ಸಂಪುಟ

ಹೊರಾಂಗಣ ಬಾಹ್ಯಾಕಾಶದ ಅವಕಾಶಗಳನ್ನು ಸೃಷ್ಠಿಸುವ ಮತ್ತು ಶಾಂತಿಯುತ ಉದ್ಧೇಶಗಳಿಗಾಗಿ ಬಳಸುವ ಸಹಕಾರಕ್ಕೆ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ತಿಳುವಳಿಕಾ ಒಪ್ಪಂದಗಳಿಗೆ ಸಹಿಹಾಕಲು ಸಂಪುಟ ಅಸ್ತು 

Posted On: 12 SEP 2018 4:29PM by PIB Bengaluru

ಹೊರಾಂಗಣ ಬಾಹ್ಯಾಕಾಶದ ಅವಕಾಶಗಳನ್ನು ಸೃಷ್ಠಿಸುವ ಮತ್ತು ಶಾಂತಿಯುತ ಉದ್ಧೇಶಗಳಿಗಾಗಿ ಬಳಸುವ ಸಹಕಾರಕ್ಕೆ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ತಿಳುವಳಿಕಾ ಒಪ್ಪಂದಗಳಿಗೆ ಸಹಿಹಾಕಲು ಸಂಪುಟ ಅಸ್ತು 
 

ಹೊರಾಂಗಣ ಬಾಹ್ಯಾಕಾಶದ ಅವಕಾಶಗಳನ್ನು ಸೃಷ್ಠಿಸುವ ಮತ್ತು ಶಾಂತಿಯುತ ಉದ್ಧೇಶಗಳಿಗಾಗಿ
ಬಳಸುವ ಸಹಕಾರಕ್ಕೆ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ತಿಳುವಳಿಕಾ ಒಪ್ಪಂದಗಳ
ಮಾಹಿತಿಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ
ಕೇಂದ್ರ ಸಂಪುಟ ಸಭೆ ತಿಳಿಸಿತು. ಜುಲೈ 26, 2018ರಂದು ಜೊಹನ್ನೆಸ್ಬರ್ಗ್ ನಲ್ಲಿ
ತಿಳುವಳಿಕಾ ಒಪ್ಪಂದಗಳ  ಸಹಿಹಾಕಲಾಗಿತ್ತು.

ಪ್ರಮುಖ ಲಕ್ಷಣಗಳು:

ಈ ತಿಳುವಳಿಕಾ ಒಪ್ಪಂದಗಳಲ್ಲಿ ಬರುವ ಸಹಕಾರ ಕ್ಷೇತ್ರಗಳು ಕೆಳಗಿನಂತಿವೆ;
1.      ಭೂಮಿಯನ್ನು ಬಹುದೂರದಿಂದ ಪರೋಕ್ಷವಾಗಿ ಅರಿಯುವುದು;
2.      ಕೃತಕ ಉಪಗ್ರಹಮೂಲಕ ಸಂವಹನ ಮತ್ತು ಅದರ ಆಧಾರಿತ ನೌಕಾಯಾನ ಸಂಚಾರ
3.      ಬಾಹ್ಯಾಕಾಶ ವಿಜ್ಞಾನ ಮತ್ತು ಗ್ರಹಸಂಬಂಧಿತ ಅವಕಾಶಗಳ ಸೃಷ್ಠಿ
4.      ಬಾಹ್ಯಾಕಾಶ ನೌಕೆ / ಗಗನನೌಕೆ, ಉಡಾವಣಾ ನೌಕೆಗಳು, ಬಾಹ್ಯಾಕಾಶ ವ್ಯವಸ್ಥೆಗಳು,
ಮತ್ತು ಭೂವ್ಯವಸ್ಥೆಗಳು
5.      ಭೂಕೇಂದ್ರಿತ ಬಾಹ್ಯಾಕಾಶ ಸಲಕರಣೆಗಳು ಮತ್ತು ತಂತ್ರಜ್ಞಾನಗಳು ಸೇರಿದಂತೆ
ಬಾಹ್ಯಾಕಾಶ ತಂತ್ರಜ್ಞಾನಗಳ ಪ್ರಾಯೋಗಿಕ ಅನುಷ್ಠಾನಗಳು; ಮತ್ತು
6.      ಕಕ್ಷಿಗಳು ನಿರ್ಧರಿಸುವ ಇತರ ಕ್ಷೇತ್ರಗಳ ಸಹಕಾರಗಳು

ತಿಳುವಳಿಕಾ ಒಪ್ಪಂದಗಳ ಸಹಕಾರಗಳು ಈ ಕೆಳಗಿನಂತೆ ನಡೆಯುತ್ತವೆ:

