ಪ್ರಧಾನ ಮಂತ್ರಿಯವರ ಕಛೇರಿ

ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರ ಗೌರವಧನ ಹೆಚ್ಚಳ ಘೋಷಿಸಿದ ಪ್ರಧಾನಿ 

Posted On: 11 SEP 2018 1:30PM by PIB Bengaluru

ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರ ಗೌರವಧನ ಹೆಚ್ಚಳ ಘೋಷಿಸಿದ ಪ್ರಧಾನಿ 
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರ ಗೌರವ ಧನವನ್ನು ಹೆಚ್ಚಳ ಮಾಡುವ ಮಹತ್ವದ ಘೋಷಣೆ ಮಾಡಿದರು. ಲಕ್ಷಾಂತರ ಆಶಾ, ಅಂಗನವಾಡಿ ಮತ್ತು ಎ.ಎನ್.ಎಂ. ಕಾರ್ಯಕರ್ತರೊಂದಿಗೆ ಇಂದು ನಡೆಸಿದ ವಿಡಿಯೋ ಬ್ರಿಜ್ ಸಂವಾದದ ವೇಲೆ ಪ್ರಧಾನಿಯವರು ಮಾಡಿದ ಈ ಘೋಷಣೆ ಮುಂದಿನ ತಿಂಗಳಿನಿಂದ ಜಾರಿಗೆ ಬರಲಿದೆ. 

ಕೇಂದ್ರ ಸರ್ಕಾರ ಆಶಾ ಕಾರ್ಯಕರ್ತರಿಗೆ ನೀಡುತ್ತಿರುವ ವಾಡಿಕೆಯ ಪ್ರೋತ್ಸಾಹಕಗಳನ್ನು ದುಪ್ಪಟ್ಟು ಮಾಡುವ ಘೋಷಣೆಯನ್ನೂ ಪ್ರಧಾನಮಂತ್ರಿ ಮಾಡಿದರು. ಇದರ ಜೊತೆಗೆ ಎಲ್ಲ ಆಶಾ ಕಾರ್ಯಕರ್ತರು ಮತ್ತು ಅವರ ಸಹಾಯಕರುಗಳಿಗೆ ಪ್ರಧಾನಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ ಮತ್ತು ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆ ಅಡಿಯಲ್ಲಿ ಉಚಿತ ವಿಮೆ ಸೌಲಭ್ಯ ಒದಗಿಸುವುದಾಗಿ ತಿಳಿಸಿದರು. 

ಅಂಗನವಾಡಿ ಕಾರ್ಯಕರ್ತರಿಗೆ ನೀಡಲಾಗುತ್ತಿರುವ ಗೌರವಧನವನ್ನು ಗಣನೀಯವಾಗಿ ಹೆಚ್ಚಳ ಮಾಡುವುದಾಗಿಯೂ ಪ್ರಧಾನಮಂತ್ರಿ ಪ್ರಕಟಿಸಿದರು. ಈವರೆಗೆ 3 ಸಾವಿರ ರೂಪಾಯಿ ಪಡೆಯುತ್ತಿರುವವರು, ಇನ್ನು ಮುಂದೆ ರೂಪಾಯಿ 4,500 ಪಡೆಯಲಿದ್ದಾರೆ. ಅದೇ ರೀತಿ, 2200 ರೂಪಾಯಿ ಪಡೆಯುತ್ತಿರುವವರು 3500 ರೂಪಾಯಿ ಪಡೆಯಲಿದ್ದಾರೆ. ಅಂಗನವಾಡಿ ಸಹಾಯಕರ ಗೌರವಧನವನ್ನು ಸಹ 1500 ರೂಪಾಯಿಗಳಿಂದ 2250 ರೂಪಾಯಿಗಳಿಗೆ ಏರಿಕೆ ಮಾಡಲಾಗಿದೆ. 

ತಾಂತ್ರಿಕತೆ ಅಂದರೆ ಕಾಮನ್ ಅಪ್ಲಿಕೇಷನ್ ತಂತ್ರಾಂಶ (ಐಸಿಡಿಎಸ್-ಸಿ.ಎ.ಎಸ್.) ಬಳಸುತ್ತಿರುವ ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕರು ಹೆಚ್ಚುವರಿ ಪ್ರೋತ್ಸಾಹಕ ಪಡೆಯಲಿದ್ದಾರೆ ಎಂದೂ ಪ್ರಧಾನಮಂತ್ರಿಯವರು ಪ್ರಕಟಿಸಿದರು. ಈ ಪ್ರೋತ್ಸಾಹಕವು ಉತ್ತಮ ಪ್ರದರ್ಶನ ಆಧಾರಿತವಾಗಿದ್ದು, 250 ರೂಪಾಯಿಗಳಿಂದ 500 ರೂಪಾಯಿಗಳವರೆಗೂ ಇರುತ್ತದೆ. 

ಪ್ರಧಾನಮಂತ್ರಿಯವರು ದೇಶಾದ್ಯಂತ ಮೂರು ತಂಡಗಳೊಂದಿಗೆ – ಅಂದರೆ ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು ಮತ್ತು ಎ.ಎನ್.ಎಂ. (ಆಕ್ಸಿಲರಿ ನರ್ಸ್ ಮಿಡ್ ವೈಫ್)ಗಳೊಂದಿಗೆ ಸಂವಾದ ನಡೆಸಿದರು. ದೇಶದಲ್ಲಿ ಅಪೌಷ್ಟಿಕತೆ ತಗ್ಗಿಸಲು – ಪೊಷಣ್ ಅಭಿಯಾನದ ಗುರಿಯನ್ನು ಸಾಧಿಸಲು ಆರೋಗ್ಯ ಮತ್ತು ಪೌಷ್ಟಿಕ ಸೇವೆಗಳ ವಿತರಣೆಯನ್ನು ಸುಧಾರಿಸಲು ನವೀನ ವಿಧಾನಗಳನ್ನು ಮತ್ತು ತಂತ್ರಜ್ಞಾನವನ್ನು ಬಳಸಲು, ಒಗ್ಗೂಡಿ ಶ್ರಮಿಸುವ ಪ್ರಯತ್ನಗಳಿಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. 



(Release ID: 1545735) Visitor Counter : 53