ಸಂಪುಟ

ವಿದೇಶಗಳಲ್ಲಿ ಪ್ರಮುಖ ಮೂಲಸೌಕರ್ಯ ಯೋಜನೆಗಳ ಬಿಡ್ಡಿಂಗ್ ನಲ್ಲಿ ಭಾಗವಹಿಸುವ ಭಾರತೀಯ ಸಂಸ್ಥೆಗಳನ್ನು ಬೆಂಬಲಿಸುವ ರಿಯಾಯಿತಿ ಹಣಕಾಸು ಯೋಜನೆ(ಸಿಎಫ್ಎಸ್) ವಿಸ್ತರಣೆಗೆ ಕೇಂದ್ರ ಸಂಪುಟ ಅನುಮೋದನೆ 

Posted On: 01 AUG 2018 6:14PM by PIB Bengaluru

ವಿದೇಶಗಳಲ್ಲಿ ಪ್ರಮುಖ ಮೂಲಸೌಕರ್ಯ ಯೋಜನೆಗಳ ಬಿಡ್ಡಿಂಗ್ ನಲ್ಲಿ ಭಾಗವಹಿಸುವ ಭಾರತೀಯ ಸಂಸ್ಥೆಗಳನ್ನು ಬೆಂಬಲಿಸುವ ರಿಯಾಯಿತಿ ಹಣಕಾಸು ಯೋಜನೆ(ಸಿಎಫ್ಎಸ್) ವಿಸ್ತರಣೆಗೆ ಕೇಂದ್ರ ಸಂಪುಟ ಅನುಮೋದನೆ 
 

        ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ವಿದೇಶಗಳಲ್ಲಿ ಪ್ರಮುಖ ಕಾರ್ಯತಂತ್ರಮೂಲಸೌಕರ್ಯ ಯೋಜನೆಗಳ ಬಿಡ್ಡಿಂಗ್ ನಲ್ಲಿ ಭಾಗವಹಿಸುವ ಭಾರತೀಯ ಸಂಸ್ಥೆಗಳನ್ನು ಬೆಂಬಲಿಸುವ ರಿಯಾಯಿತಿ ಹಣಕಾಸು ಯೋಜನೆ(ಸಿಎಫ್ಎಸ್) ವಿಸ್ತರಣೆಗೆ ಸಂಪುಟ ಅನುಮೋದನೆ ನೀಡಿದೆ.

 

ವಿವರಗಳು  :

        ಸಿಎಫ್ಎಸ್ ಅಡಿ ಭಾರತ ಸರ್ಕಾರ 2015-16ರಿಂದ ವಿದೇಶಗಳಲ್ಲಿ ಪ್ರಮುಖ ಮೂಲಸೌಕರ್ಯ ಕಾರ್ಯತಂತ್ರ ಯೋಜನೆಗಳ ಬಿಡ್ಡಿಂಗ್ ನಲ್ಲಿಭಾಗವಹಿಸುವ ಭಾರತೀಯ ಸಂಸ್ಥೆಗಳನ್ನು ಬೆಂಬಲಿಸಲಾಗುವುದು. ಈ ಯೋಜನೆಯ ಉದ್ದೇಶ ಪ್ರಸ್ತುತ ಅಗತ್ಯವಿರುವ ಹಿನ್ನೆಲೆಯಲ್ಲಿ ಆ ಯೋಜನೆಯಅವಧಿಯನ್ನು 2018ರಿಂದ 2023ರ ವರೆಗೆ 5 ವರ್ಷಗಳ ಕಾಲ ವಿಸ್ತರಿಸಲು

ಉದ್ದೇಶಿಸಲಾಗಿದೆ.

 

ಆರ್ಥಿಕ ಪರಿಣಾಮಗಳು :

        ಆರ್ಥಿಕ ವ್ಯವಹಾರಗಳ ಇಲಾಖೆ ವತಿಯಿಂದ ಪ್ರತಿ ವರ್ಷ ಸಾಲ ಒದಗಿಸುವ ಬ್ಯಾಂಕ್ ಗೆ ಸಮಾನ ಬಡ್ಡಿ ನೆರವು(ಐಇಎಸ್) ಪಾವತಿಯಿಂದಾಗಿ ಈಕೆಳಗಿನಂತೆ ಆರ್ಥಿಕ ಹೊರೆ ತಗುಲಲಿದೆ.

