ಸಂಪುಟ

ರಾಷ್ಟ್ರೀಯ ಡಿಜಿಟಲ್ ಸಂವಹನ ನೀತಿ – 2018ಕ್ಕೆ ಸಂಪುಟ ಅಂಗೀಕಾರ ಪ್ರತಿಯೊಬ್ಬ ಪ್ರಜೆಗೂ 50 ಎಂಬಿಪಿಎಸ್ ಒದಗಿಸುವ ಸುರಕ್ಷಿತ ಭಾರತ ಸಮಗ್ರ ಬ್ರಾಡ್ ಬ್ಯಾಂಡ್ ಸಂಪರ್ಕ ಕಲ್ಪಿಸುವುದು: ಅಂತರ್ಜಾಲ ಸಂಪರ್ಕವಿಲ್ಲದ ಎಲ್ಲ ಪ್ರದೇಶಗಳನ್ನು ಒಳಗೊಂಡಂತೆ ಎಲ್ಲ ಗ್ರಾಮ ಪಂಚಾಯಿತಿಗಳಿಗೆ ಒಂದು ಜಿಬಿಪಿಎಸ್ ಒದಗಿಸುವುದು; ಡಿಜಿಟಲ್ ಸಂವಹನ ವಲಯದಲ್ಲಿ ನೂರು ಬಿಲಿಯನ್ ಅಮೆರಿಕನ್ ಡಾಲರ್ ಬಂಡವಾಳ ಆಕರ್ಷಿಸುವುದು

Posted On: 26 SEP 2018 4:03PM by PIB Bengaluru

ರಾಷ್ಟ್ರೀಯ ಡಿಜಿಟಲ್ ಸಂವಹನ ನೀತಿ – 2018ಕ್ಕೆ ಸಂಪುಟ ಅಂಗೀಕಾರ 

ಪ್ರತಿಯೊಬ್ಬ ಪ್ರಜೆಗೂ 50 ಎಂಬಿಪಿಎಸ್ ಒದಗಿಸುವ ಸುರಕ್ಷಿತ ಭಾರತ ಸಮಗ್ರ ಬ್ರಾಡ್ ಬ್ಯಾಂಡ್ ಸಂಪರ್ಕ ಕಲ್ಪಿಸುವುದು: ಅಂತರ್ಜಾಲ ಸಂಪರ್ಕವಿಲ್ಲದ ಎಲ್ಲ ಪ್ರದೇಶಗಳನ್ನು ಒಳಗೊಂಡಂತೆ ಎಲ್ಲ ಗ್ರಾಮ ಪಂಚಾಯಿತಿಗಳಿಗೆ ಒಂದು ಜಿಬಿಪಿಎಸ್ ಒದಗಿಸುವುದು; ಡಿಜಿಟಲ್ ಸಂವಹನ ವಲಯದಲ್ಲಿ ನೂರು ಬಿಲಿಯನ್ ಅಮೆರಿಕನ್ ಡಾಲರ್ ಬಂಡವಾಳ ಆಕರ್ಷಿಸುವುದು 
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ  ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಷ್ಟ್ರೀಯ ಡಿಜಿಟಲ್ ಸಂವಹನ ನೀತಿ-2018(ಎನ್ ಡಿ ಸಿ ಪಿ-2018)ಅನ್ನು ಮತ್ತು ದೂರಸಂಪರ್ಕ ಆಯೋಗವನ್ನು ‘ಡಿಜಿಟಲ್ ಸಂವಹನ ಆಯೋಗ’ವನ್ನಾಗಿ ಮರುವಿನ್ಯಾಸಗೊಳಿಸಲು ಅನುಮೋದನೆ ನೀಡಲಾಯಿತು.

