ಪ್ರಧಾನ ಮಂತ್ರಿಯವರ ಕಛೇರಿ

ಆಫ್ಘಾನಿಸ್ತಾನ್ ಇಸ್ಲಾಮಿಕ್ ಗಣರಾಜ್ಯದ ಅಧ್ಯಕ್ಷರಿಂದ ಭಾರತ ಭೇಟಿ

Posted On: 19 SEP 2018 4:08PM by PIB Bengaluru

ಆಫ್ಘಾನಿಸ್ತಾನ್ ಇಸ್ಲಾಮಿಕ್ ಗಣರಾಜ್ಯದ ಅಧ್ಯಕ್ಷರಿಂದ ಭಾರತ ಭೇಟಿ

 

ಆಫ್ಘಾನಿಸ್ತಾನದ ಇಸ್ಲಾಮಿಕ್ ಗಣರಾಜ್ಯದ ಅಧ್ಯಕ್ಷ ಡಾ. ಮೊಹಮದ್ ಅಷರಫ್ ಘನಿ ಅವರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಆಹ್ವಾನದ ಮೇರೆಗೆ 2018ರ ಸೆಪ್ಟೆಂಬರ್ 19ರಂದು ಭಾರತಕ್ಕೆ ಭೇಟಿ ನೀಡಿದರು.

ಇಬ್ಬರೂ ನಾಯಕರು ಭಾರತ- ಆಫ್ಘಾನಿಸ್ತಾನದ ಬಹುಮುಖಿ ವ್ಯೂಹಾತ್ಮಕ ಪಾಲುದಾರಿಕೆಯ ಪ್ರಗತಿಯ ಧನಾತ್ಮಕ ನಿರ್ಧರಣೆ ಮತ್ತು ಪರಾಮರ್ಶೆ ನಡೆಸಿದರು.1 ಶತಕೋಟಿ ಅಮೆರಿಕನ್ ಡಾಲರ್ ಗಡಿ ದಾಟಿರುವ ದ್ವಿಪಕ್ಷೀಯ ವಾಣಿಜ್ಯ ಹೆಚ್ಚಳದ ಬಗ್ಗೆ ಅವರು ತೃಪ್ತಿ ವ್ಯಕ್ತಪಡಿಸಿದರು. ಇಬ್ಬರೂ ನಾಯಕರು, ಮುಂಬೈನಲ್ಲಿ ಸೆಪ್ಟೆಂಬರ್ 12-15ರವರೆಗೆ ನಡೆದ ಭಾರತ- ಆಫ್ಘಾನಿಸ್ತಾನ ವಾಣಿಜ್ಯ ಮತ್ತು ಹೂಡಿಕೆ ಪ್ರದರ್ಶನದ ಯಶಸ್ಸನ್ನು ಶ್ಲಾಘಿಸಿದರು ಮತ್ತು ಚಬಹರ್ ಬಂದರು ಮತ್ತು ವಾಮಾನ ಸಂಚಾರ ಕಾರಿಡಾರ್ ಸೇರಿದಂತೆ ಸಂಪರ್ಕ ವರ್ಧನೆಯ ನಿರ್ಣಯವನ್ನು ವ್ಯಕ್ತಪಡಿಸಿದರು. ಅತ್ಯುನ್ನತ ಪರಿಣಾಮದ ಯೋಜನೆಗಳ ಕ್ಷೇತ್ರದಲ್ಲಿ ಅಂದರೆ ಆಫ್ಘಾನಿಸ್ತಾನದಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಮತ್ತು ಇತರ ಸಾಮರ್ಥ್ಯವರ್ಧನೆ ಯೋಜನೆನೆ ನೂತನ ಅಭಿವೃದ್ಧಿ ಪಾಲುದಾರಿಕೆಯನ್ನು ಆಳಗೊಳಿಸಲು ಒಪ್ಪಿಗೆ ಸೂಚಿಸಲಾಯಿತು.

ಅಧ್ಯಕ್ಷ ಘನಿ ಅವರು ಶಾಂತಿ ಮತ್ತು ಸಮನ್ವಯ ಹಾಗೂ ಭಯೋತ್ಪಾದನೆ ಮತ್ತು ವಿಧ್ವಂಸಕತೆಯಿಂದ ಆಫ್ಘಾನಿಸ್ತಾನ ಮತ್ತು ಅದರ ಜನತೆ ಎದುರಿಸುತ್ತಿರುವ ಸವಾಲುಗಳನ್ನು ಎದುರಿಸಲು ತಮ್ಮ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಪ್ರಧಾನಮಂತ್ರಿಯವರಿಗೆ ಸಂಕ್ಷಿಪ್ತವಾಗಿ ವಿವರಿಸಿದರು.

