ಸಂಪುಟ

ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳ ಸಹಕಾರಕ್ಕೆ ಭಾರತ ಮತ್ತು ಈಜಿಪ್ಟ್ ನಡುವಣ ತಿಳುವಳಿಕಾ ಒಪ್ಪಂದಗಳಿಗೆ ಸಹಿಹಾಕಲು ಸಂಪುಟ ಸಭೆಯ ಅನುಮೋದನೆ. 

Posted On: 12 SEP 2018 4:27PM by PIB Bengaluru

ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳ ಸಹಕಾರಕ್ಕೆ ಭಾರತ ಮತ್ತು ಈಜಿಪ್ಟ್ ನಡುವಣ ತಿಳುವಳಿಕಾ ಒಪ್ಪಂದಗಳಿಗೆ ಸಹಿಹಾಕಲು ಸಂಪುಟ ಸಭೆಯ ಅನುಮೋದನೆ. 
 

ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳ ಸಹಕಾರಕ್ಕೆ ಭಾರತ ಮತ್ತು ಈಜಿಪ್ಟ್ ನಡುವಣ ತಿಳುವಳಿಕಾ ಒಪ್ಪಂದಗಳಿಗೆ ಸಹಿಹಾಕಲು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಕೇಂದ್ರ ಸಂಪುಟ ಸಭೆ ಅನುಮೋದನೆ ನೀಡಿತು. 

ಕೃಷಿಯಲ್ಲಿ ಜೈವಿಕ ತಂತ್ರಜ್ಞಾನ, ನ್ಯಾನೋ ತಂತ್ರಜ್ಞಾನ, ನೀರಾವರಿ ಮತ್ತು ಮಳೆಕೊಯ್ಲು ಮತ್ತು ಮೈಕ್ರೋ ನೀರಾವರಿ ತಂತ್ರಜ್ಞಾನ ಗಳಲ್ಲಿ ಜಲನಿರ್ವಹಣಾ ತಂತ್ರಜ್ಞಾನ, ಇಂಧನ ಉತ್ಪಾದನೆಗಾಗಿ ಕೃಷಿ ತ್ಯಾಜ್ಯಗಳ ನಿರ್ವಹಣೆ, ನಿರ್ವಹಣೆ, ಆಹಾರ ಭದ್ರತೆ, ಸುರಕ್ಷೆ, ಮತ್ತು ಗುಣಮಟ್ಟ, ತೋಟಗಾರಿಕೆ, ಸಾವಯವ ಕೃಷಿ, ಜಾನುವಾರು ಸಾಕಣೆ, ಜಾನುವಾರು ತಳಿ ವ್ಯವಸಾಯ, ಹೈನುಗಾರಿಕೆ, ಮೀನುಗಾರಿಕೆ, ಪಶು ಆಹಾರ ಮತ್ತು ಮೇವು ಉತ್ಪಾದನೆ, ಪ್ರಾಣಿಜನ್ಯ ಉತ್ಪಾದನೆ ಮತ್ತು ಮೌಲ್ಯ ವರ್ಧನೆ, ನೈರ್ಮಲ್ಯ ಮತ್ತು ಪಶುಜನ್ಯ ಹಾಗೂ ಸಸ್ಯಾಧಾರಿತ ಮಾರಾಟದಲ್ಲಿ ಸಂಬಂಧಿತ ಸಸ್ಯ ನೈರ್ಮಲ್ಯ (ಫೈಟೋ ಸ್ಯಾನಿಟೇಷನ್ ), ಲಘು ಗಾತ್ರದ ಕೃಷಿ ಉಪಕರಣಗಳು, ಕೃಷಿ-ವ್ಯಾಪಾರ ಮತ್ತು ಮಾರ್ಕೆಟಿಂಗ್; ಕೊಯ್ಲು ಪೂರ್ವ ಮತ್ತು ಕೊಯ್ಲು ನಂತರದ ಕ್ರಮವ್ಯವಸ್ಥೆಗಳು, ಆಹಾರ ತಂತ್ರಜ್ಞಾನ ಮತ್ತು ಸಂಸ್ಕರಣೆ; ಕೃಷಿಯಲ್ಲಿ ಕೀಟ ನಿಯಂತ್ರಣ ನಿರ್ವಹಣೆಯ ಏಕೀಕರಣ, ಕೃಷಿ ವಿಸ್ತರಣೆ ಮತ್ತು ಗ್ರಾಮೀಣ ಅಭಿವೃದ್ಧಿ; ಕೃಷಿ ವ್ಯಾಪಾರ ಮತ್ತು ಬಂಡವಾಳ ಹೂಡಿಕೆ; ಬೌದ್ಧಿಕ ಆಸ್ತಿ ಅಹಕ್ಕುಗಳ ( ಇಂಟೆಲೆಕ್ಚುಯಲ್ ಪ್ರೋಪರ್ಟಿ ರೈಟ್ಸ್) ವಿಷಯಗಳು; ತಂತ್ರಜ್ಞಾನ ಅರಿವು-ತಿಳುವಳಿಕೆ ಮತ್ತು ಬೀಜ ಕ್ಷೇತದಲ್ಲಿ ಮಾನವ ಸಂಪನ್ಮೂಲ, ಮೂಲಸೌಕರ್ಯ ಅಭಿವೃದ್ಧಿ ಮತ್ತು ಕೃಷಿ ಮತ್ತು ಸಂಬಂಧಿತ ಕ್ಷೇತ್ರದಲ್ಲಿ ಸಾಮರ್ಥ್ಯ ನಿರ್ಮಾಣ ಮತ್ತು ಎರಡೂ ಪಕ್ಷಗಳು ಪರಸ್ಪರ ಒಪ್ಪಿಕೊಂಡ ಆಸಕ್ತಿಯ ಸಂಬಂಧಿತ ಕ್ಷೇತ್ರಗಳು ಮುಂತಾದ ಕೃಷಿ ಬೆಳೆಗಳಲ್ಲಿ (ವಿಶೇಷವಾಗಿ ಗೋಧಿ ಮತ್ತು ಜೋಳ) ತಿಳುವಳಿಕಾ ಒಪ್ಪಂದ ಸಹಕಾರ ಏರ್ಪಡಿಸಲಿದೆ. 