ಪರಿಣಾಮ

ಈ ಎನ್ ಡಿ ಸಿ ಪಿ – 2018 ಅಡಿಯಲ್ಲಿ ಭಾರತವನ್ನು ಡಿಜಿಟಲ್ ಸಬಲೀಕರಣ ಆರ್ಥಿಕ ಹಾಗೂ ಸಾಮಾಜಿಕವಾಗಿ ಪರಿವರ್ತನೆಗೊಳಿಸುವ ಉದ್ದೇಶ ಹೊಂದಿದೆ. ಆ ಮೂಲಕ ಜನರ ಸಂವಹನ ಮತ್ತು ಮಾಹಿತಿಯ ಅಗತ್ಯತೆಗಳನ್ನು ಪೂರೈಸುವುದು ಮತ್ತು ಡಿಜಿಟಲ್ ಮೂಲಸೌಕರ್ಯ ಹಾಗೂ ಸೇವೆಗಳನ್ನು ಕೈಗೆಟಕುವ ದರದಲ್ಲಿ ಅನಿಯಂತ್ರಿತ ರೀತಿಯಲ್ಲಿ ಒದಗಿಸುವುದು.

‘ಗ್ರಾಹಕ ಕೇಂದ್ರಿತ’ ಮತ್ತು ಅನ್ವಯಿಕ ಆಧಾರಿತ ಎನ್ ಡಿ ಸಿ ಪಿ – 2018 ಅಡಿಯಲ್ಲಿ ಹೊಸ ಚಿಂತನೆಗಳು ಮತ್ತು ಆವಿಷ್ಕಾರಗಳಿಗೆ ಅವಕಾಶವಿದ್ದು, ಇದರಡಿ 5ಜಿ, ಐಓಟಿ,ಎಂ2ಎಂ ಮತ್ತಿತರ ಆಧುನಿಕ ತಂತ್ರಜ್ಞಾನಗಳನ್ನು ಪರಿಚಯಿಸಿದ ನಂತರ ಅವು ಭಾರತದ ದೂರಸಂಪರ್ಕ ವಲಯವನ್ನು ಆಳಲಿವೆ.

ಉದ್ದೇಶ :

            ಈ ನೀತಿಯ ಪ್ರಮುಖ ಧ್ಯೇಯೋದ್ದೇಶಗಳೆಂದರೆ

  1. ಎಲ್ಲರಿಗೂ ಬ್ರಾಡ್ ಬ್ಯಾಂಡ್ ಸೇವೆ ನೀಡುವುದು.
  2. ಡಿಜಿಟಲ್ ಸಂವಹನ ವಲಯದಲ್ಲಿ ಹೆಚ್ಚುವರಿಯಾಗಿ 4 ಮಿಲಿಯನ್ ಉದ್ಯೋಗಗಳನ್ನು ಸೃಷ್ಟಿಸುವುದು.
  3. ಭಾರತದ ಜಿಡಿಪಿಗೆ ಡಿಜಿಟಲ್ ಸಂವಹನ ವಲಯ 2017ರಲ್ಲಿ ಶೇಕಡ 6ರಷ್ಟು ಕೊಡುಗೆ ನೀಡಿದ್ದು, ಇದನ್ನು ಶೇಕಡ 8ಕ್ಕೆ ಹೆಚ್ಚಿಸುವ ಗುರಿ ಇದೆ.
  4. ಐಸಿಟಿ ಅಭಿವೃದ್ಧಿ ಸೂಚ್ಯಂಕದಲ್ಲಿ ಭಾರತ ಜಾಗತಿಕ ಮಟ್ಟದಲ್ಲಿ 2017ರಲ್ಲಿ 134ನೇ ಸ್ಥಾನದಲ್ಲಿತ್ತು. ಅದನ್ನು ಅಗ್ರ 50 ರಾಷ್ಟ್ರಗಳ ಸಾಲಿಗೆ ತರುವುದು.
  5. ಜಾಗತಿಕ ಮೌಲ್ಯ ಸರಣಿಗೆ ಭಾರತದ ಕೊಡುಗೆಯನ್ನು ಹೆಚ್ಚಿಸುವುದು.
  6. ಡಿಜಿಟಲ್ ಸಾರ್ವಭೌಮತ್ವವನ್ನು ಖಾತ್ರಿ ಪಡಿಸುವುದು.

ಈ ಎಲ್ಲ ಉದ್ದೇಶಗಳನ್ನು 2022ರೊಳಗೆ ಸಾಧಿಸುವುದು..

