ಸಂಪುಟ

ಮೆ. ರಾಷ್ಟ್ರೀಯ ರಾಸಾಯನಿಕ ಮತ್ತು ರಸಗೊಬ್ಬರ (ಆರ್.ಸಿ.ಎಫ್.) ಜಮೀನನ್ನು ಮುಂಬೈ ಮಹಾನಗರ ಪ್ರಾದೇಶಿಕ ಅಭಿವೃದ್ಧಿ ಪ್ರಾಧಿಕಾರ (ಎಂ.ಎಂ.ಆರ್.ಡಿ.ಎ.)ಕ್ಕೆ ಹಸ್ತಾಂತರಿಸಲು ಸಂಪುಟದ ಅನುಮೋದನೆ 

Posted On: 12 SEP 2018 4:34PM by PIB Bengaluru

ಮೆ. ರಾಷ್ಟ್ರೀಯ ರಾಸಾಯನಿಕ ಮತ್ತು ರಸಗೊಬ್ಬರ (ಆರ್.ಸಿ.ಎಫ್.) ಜಮೀನನ್ನು ಮುಂಬೈ ಮಹಾನಗರ ಪ್ರಾದೇಶಿಕ ಅಭಿವೃದ್ಧಿ ಪ್ರಾಧಿಕಾರ (ಎಂ.ಎಂ.ಆರ್.ಡಿ.ಎ.)ಕ್ಕೆ ಹಸ್ತಾಂತರಿಸಲು ಸಂಪುಟದ ಅನುಮೋದನೆ 

ಮೆ. ಆರ್.ಸಿ.ಎಫ್. ಜಮೀನನ್ನು ಬೃಹತ್ ಮುಂಬೈ ಮುನಿಸಿಪಲ್ ಕಾರ್ಪೊರೇಷನ್ (ಎಂ.ಸಿ.ಜಿ.ಎಂ.)ಗೆ ಹಸ್ತಾಂತರಿಸಲು; ಮತ್ತು ಎಂ.ಎಂ.ಆರ್.ಡಿ.ಎ/ಎಂ.ಸಿ.ಜಿ.ಎಂ.ಗೆ ಜಮೀನು ಹಸ್ತಾಂತರಿಸಿದ್ದಕ್ಕೆ ಪ್ರತಿಯಾಗಿ ಪಡೆದ/ಪಡೆಯಬಹುದಾದ ಹಸ್ತಾಂತರ ಮಾಡಬಹುದಾದ ಅಭಿವೃದ್ಧಿಯ ಹಕ್ಕು (ಟಿ.ಡಿ.ಆರ್.) ಪ್ರಮಾಣಪತ್ರ ಮಾರಾಟಕ್ಕೆ ಸಂಪುಟದ ಅನುಮೋದನೆ 
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಈ ಕೆಳಗಿನವುಗಳಿಗೆ ಪೂರ್ವಾನ್ವಯ ಅನುಮೋದನೆ ನೀಡಿದೆ.

        i.            ಮೆ. ರಾಷ್ಟ್ರೀಯ ರಾಸಾಯನಿಕ ಮತ್ತು ರಸಗೊಬ್ಬರ ನಿಯಮಿತ (ಆರ್.ಸಿ.ಎಫ್.)ದ ಜಮೀನನ್ನು ಮುಂಬೈ ಮಹಾನಗರ ಪ್ರಾದೇಶಿಕ ಅಭಿವೃದ್ಧಿ ಪ್ರಾಧಿಕಾರ (ಎಂ.ಎಂ.ಆರ್.ಡಿ.ಎ.)ಕ್ಕೆ ಹಸ್ತಾಂತರಿಸಲು;

     ii.            ಮೆ. ರಾಷ್ಟ್ರೀಯ ರಾಸಾಯನಿಕ ಮತ್ತು ರಸಗೊಬ್ಬರ ನಿಯಮಿತ (ಆರ್.ಸಿ.ಎಫ್.)ದ ಜಮೀನನ್ನು ಬೃಹನ್ ಮುಂಬೈ ಮುನಿಸಿಪಲ್ ಕಾರ್ಪೊರೇಷನ್(ಎಂ.ಸಿ.ಜಿ.ಎಂ.)ಗೆ ಹಸ್ತಾಂತರಿಸುವ ಪ್ರಸ್ತಾವಕ್ಕೆ ಅನುಮೋದನೆ. ಮತ್ತು