ಕೃಷಿ ಸಂಶೋಧನಾ ವಿಜ್ಞಾನಿಗಳ ಮತ್ತು ತಜ್ಞರ ವಿನಿಮಯಗಳು; ಕೃಷಿಮಾಹಿತಿಗಳು ಮತ್ತು ವೈಜ್ಞಾನಿಕ ಪ್ರಕಾಶನಗಳು (ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳ ನಿಯತಕಾಲಿಕಗಳು, ಪುಸ್ತಕಗಳು, ಲಘು ಪ್ರಕಟಣೆಗಳು, ಅಂಕಿಸಂಖ್ಯೆಗಳು ) ಮುಂತಾದವುಗಳ ವಿನಿಮಯ; ಜರ್ಮ್ ಪ್ಲಾಸ್ಮ & ಕೃಷಿ ತಂತ್ರಜ್ಞಾನ ವಿನಿಮಯ; ಮತ್ತು ಜಂಟಿ ಸೆಮಿನಾರ್, ಕಾರ್ಯಾಗಾರಗಳು, ಸಿಂಪೋಸಿಮ್ಸ್ ಮತ್ತು ಇತರ ಸಾಮಾನ್ಯ ಆಸಕ್ತಿಯ ಚಟುವಟಿಕೆಗಳು ಮೊದಲಾದವುಗಳ ಮೂಲಕ ಸಹಕಾರ ಪರಿಣಾಮಬೀರಲಿದೆ. 

ಈ ತಿಳುವಳಿಕಾ ಒಪ್ಪಂದದಡಿ, ಪರಸ್ಪರ ಆಸಕ್ತಿಯ ವಿಷಯಗಳನ್ನು ಸೇರಿಸಿಕೊಂಡು ದ್ವಿಪಕ್ಷೀಯ ವಿಷಯಗಳು ಮತ್ತು ಸಮಾಲೋಚನೆಗಳಲ್ಲಿ ಸಹಕಾರ ವೃದ್ಧಿಗೊಳಿಸಲು ಜಂಟಿ ಕಾರ್ಯ ಪಡೆ (ಜೆ.ಡ್ಬ್ಲೂ.ಜಿ)ಯನ್ನು ರೂಪಿಸುವುದು. ನಿರ್ದಿಷ್ಟ ವಿಷಯಗಳಲ್ಲಿ ಹೆಚ್ಚುವರಿ ಪೂರಕ ಒಡಂಬಡಿಕೆಗಳು ಮಾಡುವುದು ಸೇರಿದಂತೆ, ಜಂಟಿ ಕೆಲಸದ ಕಾರ್ಯಕ್ರಮಗಳನ್ನು ಪೂರೈಸುವುದು ಹಾಗೂ ಅವಕಾಶ ಪೂರೈಕೆಗಳ ರೂಪೀಕರಿಸಲು, ಪ್ರಾರಂಭಿಕವಾಗಿ ಎರಡೂ ವರ್ಷಗಳಲ್ಲಿ ಭಾರತ ಮತ್ತು ಈಜಿಪ್ಟ್ ಗಳಲ್ಲಿ ಪರ್ಯಾಯವಾಗಿ ಜೆ.ಡ್ಬ್ಲೂ.ಜಿ. ಸಭೆಸೇರಲಿದೆ. 



(Release ID: 1546354) Visitor Counter : 139