ವರ್ಷ

2018-19

 

2019-20

 

2020-21

 

2021-22

 

2022-23

 

ಒಟ್ಟಾರೆ

ಐಇಎಸ್ಮೊತ್ತ(ಅಮೆರಿಕನ್ಡಾಲರ್ ನಲ್ಲಿ)

6.5

 

10.00

 

18.75

 

29.00

 

32.00

 

96.25

 

ಐಇಎಸ್ಮೊತ್ತ(ಭಾರತೀಯರೂಪಾಯಿ ಮೌಲ್ಯ - ಕೋಟಿಗಳಲ್ಲಿ)

42.25

 

65.00

 

121.88

 

188.50

 

208.00

 

625.63

 

 

ಸೂಚನೆ :

        ಈ ಅಂದಾಜು ಸಮಾನ ಬಡ್ಡಿ ನೆರವು ಐಇಎಸ್ ಹಾಲಿ ಕೈಗೊಂಡಿರುವ ಯೋಜನೆಗಳಿಗೆ ಮಾತ್ರ ಅನ್ವಯ

 

ಪ್ರಮುಖ ಪರಿಣಾಮಗಳು :

        ಸಿಎಸ್ಎಫ್ ಯೋಜನೆ ಆರಂಭಕ್ಕೂ ಮುನ್ನ ವಿದೇಶಗಳಲ್ಲಿ ಬೃಹತ್ ಯೋಜನೆಗಳಲ್ಲಿ ಭಾರತೀಯ ಸಂಸ್ಥೆಗಳು ಬಂಡವಾಳ ಹೂಡುವುದು ಅತಿಕಷ್ಟವಾಗಿತ್ತು. ಚೀನಾ, ಜಪಾನ್, ಯೂರೋಪ್ ಮತ್ತು ಅಮೆರಿಕ ಮತ್ತಿತರ ರಾಷ್ಟ್ರಗಳು ತಮ್ಮ ದೇಶದ ಕಂಪನಿಗಳಿಗೆ ಕಡಿಮೆ ಬಡ್ಡಿದರಲ್ಲಿ ದೀರ್ಘಾವಧಿ ಸಾಲನೀಡುವ ವ್ಯವಸ್ಥೆಯನ್ನು ಹೊಂದಿದ್ದವು. ಹಾಗಾಗಿ ಅವು ಉತ್ತಮ ಹಣಕಾಸು

ಬೆಂಬಲವನ್ನು ಗಳಿಸಿದ್ದವು.         

ಕಾರ್ಯತಂತ್ರ ಹಿತಾಸಕ್ತಿಯನ್ನು ಕಾಯುವ ಉದ್ದೇಶದಿಂದ ಕೈಗೊಳ್ಳುವ ಯೋಜನೆಗಳಿಗೆ ಸಿಎಸ್ಎಫ್ ಮೂಲಕ ಭಾರೀ ಪ್ರಮಾಣದ ನೆರವು ನೀಡಲಾಗುವುದು. ಭಾರತೀಯ ಸಂಸ್ಥೆಗಳು ಭಾರತದಲ್ಲಿ ಉದ್ಯೋಗ, ವಸ್ತುಗಳಿಗೆ ಬೇಡಿಕೆ ಮತ್ತು ಯಂತ್ರೋಪಕರಣಗಳ ಬಳಕೆಗೆ ಅವಕಾಶವಿದೆ. ಅಲ್ಲದೆ ಭಾರತದ ಬಗೆಗೆಒಳ್ಳೆಯ ಅಭಿಪ್ರಾಯವನ್ನು ಸೃಷ್ಟಿಸುವಲ್ಲಿ ನೆರವಾಗಲಿದೆ.

 

ಅನುಷ್ಠಾನ ಕಾರ್ಯತಂತ್ರ ಮತ್ತು ಗುರಿ :

        ಈ ಯೋಜನೆಅಡಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಭಾರತದ ಕಾರ್ಯತಂತ್ರ ಹಿತಾಸಕ್ತಿಯನ್ನು ಗಮನದಲ್ಲಿಸಿರಿಕೊಂಡು ವಿಶೇಷಯೋಜನೆಗಳನ್ನು ಆಯ್ಕೆಮಾಡಿ, ಅವುಗಳನ್ನು ಆರ್ಥಿಕ ವ್ಯವಹಾರಗಳ ಇಲಾಖೆ(ಡಿಇಎ)ಗೆ ಕಳುಹಿಸಿ ಕೊಡಲಿದೆ.