   iii.            ಎಂ.ಎಂ.ಆರ್.ಡಿ.ಎ/ಎಂ.ಸಿ.ಜಿ.ಎಂ.ಗೆ ಜಮೀನು ಹಸ್ತಾಂತರಿಸಿದ್ದಕ್ಕೆ ಪ್ರತಿಯಾಗಿ ಪಡೆದ/ಪಡೆಯಬಹುದಾದ ಹಸ್ತಾಂತರ ಮಾಡಬಹುದಾದ ಅಭಿವೃದ್ಧಿಯ ಹಕ್ಕು (ಟಿ.ಡಿ.ಆರ್.) ಪ್ರಮಾಣಪತ್ರ ಮಾರಾಟಕ್ಕೆ

ಹಿನ್ನೆಲೆ:

 ಆರ್.ಸಿ.ಎಫ್. ಭಾರತದ ಸಾರ್ವಜನಿಕ ವಲಯದ ಪ್ರಮುಖ ರಸಗೊಬ್ಬರ ಮತ್ತು ರಾಸಾಯನಿಕ ಉತ್ಪಾದನಾ ಕಂಪನಿಯಾಗಿದೆ. ಹಿಂದಿನ ಭಾರತೀಯ ರಸಗೊಬ್ಬರ ನಿಗಮದ ಪುನರ್ ಸಂಘಟನೆಯ ಮೇಲೆ ಇದನ್ನು 1978ರ ಮಾರ್ಚ್ 6ರಂದು ಸ್ಥಾಪಿಸಲಾಯಿತು. ಪ್ರಸ್ತುತ ಆರ್.ಸಿ.ಎಫ್.ನ ಅಧಿಕೃತ ಶೇರು ಬಂಡವಾಳ 800 ಕೋಟಿ ರೂಪಾಯಿಗಳಾಗಿದ್ದು, ಇದರ ಪಾವತಿಸಿದ ಬಂಡವಾಳ (ಪೈಯ್ಡ್ ಅಪ್ ಕ್ಯಾಪಿಟಲ್) 551.69 ಕೋಟಿ ರೂಪಾಯಿಗಳಾಗಿದೆ. ಕಂಪನಿಗೆ 1997ರಲ್ಲಿ ಪ್ರತಿಷ್ಠಿತ “ಮಿನಿ ರತ್ನ’ ಸ್ಥಾನಮಾನವನ್ನು ನೀಡಲಾಗಿದೆ. ಆರ್.ಸಿ.ಎಫ್.ನ 48,849.74 ಚದರ ಮೀಟರ್ (8265 ಚದರ ಮೀಟರ್  ಅನ್ ಎನ್ಕಂಬರ್ಡ್ /ಮುಕ್ತ ಭೂಮಿ ಮತ್ತು  40584.74 ಚದರ ಮೀಟರ್ ಎನ್ಕಂಬರ್ಡ್ ಭೂಮಿ)ಯನ್ನು ಎಂ.ಎಂ.ಆರ್.ಡಿ.ಎ. ವಶಪಡಿಸಿಕೊಂಡಿದ್ದು, ಪೂರ್ವ ಮುಕ್ತ ಮಾರ್ಗ –ಅನಿಕ್ ಪಂಜಾರಪೋಲ್ ಸಂಪರ್ಕ ರಸ್ತೆ (ಎ.ಪಿ.ಎಲ್.ಆರ್.) ನಿರ್ಮಾಣ ಪೂರ್ಣಗೊಳಿಸಿದೆ ಮತ್ತು 2014ರಲ್ಲಿ ಸಾರ್ವಜನಿಕರ ಬಳಕೆಗೆ ಇದು ಮುಕ್ತವಾಗಿದೆ.  8265 ಚದರ ಮೀಟರ್ ಅನ್ ಎನ್ಕಂಬರ್ಡ್ /ಮುಕ್ತ ಭೂಮಿಗೆ ಪ್ರತಿಯಾಗಿ ಎಂ.ಎಂ.ಆರ್.ಡಿ.ಎ. ನೀಡಿದ 16530 ಚದರ ಮೀಟರ್ ಟಿ.ಡಿ.ಆರ್. ಪ್ರಮಾಣಪತ್ರವನ್ನು ಆರ್.ಸಿ.ಎಫ್. 1.11.2017ರಲ್ಲಿ ಮಧ್ಯಂತರ ಪರಿಹಾರವಾಗಿ ಪಡೆದಿದೆ. 40584.74 ಚದರ ಮೀಟರ್ ಅಳತೆಯ ಎನ್ಕಂಬರ್ಡ್ ಭೂಮಿಗಾಗಿ ಆರ್.ಸಿ.ಎಫ್. ಕ್ಲೇಮ್ ಮಾಡಿರುವ ಟಿಡಿಆರ್/ಪರಿಹಾರವನ್ನು ಆರ್ಬಿಟ್ರೇಟರ್ ನಿರ್ಧರಿಸಿದ್ದಾರೆ.