ಪ್ರಮುಖಾಂಶಗಳು:

            ಈ ನೀತಿಯ ಪ್ರಮುಖ ಗುರಿಗಳೆಂದರೆ

  • ಪ್ರತಿಯೊಬ್ಬ ಪ್ರಜೆಗೂ 50 ಎಂಬಿಪಿಎಸ್ ಸಮಗ್ರ ಬ್ರಾಡ್ ಬ್ಯಾಂಡ್ ಸಂಪರ್ಕ ಕಲ್ಪಿಸುವುದು
  • ಎಲ್ಲ ಗ್ರಾಮ ಪಂಚಾಯಿತಿಗಳಿಗೆ 2020ರ ವೇಳೆಗೆ  ಒಂದು ಜಿಬಿಪಿಎಸ್ ಸಂಪರ್ಕ ಒದಗಿಸುವುದು. 2022ರ ವೇಳೆಗೆ 10 ಜಿಬಿಪಿಎಸ್ ಒದಗಿಸುವುದು.
  • ಅಂತರ್ಜಾಲ ಸಂಪರ್ಕವಿಲ್ಲದ ಎಲ್ಲ ಪ್ರದೇಶಗಳಿಗೂ ಸಂಪರ್ಕ ಕಲ್ಪಿಸುವುದು.
  • ಡಿಜಿಟಲ್ ಸಂವಹನ ವಲಯದಲ್ಲಿ ನೂರು ಬಿಲಿಯನ್ ಅಮೆರಿಕನ್ ಡಾಲರ್ ಬಂಡವಾಳ ಆಕರ್ಷಿಸುವುದು.
  • ಹೊಸ ಯುಗಕ್ಕೆ ಕೌಶಲ್ಯ ವೃದ್ಧಿಗಾಗಿ ಒಂದು ಮಿಲಿಯನ್ ಮಾನವ ಸಂಪನ್ಮೂಲಕ್ಕೆ ತರಬೇತಿ ನೀಡುವುದು.
  • ಐಓಟ್ ವಿಸ್ತರಣೆಗೆ ಪೂರಕ ವಾತಾವರಣ ನಿರ್ಮಿಸಿ, 5 ಬಿಲಿಯನ್ ಸಂಪರ್ಕ ಕಲ್ಪಿಸುವುದು.
  • ಗೌಪ್ಯತೆ, ಸ್ವಾಯತ್ತತೆ ಮತ್ತು ಆಯ್ಕೆ ಮತ್ತಿತರ ಸುರಕ್ಷತಾ ಕ್ರಮಗಳಿರುವ ಡಿಜಿಟಲ್ ಸಂವಹನಾ ಯುಗದಲ್ಲಿ ದತ್ತಾಂಶ ರಕ್ಷಣೆಗೆ ಸಮಗ್ರ ಕಾರ್ಯತಂತ್ರ ರೂಪಿಸುವುದು.
  • ಜಾಗತಿಕ ಡಿಜಿಟಲ್ ಆರ್ಥಿಕತೆಯಲ್ಲಿ ಭಾರತ ಪರಿಣಾಮಕಾರಿಯಾಗಿ ಭಾಗವಹಿಸುವಂತೆ ಮಾಡಲು ಕ್ರಮ ಕೈಗೊಳ್ಳುವುದು.
  • ನಾಗರಿಕರಿಗೆ ಅಗತ್ಯ ಸುರಕ್ಷತೆ ಒದಗಿಸಲು ಸಾಂಸ್ಥಿಕ ಕಾರ್ಯತಂತ್ರ ಮತ್ತು ಉತ್ತರ ದಾಯಿತ್ವವನ್ನು ಜಾರಿಗೊಳಿಸುವುದು.
  • ಡಿಜಿಟಲ್ ಸಂವಹನ ಮೂಲಸೌಕರ್ಯ ಮತ್ತು ಸೇವೆಗಳನ್ನು ಖಾತ್ರಿಗೊಳಿಸುವುದು.

ಕಾರ್ಯತಂತ್ರ

ನೀತಿ ಈ ಕೆಳಗಿನ ಅಂಶಗಳನ್ನು ಪ್ರತಿಪಾದಿಸುತ್ತದೆ.

