ಪ್ರಧಾನ ಮಂತ್ರಿಯವರ ಕಛೇರಿ

ಯು.ಸ್.ಐ.ಬಿ.ಸಿ ಮಂಡಳಿ ಸದಸ್ಯರಿಂದ ಪ್ರಧಾನಮಂತ್ರಿ ಭೇಟಿ 

Posted On: 07 SEP 2018 3:39PM by PIB Bengaluru

ಯು.ಸ್.ಐ.ಬಿ.ಸಿ ಮಂಡಳಿ ಸದಸ್ಯರಿಂದ ಪ್ರಧಾನಮಂತ್ರಿ ಭೇಟಿ 
 

ಯುನೈಟೆಡ್ ಸ್ಟೇಟ್ಸ್ ಇಂಡಿಯಾ ಬುಸಿನೆಸ್ ಕೌನ್ಸಿಲ್ (ಯು.ಸ್.ಐ.ಬಿ.ಸಿ ) ಮಂಡಳಿ ಸದಸ್ಯರು ಪ್ರಧಾನಮಂತ್ರಿ ಅವರನ್ನು ಭೇಟಿಯಾದರು 

ಈ ವಾರದ ಮೊದಲ ಭಾಗದಲ್ಲಿ ಮುಂಬಯಿಯಲ್ಲಿ ನಡೆದ ಇಂಡಿಯ ಐಡಿಯಾ ಫೋರಮ್ ಸಮಾವೇಶದಲ್ಲಿ ಹೊರಹೊಮ್ಮಿದ ವಿಷಯಗಳನ್ನು ಸದಸ್ಯರು ಪ್ರಧಾನಮಂತ್ರಿ ಅವರಿಗೆ ವಿವರಿಸಿದರು. ಭಾರತದ ಸಿ.ಎಸ್.ಆರ್ ಚಟುವಟಿಕೆಗಳನ್ನು ಅರ್ಥಪೂರ್ಣವಾಗಿ ವಿಸ್ತರಿಸಲು ಮತ್ತು ದ್ವೀಪಕ್ಷೀಯ ವ್ಯಾಪಾರದಲ್ಲಿ $500 ಬಿಲ್ಲಿಯನ್ ಗುರಿ ತಲಪಲು ಮಾಡ ಬೇಕಾದ ಪೂರ್ವ ಸಿದ್ದತೆಗಳನ್ನು ಈ ವ್ಯಾಪಾರಿ ನಾಯಕರು ವ್ಯಕ್ತಪಡಿಸಿದರು. 

ಸದಸ್ಯರೊಂದಿಗೆ ಮಾತುಕತೆ ನಡೆಸಿದ ಸಂದರ್ಭದಲ್ಲಿ ಭಾರತ ಸರಕಾರ ಹಮ್ಮಿಕೊಂಡ ಹಲವಾರು ಪರಿವರ್ತನಾಕ್ರಮಗಳನ್ನು ಪ್ರಧಾನಮಂತ್ರಿ ಅವರು ವಿವರಿಸಿದರು. 

ಭಾರತದಲ್ಲಿರುವ ಬಂಡವಾಳ ಹೂಡಿಕೆಯ ವಿಫುಲ ಅವಕಾಶಗಳ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿ ಅವರು, ಅಮೇರಿಕಾದ ಹೂಡಿಕೆ ಸಮುದಾಯಗಳು ಈ ನಿಟ್ಟಿನಲ್ಲಿ ದೇಶದಲ್ಲಿ ಪಾಲ್ಗೊಳ್ಳಲು ಪ್ರೋತ್ಸಾಹ ನೀಡಬೇಕು ಎಂದರು. 

ಭಾರತ ಮತ್ತು ಯು.ಎಸ್ ಗಳು ಹಂಚಿಕೊಂಡ ಮೌಲ್ಯಗಳನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ ಅವರು, ಈ ಎರಡೂ ದೇಶಗಳ ನಡುವೆ ಇನ್ನೂ ಬೃಹತ್ ಮಟ್ಟದಲ್ಲಿ ಜನರಿಂದ – ಜನರಿಗೆ ಎಂಬ ನಿಟ್ಟಿನಲ್ಲಿ ವಿನಿಮಯಗಳಾಗಬೇಕು ಎಂದರು 



(Release ID: 1545463) Visitor Counter : 56