ಸಂಪುಟ

ಭಾರತ ಮತ್ತು ಉಜ್ಬೆಕಿಸ್ತಾನ ನಡುವೆ ಆರೋಗ್ಯ ಮತ್ತು ವೈದ್ಯಕೀಯ ವಿಜ್ಞಾನ ಕ್ಷೇತ್ರದಲ್ಲಿ ಸಹಕಾರ ಕುರಿತ ಒಪ್ಪಂದಕ್ಕೆ ಸಂಪುಟ ಅನುಮೋದನೆ 

Posted On: 26 SEP 2018 4:07PM by PIB Bengaluru

ಭಾರತ ಮತ್ತು ಉಜ್ಬೆಕಿಸ್ತಾನ ನಡುವೆ ಆರೋಗ್ಯ ಮತ್ತು ವೈದ್ಯಕೀಯ ವಿಜ್ಞಾನ ಕ್ಷೇತ್ರದಲ್ಲಿ ಸಹಕಾರ ಕುರಿತ ಒಪ್ಪಂದಕ್ಕೆ ಸಂಪುಟ ಅನುಮೋದನೆ 
 

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು ಭಾರತ ಮತ್ತು ಉಜ್ಬೆಕಿಸ್ತಾನ ನಡುವೆ ಆರೋಗ್ಯ ಮತ್ತು ವೈದ್ಯಕೀಯ ವಿಜ್ಞಾನ ಕ್ಷೇತ್ರದಲ್ಲಿ ಸಹಕಾರ ಕುರಿತ ಒಪ್ಪಂದದ ಅಂಕಿತಕ್ಕೆ ಅನುಮೋದನೆ ನೀಡಿತು. 

ಈ ಒಪ್ಪಂದವು ಸಹಕಾರಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಕ್ಷೇತ್ರಗಳನ್ನು ಒಳಗೊಂಡಿದೆ:- 

1. ವೈದ್ಯ ಶಿಕ್ಷಣ ಸಂಸ್ಥೆಗಳ ಬೋಧನಾ ಮತ್ತು ಸಂಶೋಧನಾ ಪ್ರಯೋಗಾಲಯಗಳಿಗೆ ಉಪಕರಣಗಳು ಸೇರಿದಂತೆ ವೈದ್ಯಕೀಯ ಸಲಕರಣೆ ಕ್ಷೇತ್ರದಲ್ಲಿ ಮತ್ತು ಔಷಧಿ ಉತ್ಪನ್ನಗಳ ವ್ಯಾಪಾರ ಸಹಕಾರ ಅಭಿವೃದ್ದಿಯ ಅವಕಾಶಗಳ ವಿಸ್ತರಣೆ. 

2. ಪ್ರಾಥಮಿಕ ಆರೋಗ್ಯ ರಕ್ಷಣೆಯನ್ನು ಬಲಪಡಿಸುವಿಕೆ ಮತ್ತು ಆರೋಗ್ಯ ರಕ್ಷಣಾ ಸೌಲಭ್ಯಗಳ ಸ್ಥಾಪನೆ. 

3. ವೈದ್ಯಕೀಯ ಮತ್ತು ಆರೋಗ್ಯ ಸಂಶೋಧನಾ ಅಭಿವೃದ್ದಿ ಮತ್ತು ಈ ಕ್ಷೇತ್ರಗಳಲ್ಲಿ ಅನುಭವದ ವಿನಿಮಯ. 

4. ಟೆಲಿಮೆಡಿಸಿನ್ ಮತ್ತು ಇಲೆಕ್ಟ್ರಾನಿಕ್ ಆರೋಗ್ಯ ಮಾಹಿತಿ ವ್ಯವಸ್ಥೆ ಕ್ಷೇತ್ರಗಳಲ್ಲಿ ಅನುಭವ ಮತ್ತು ತಂತ್ರಜ್ಞಾನದ ವಿನಿಮಯ; 

5. ಹೆರಿಗೆ ಮತ್ತು ಮಕ್ಕಳ ಆರೋಗ್ಯ ರಕ್ಷಣೆ: 

6. ಸಾಂಕ್ರಾಮಿಕ ರೋಗಗಳ ನಿಗಾ ಮತ್ತು ಪರಸ್ಪರ ಹರಡುವ ಹಾಗು ಹರಡದಿರುವ ರೋಗಗಳ ನಿಯಂತ್ರಣಕ್ಕಾಗಿ ತಂತ್ರಜ್ಞಾನದ ಅಭಿವೃದ್ದಿ ಮತ್ತು ವ್ಯೂಹಾತ್ಮಕ ನಿಗಾ ವ್ಯವಸ್ಥೆ; 

7. ಔಷಧಿ ಮತ್ತು ಔಷಧೀಯ ಉತ್ಪನ್ನಗಳ ನಿಯಂತ್ರಣ 

8. ಪರಸ್ಪರ ಆಸಕ್ತಿಯ ಇತರ ಯಾವುದೇ ಕ್ಷೇತ್ರಗಳಲ್ಲಿ ಸಹಕಾರ. 

ಸಹಕಾರಕ್ಕೆ ಸಂಬಂಧಿಸಿ ಇನ್ನಿತರ ವಿವರಗಳನ್ನು ರೂಪಿಸಲು ಮತ್ತು ಈ ಒಪ್ಪಂದ ಅನುಷ್ಟಾನದ ಮೇಲುಸ್ತುವಾರಿಗಾಗಿ ಕಾರ್ಯ ಪಡೆಯನ್ನು ರಚಿಸಲಾಗುವುದು. 



(Release ID: 1548043) Visitor Counter : 75