1.      ಪರಸ್ಪರ ಆಸಕ್ತಿಯ ಮತ್ತು ಪ್ರಯೋಜನಕಾರಿ ಜಂಟಿ ಬಾಹ್ಯಾಕಾಶ ಯೋಜನೆಗಳನ್ನು
ರೂಪಿಸುವುದು ಮತ್ತು ಅನುಷ್ಠಾನಗೊಳಿಸುವುದು
2.      ಬಾಹ್ಯಾಕಾಶ ಚಟುವಟಿಕೆಗಳ ಪೂರಕವಾಗಿ ಭೂಸ್ಥರ ನಿಲ್ದಾಣಗಳನ್ನು ಸ್ಥಾಪನೆ, ಚಾಲನೆ
ಮತ್ತು ನಿರ್ವಹಣೆ;
3.      ಕೃತಕ ಉಪಗ್ರಹಗಳ ದತ್ತಾಂಶ, ಪ್ರಯೋಗಗಳ ಫಲಿತಾಂಶಗಳು ಮತ್ತು ವೈಜ್ಞಾನಿಕ ಹಾಗೂ
ತಂತ್ರಜ್ಞಾನಗಳ ಮಾಹಿತಿಗಳನ್ನು ಹಂಚಿಕೊಳ್ಳುವುದು;
4.      ಜಂಟಿ ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳು;
5.      ಸಹಕಾರ ಕಾರ್ಯಕ್ರಮಗಳಲ್ಲಿ ತಾಂತ್ರಿಕತೆ ಮತ್ತು ವೈಜ್ಞಾನಿಕ ಕಾರ್ಯಗಳಿಗಾಗಿ
ನಿಯೋಜಿತ ಸಿಬ್ಬಂದಿಗಳ ಪಾಲ್ಗೊಳ್ಳುವಿಕೆ;
6.      ಸಮಾಜದ ಉದ್ಧೇಶಗಳ ಬಳಕೆಗಾಗಿ ಬಾಹ್ಯಾಕಾಶ ತಂತ್ರಜ್ಞಾನ ಹಾಗೂ ತಂತ್ರಜ್ಞಾನ ಮತ್ತು
ಬಾಹ್ಯಾಕಾಶ ಸಂಬಂಧಿತ  ಕಾರ್ಯಕ್ರಮಗಳು;
7.      ಜಂಟಿ ಸಿಂಪೋಸಿಯಗಳು, ಸಮಾವೇಶಗಳು ಮತ್ತು ವೈಜ್ಞಾನಿಕ ಸಭೆಗಳನ್ನು ಏರ್ಪಡಿಸುವುದು; ಮತ್ತು
8.      ಕಕ್ಷಿಗಳ ನಡುವಣ ಪರಸ್ಪರ ಸಮ್ಮತಿ ಬರೆಯುವ ಮೂಲಕ ಹೆಚ್ಚುವರಿ ರೀತಿಯ ಸಹಕಾರವನ್ನೂ
ನಿರ್ಧರಿಸುತ್ತದೆ.
ಪ್ರಯೋಜನಗಳು:
ಬಾಹ್ಯಾಕಾಶ ವಿಜ್ಞಾನ, ತಂತ್ರಜ್ಞಾನ ಮತ್ತು ದೂರದಿಂದ ಪರೋಕ್ಷವಾಗಿ ಭೂಮಿಯನ್ನು
ಅರಿಯುವಿಕೆ ಸೇರಿದಂತೆ ಬಾಹ್ಯಾಕಾಶ ಕಾರ್ಯಕ್ರಮಗಳು, ಕೃತಕ ಉಪಗ್ರಹ ಸಂವಹನ ಮತ್ತು
ಕೃತಕ ಉಪಗ್ರಹ ಆಧಾರಿತ ನೌಕಾಯಾನ ಸಂಚಾರ ವ್ಯವಸ್ಥೆ; ಬಾಹ್ಯಕಾಶ ವಿಜ್ಞಾನ ಮತ್ತು
ಗ್ರಹಸಂಬಂಧಿತ ಅವಕಾಶಗಳು; ಗಗನನೌಕೆಗಳ ಮತ್ತು ಬಾಹ್ಯಾಕಾಶ ವ್ಯವಸ್ಥೆಗಳು ಹಾಗೂ
ಭೂಸ್ಥರ ವ್ಯವಸ್ಥೆಗಳ ಬಳಕೆ ಮತ್ತು ಬಾಹ್ಯಾಕಾಶ ತಂತ್ರಜ್ಞಾನಗಳ ಬಳಕೆ ಮುಂತಾದ
ಸಾಧ್ಯತೆಗಳ ಕ್ಷೇತ್ರಗಳಲ್ಲಿ ಸಹಕಾರಗಳನ್ನು ಮುಂದುವರಿಸುವುದನ್ನು ತಿಳುವಳಿಕಾ
ಒಪ್ಪಂದಗಳಿಗೆ ಸಹಿಹಾಕುವ ಮೂಲಕ ಸಶಕ್ತಿಗೊಳಿಸಲಾಗುತ್ತದೆ.



(Release ID: 1546106) Visitor Counter : 82