 ಆರ್.ಸಿ.ಎಫ್. ಕಾಲೋನಿಯಿಂದ  ಮುಂಬೈ ಅಭಿವೃದ್ಧಿ ಯೋಜನೆಯಡಿ ತಮ್ಮ ಆಂತರಿಕ ರಸ್ತೆಗಳನ್ನು ಕೈಬಿಡುವಂತೆ ಆರ್.ಸಿ.ಎಫ್. ದೀರ್ಘಕಾಲದಿಂದ ಎಂ.ಸಿ.ಜಿ.ಎಂ.ಗೆ ಒತ್ತಾಯಿಸುತ್ತಿತ್ತು. ತದನಂತರ ಆರ್.ಸಿ.ಎಫ್. ಪರಸ್ಪರರು ಒಪ್ಪಿದ ನಿಬಂಧನೆಗಳಿಗೆ ಒಳಪಟ್ಟು ಟಿಡಿಆರ್ ಪರಿಹಾರದ ಬದಲಾಗಿ 16000 ಚದರ ಮೀಟರ್ ಜಮೀನನ್ನು (ನಿವೇಶನದ ಭೌತಿಕ ಅಳತೆಗೆ ಒಳಪಟ್ಟು) 18.3 ಮೀಟರ್ ಡಿ.ಪಿ. ರಸ್ತೆ ನಿರ್ಮಿಸುವ ಸಲುವಾಗಿ ಹಸ್ತಾಂತರಿಸಲು ಒಪ್ಪಿಗೆ ಸೂಚಿಸಿತು.

 ಉದ್ದೇಶಿತ ಆರ್.ಸಿ.ಎಫ್. ಟೌನ್ ಷಿಪ್ ಎದುರಿನ 331.96 ಚದರ ಮೀಟರ್ ಗಳಷ್ಟು ಆರ್.ಸಿ.ಎಫ್. ಜಮೀನನ್ನು ಎಂ.ಸಿ.ಜಿ.ಎಂ. ತನ್ನ ಅಭಿವೃದ್ಧಿ ಯೋಜನೆಯಲ್ಲಿ ಸಾರ್ವಜನಿಕ ರಸ್ತೆ ಅಗಲೀಕರಣಕ್ಕೆ ಮೀಸಲಿಟ್ಟಿರುವುದಾಗಿ ತೋರಿಸಿತು. ಎಂ.ಸಿ.ಜಿ.ಎಂ.ನ ಅಭಿವೃದ್ಧಿ ನಿಯಂತ್ರಣ ನಿಯಮ 1991ರನ್ವಯ ಮೀಸಲು ಜಮೀನಿನ ಪ್ರಕರಣಗಳಲ್ಲಿ ಜಮೀನನ್ನು ಎಂ.ಸಿ.ಜಿ.ಎಂ.ಗೆ ರಸ್ತೆ, ಸೆಟ್ ಬ್ಯಾಕ್ ಪ್ರದೇಶ ಎಂದು ವಶಕ್ಕೆ ನೀಡುವುದು ಕಡ್ಡಾಯವಾಗಿರುತ್ತದೆ.
 

****



(Release ID: 1545964) Visitor Counter : 76