 

        ಯಾವ ಯೋಜನೆ ಪ್ರಮುಖ ಕಾರ್ಯತಂತ್ರವನ್ನು ಒಳಗೊಂಡಿದೆ ಮತ್ತು ಹಣಕಾಸು ನೆರವಿಗೆ ಅರ್ಹವಾಗಿದೆ ಎಂಬುದನ್ನು ಪ್ರತಿಯೊಂದು ಪ್ರಕರಣಗಳನ್ನುಆಧರಿಸಿ, ಆರ್ಥಿಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ನೇತೃತ್ವದ ಸಮಿತಿ ನಿರ್ಧರಿಸಲಿದೆ. ಅದರಲ್ಲಿ ವೆಚ್ಚ ಇಲಾಖೆ, ವಿದೇಶಾಂಗ ವ್ಯವಹಾರಗಳಸಚಿವಾಲಯ, ಕೈಗಾರಿಕಾ ಉತ್ತೇಜನ ಮತ್ತು ನೀತಿ ಇಲಾಖೆ, ವಾಣಿಜ್ಯ ಇಲಾಖೆ, ಹಣಕಾಸು ಸೇವೆಗಳ ಇಲಾಖೆ ಮತ್ತು ಗೃಹ ವ್ಯವಹಾರಗಳ ಸಚಿವಾಲಯದಸದಸ್ಯರಿರುತ್ತಾರೆ. ಡೆಪ್ಯುಟಿ ನ್ಯಾಷನಲ್ ಸೆಕ್ಯುರಿಟಿ ಅಡ್ವೈಸರ್ ಕೂಡ ಈ ಸಮಿತಿಯ ಸದಸ್ಯರಾಗಿರುತ್ತಾರೆ. ಒಮ್ಮೆ ಡಿಇಎ ಯೋಜನೆಗೆ ಅನುಮೋದನೆನೀಡಿದರೆ ಅದು ಸಿಎಫ್ಎಸ್ ಅಡಿಯಲ್ಲಿ ಯಾವ ಯೋಜನೆಗೆ ಹಣಕಾಸು ನೆರವು ನೀಡಬೇಕು ಎಂಬ ಬಗ್ಗೆ ಎಕ್ಸಿಮ್ ಬ್ಯಾಂಕ್ ಗೆ ಅಧಿಕೃತ ಪತ್ರ ರವಾನಿಸಲಿದೆ.

 

        ಪ್ರಸ್ತುತ ಈ ಯೋಜನೆಯನ್ನು ಭಾರತೀಯ ಆಮದು ಮತ್ತು ರಫ್ತು ಬ್ಯಾಂಕ್ನಿರ್ವಹಿಸುತ್ತಿದ್ದು, ಅದು ರಿಯಾಯಿತಿ ದರದಲ್ಲಿ ಹಣಕಾಸು ನೆರವು ಒದಗಿಸಲುಮಾರುಕಟ್ಟೆಯಿಂದ ಸಂಪನ್ಮೂಲಗಳನ್ನು ಸಂಗ್ರಹಿಸಲಿದೆ. ಭಾರತ ಸರ್ಕಾರ, ಇದಕ್ಕೆ ಖಾತ್ರಿ ಒದಗಿಸಲಿದೆ ಮತ್ತು ಎಕ್ಸಿಮ್ ಬ್ಯಾಂಕ್ ಗೆ ಶೇಕಡ 2ರಷ್ಟು ಬಡ್ಡಿನೆರವು ನೀಡಲಿದೆ.

 

ಹಿನ್ನೆಲೆ :

        ಈ ಯೋಜನೆಯಡಿ ಭಾರತ ಸರ್ಕಾರ ಎಕ್ಸಿಮ್ ಬ್ಯಾಂಕ್ ಗೆ ಖಾತರಿ ಒದಗಿಸುವ ಜತೆಗೆ ಶೇಕಡ 2ರಷ್ಟು ಬಡ್ಡಿಯನ್ನು ಭರಿಸಲಿದೆ. ಎಕ್ಸಿಮ್ ಬ್ಯಾಂಕ್ಯಾವುದೇ ವಿದೇಶಿ ಸರ್ಕಾರ ಅಥವಾ ವಿದೇಶಿ ಸರ್ಕಾರಿ ಒಡೆತನದ ಸಂಸ್ಥೆಗಳು, ಭಾರತೀಯ ಸಂಸ್ಥೆಗಳು ಜಾರಿಗೊಳಿಸುವ ಯೋಜನೆಗಳಿಗೆ ಆರ್ಥಿಕ ನೆರವುಒದಗಿಸಲಿದೆ.

 

        ಈ ಯೋಜನೆಅಡಿ ಎಕ್ಸಿಮ್ ಬ್ಯಾಂಕ್ ಸಾಲವನ್ನು ಎಲ್ಐಬಿಒಆರ್ (ಆರು ತಿಂಗಳ ಅವಧಿಗೆ) +100ಬಿಪಿಎಸ್ ಹೆಚ್ಚಾಗದ ದರದಲ್ಲಿ ಸಾಲವನ್ನುಒದಗಿಸಲಿದೆ. ಈ ಸಾಲದ ಮರುಪಾವತಿಗೆ ವಿದೇಶಿ ಸರ್ಕಾರಗಳು ಗ್ಯಾರಂಟಿ ನೀಡಲಿವೆ.

 

 

**********



(Release ID: 1541235) Visitor Counter : 126