ಆಫ್ಘಾನಿಸ್ತಾನ ಸಂಯುಕ್ತವಾಗಿ, ಶಾಂತಿಯುತವಾಗಿ, ಸಮಗ್ರ ಮತ್ತು ಪ್ರಜಾಪ್ರಭುತ್ವ ರಾಷ್ಟ್ರವಾಗಿ ಮುಂದುವರಿಯಲು ಮತ್ತು ಆರ್ಥಿಕವಾಗಿ ಚೈತನ್ಯಶೀಲ ದೇಶವಾಗಿ ಹೊರಹೊಮ್ಮಲು ಅವಕಾಶ ನೀಡುವಂಥ ಆಫ್ಘಾನ್ ನೇತೃತ್ವದ, ಆಫ್ಘನ್ ಮಾಲೀಕತ್ವದ ಮತ್ತು ಆಫ್ಘನ್ ನಿಯಂತ್ರಿತ ಶಾಂತಿ ಮತ್ತು ಸಮನ್ವಯ ಪ್ರಕ್ರಿಯೆಗೆ ಭಾರತದ ಬೆಂಬಲವನ್ನು ಪ್ರಧಾನಮಂತ್ರಿಯವರು ಪುನರುಚ್ಚರಿಸಿದರು. ಈ ನಿಟ್ಟಿನಲ್ಲಿ ಆಫ್ಘಾನಿಸ್ತಾನ ಸರ್ಕಾರವು ಆಫ್ಘಾನಿಸ್ತಾನದ ಭದ್ರತೆ ಮತ್ತು ಸಾರ್ವಭೌಮತ್ವಕ್ಕೆ ಸಹಕರಿಸುವ ಪ್ರಯತ್ನಗಳನ್ನು ಬೆಂಬಲಿಸುವ ಭಾರತದ ಅತಿ ದೊಡ್ಡ ಬದ್ಧತೆಯನ್ನು ಪ್ರಧಾನಿ ಒತ್ತಿ ಹೇಳಿದರು.

ಆಫ್ಘಾನಿಸ್ತಾನದಲ್ಲಿ ಮಾನವ ಜೀವಕ್ಕೆ ಅಪಾರ ನಷ್ಟವನ್ನು ಉಂಟುಮಾಡಿರುವ ಭಯೋತ್ಪಾದಕ ದಾಳಿಗಳು ಮತ್ತು ಹಿಂಸಾಚಾರವನ್ನು ಅವರು ಖಂಡಿಸಿದರು, ಮತ್ತು ಅಲ್ಲಿನ ಜನರು ಮತ್ತು ರಾಷ್ಟ್ರೀಯ ಭದ್ರತಾ ಪಡೆಗಳು ಭಯೋತ್ಪಾದನೆ ವಿರುದ್ಧ ನಡೆಸುತ್ತಿರುವ ಹೋರಾಟಕ್ಕೆ ಸಹಮತ ವ್ಯಕ್ತಪಡಿಸಿದರು.  

ವಿವಿಧ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಸಹಯೋಗ ಮತ್ತು ಸಮಾಲೋಚನೆಯ ಚಟುವಟಿಕೆಗಳ ಬಗ್ಗೆ ಸಂತೃಪ್ತಿ ವ್ಯಕ್ತಪಡಿಸಿದ ಎರಡೂ ಕಡೆಯವರು ಈ ಸಹಕಾರವನ್ನು ಬಲಪಡಿಸಲು ಸಮ್ಮತಿ ಸೂಚಿಸಿದರು ಮತ್ತು ಪ್ರಗತಿ, ಸಮೃದ್ಧಿ, ಶಾಂತಿ ಮತ್ತು ಸ್ಥಿರತೆಗಾಗಿ ಇನ್ನೂ ಹೆಚ್ಚು ಆಪ್ತವಾಗಿ ಅವರ ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ಪಾಲುದಾರರೊಂದಿಗೆ ಕಾರ್ಯನಿರ್ವಹಿಸಲು ಸಮ್ಮತಿಸಿದರು.

****



(Release ID: 1546822) Visitor Counter : 73