ರಿ 

प्रविष्टि तिथि: 11 OCT 2018 5:36PM by PIB Bengaluru

ಅಕ್ಟೋಬರ್ 12ರಂದು ಎನ್.ಎಚ್.ಆರ್.ಸಿ. ಸಂಸ್ಥಾಪನಾ ದಿನದ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಲಿರುವ ಪ್ರಧಾನಮಂತ್ರಿ 
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಕ್ಟೋಬರ್ 12ರಂದು ನವ ದೆಹಲಿಯಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್.ಎಚ್.ಆರ್.ಸಿ.) ಸಂಸ್ಥಾಪನಾ ದಿನದ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. 

ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಅಂಚೆ ಚೀಟಿ ಮತ್ತು ವಿಶೇಷ ಲಕೋಟೆ ಬಿಡುಗಡೆ ಮಾಡಲಿದ್ದಾರೆ. ಎನ್.ಎಚ್.ಆರ್.ಸಿ. ಅಂತರ್ಜಾಲತಾಣದ ಹೊಸ ಆವೃತ್ತಿಗೂ ಚಾಲನೆ ನೀಡಲಿದ್ದಾರೆ. ಈ ಹೊಸ ವೆಬ್ ಸೈಟ್ ಹೆಚ್ಚು ಬಳಕೆದಾರ ಸ್ನೇಹಿಯಾಗಿದೆ ಮತ್ತು ವಿಶೇಷ ಅಗತ್ಯ ಇರುವ ವ್ಯಕ್ತಿಗಳಿಗೂ ಸುಲಭ ಪ್ರವೇಶಾವಕಾಶಹೊಂದಿದೆ. 

ಪ್ರಧಾನಮಂತ್ರಿಯವರು ಸಭೆಯನ್ನುದ್ದೇಶಿ ಭಾಷಣವನ್ನೂ ಮಾಡಲಿದ್ದಾರೆ. 


(रिलीज़ आईडी: 1549677) आगंतुक पटल : 97
इस विज्ञप्ति को इन भाषाओं में पढ़ें: Assamese , English , Marathi , Bengali , Gujarati , Tamil