  1. ರಾಷ್ಟ್ರೀಯ ಫೈಬರ್ ಪ್ರಾಧಿಕಾರವನ್ನು ಸೃಷ್ಟಿಸುವ ಮೂಲಕ ರಾಷ್ಟ್ರೀಯ ಡಿಜಿಟಲ್ ಗ್ರಿಡ್ಅನ್ನು ಸ್ಥಾಪಿಸುವುದು.
  2. ಎಲ್ಲ ಹೊಸ ನಗರಗಳೂ, ಹೆದ್ದಾರಿ ಅಭಿವದ್ಧಿ ಯೋಜನೆಗಳಲ್ಲಿ ಸಾಮಾನ್ಯ ಸೇವೆಗಳಿಗೆ ಡಕ್ಟ್ ಮತ್ತು ಯುಟಿಲಿಟಿ ಕಾರಿಡಾರ್ ಗಳನ್ನು ಸ್ಥಾಪಿಸುವುದು.
  3. ಕೇಂದ್ರ, ರಾಜ್ಯ ಮತ್ತು ಸ್ಥಳೀಯ ಸಂಸ್ಥೆಗಳ ನಡುವೆ ಸಮಗ್ರ ಸಾಂಸ್ಥಿಕ ಕಾರ್ಯತಂತ್ರ ರೂಪಿಸುವುದು. ದರ ಗುಣಮಟ್ಟ, ಸಮಯ ಹಾಗೂ ನಾಗರಿಕರ ಹಕ್ಕುಗಳನ್ನು ರಕ್ಷಿಸುವುದು.
  4. ಅನುಮೋದನೆಗಳಿಗೆ ಆಗುವ ಅಡತಡೆಗಳನ್ನು ನಿವಾರಿಸುವುದು.
  5. ಮುಂದಿನ ತಲೆಮಾರಿಗೆ ಮುಕ್ತ ಸಂವಹನ ಲಭ್ಯತೆ ಅಭಿವೃದ್ಧಿಗೊಳಿಸುವುದು.

ಹಿನ್ನೆಲೆ:

            ಪ್ರಸ್ತುತ ದೂರಸಂಪರ್ಕ ವಲಯದಲ್ಲಿ 5ಜಿ, ಐಓಟ್, ಎಂ2ಎಂ ಮತ್ತಿತರ ಆಧುನಿಕ ತಂತ್ರಜ್ಞಾನ ಬೆಳವಣಿಗೆಗಳ ಹೊಸ ಯುಗ ಜಗತ್ತಿನಲ್ಲಿ ಆರಂಭವಾಗಿದ್ದು,ಗ್ರಾಹಕ ಕೇಂದ್ರಿತ ಮತ್ತು ಅನ್ವಯಿಕ ಆಧಾರಿತ ನೀತಿಗಳು ಭಾರತ ದೂರಸಂಪರ್ಕ ವಲಯದಲ್ಲಿ ಪರಿಚಯಿಸಲ್ಪಟ್ಟಿವೆ. ಇವು ಡಿಜಿಟಲ್ ಇಂಡಿಯಾ ಯೋಜನೆಗೆ ಪ್ರಮುಖ ಆಧಾರ ಸ್ತಂಭಗಳಾಗಿದ್ದು, ಅದರ ಮೂಲಕ ಎದುರಾಗುತ್ತಿರುವ ಅವಕಾಶಗಳನ್ನು ಬಳಸಿಕೊಳ್ಳುವ ಜೊತೆಗೆ ದೂರಸಂಪರ್ಕ ಸೇವೆಗಳಲ್ಲದೆ, ದೂರಸಂಪರ್ಕ ಆಧಾರಿತ ಸೇವೆಗಳನ್ನೂ ಸಹ ವಿಸ್ತರಿಸಲಾಗುತ್ತಿದೆ.

        ಅದರಂತೆ ರಾಷ್ಟ್ರೀಯ ದೂರಸಂಪರ್ಕ ನೀತಿ – 2012ಕ್ಕೆ ಬದಲಾಗಿ ಹೊಸ ರಾಷ್ಟ್ರೀಯ ಡಿಜಿಟಲ್ ಸಂವಹನ ನೀತಿ 2018, ರೂಪಿಸಲಾಗಿದೆ. ಅದು ಭಾರತದ ದೂರಸಂಪರ್ಕ ವಲಯದಲ್ಲಿ ಆಧುನಿಕ ಅಗತ್ಯತೆಗಳನ್ನು ಪೂರೈಸಲಿದೆ.

 


(Release ID: 1548062) Visitor Counter : 101