ಸಂಪುಟ
2010 ರಲ್ಲಿ ಸಹಿ ಹಾಕಲಾದ ಪರಸ್ಪರ ಮಾನ್ಯತೆಯ ಒಪ್ಪಂದ (ಎಮ್ಆರ್.ಎ.)ಕ್ಕೆ ಸಂಪುಟದ ಅನುಮೋದನೆ, ಭಾರತೀಯ ಚಾರ್ಟರ್ಡ್ ಅಕೌಂಟೆಂಟರುಗಳ ಸಂಸ್ಥೆ ಮತ್ತು ಐರ್ಲೆಂಡ್ ನ ಪ್ರಮಾಣೀಕೃತ ಸಾರ್ವಜನಿಕ ಲೆಕ್ಕಪತ್ರಗಳ ಸಂಸ್ಥೆಗಳ ನಡುವೆ ಹೊಸ ಎಂ.ಆರ್.ಎ.ಗೂ ಅನುಮೋದನೆ
Posted On:
18 JUL 2018 5:33PM by PIB Bengaluru
2010 ರಲ್ಲಿ ಸಹಿ ಹಾಕಲಾದ ಪರಸ್ಪರ ಮಾನ್ಯತೆಯ ಒಪ್ಪಂದ (ಎಮ್ಆರ್.ಎ.)ಕ್ಕೆ ಸಂಪುಟದ ಅನುಮೋದನೆ, ಭಾರತೀಯ ಚಾರ್ಟರ್ಡ್ ಅಕೌಂಟೆಂಟರುಗಳ ಸಂಸ್ಥೆ ಮತ್ತು ಐರ್ಲೆಂಡ್ ನ ಪ್ರಮಾಣೀಕೃತ ಸಾರ್ವಜನಿಕ ಲೆಕ್ಕಪತ್ರಗಳ ಸಂಸ್ಥೆಗಳ ನಡುವೆ ಹೊಸ ಎಂ.ಆರ್.ಎ.ಗೂ ಅನುಮೋದನೆ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, 2010ರಲ್ಲಿ ಅಂಕಿತ ಹಾಕಲಾದ ಪರಸ್ಪರ ಮಾನ್ಯತೆಯ ಒಪ್ಪಂದ (ಎಂ.ಆರ್.ಎ)ಗೆ ತನ್ನ ಪೂರ್ವಾನ್ವಯ ಅನುಮೋದನೆ ನೀಡಿದೆ ಮತ್ತು ಐರ್ಲೆಂಡ್ ಹಾಗೂ ಭಾರತದಲ್ಲಿನ ತಮ್ಮ ಸದಸ್ಯರ ಹಿತಾಸಕ್ತಿಗಳನ್ನು ಮುಂದುವರಿಸಲು, ಲೆಕ್ಕಪತ್ರ ವೃತ್ತಿಯ ಅಭಿವೃದ್ಧಿಗೆ ಧನಾತ್ಮಕವಾಗಿ ಕೊಡುಗೆ ನೀಡಲು, ಲೆಕ್ಕಶಾಸ್ತ್ರದ ಜ್ಞಾನ, ವೃತ್ತಿಪರತೆ ಮತ್ತು ಬೌದ್ಧಿಕ ಅಭಿವೃದ್ಧಿಯ ಪ್ರಗತಿಗೆ ಸಂಬಂಧಿಸಿದಂತೆ ಪರಸ್ಪರ ಸಹಕಾರ ಚೌಕಟ್ಟನ್ನು ಉತ್ತೇಜಿಸಲು ಭಾರತೀಯ ಚಾರ್ಟರ್ಡ್ ಅಕೌಂಟೆಂಟರುಗಳ ಸಂಸ್ಥೆ (ಐ.ಸಿ.ಎ.ಐ.) ಮತ್ತು ಮತ್ತು ಐರ್ಲೆಂಡ್ ನ ಪ್ರಮಾಣೀಕೃತ ಸಾರ್ವಜನಿಕ ಲೆಕ್ಕಪತ್ರಗಳ ಸಂಸ್ಥೆ (ಸಿಪಿಎ)ಗಳ ನಡುವೆ ಹೊಸ ಎಂ.ಆರ್.ಎ.ಗೂ ತನ್ನ ಸಮ್ಮತಿ ಸೂಚಿಸಿದೆ.
ಪರಿಣಾಮಗಳು:
ಈ ಎಂ.ಆರ್.ಎ. ಎರಡೂ ದೇಶಗಳ ಅತ್ಯುತ್ತಮ ರೂಢಿಗಳಿಗೆ ಒಡ್ಡಿಕೊಳ್ಳಲು ಎರಡೂ ಕಡೆಯ ಸದಸ್ಯರಿಗೆ ಅವಕಾಶಗಳನ್ನು ಒದಗಿಸುತ್ತದೆ ಮತ್ತು ಹೊಸ ಮಾರುಕಟ್ಟೆಗಳ ಬೇಡಿಕೆಯನ್ನು ಪೂರೈಸಲು ಅವುಗಳ ಆರೋಹ್ಯತೆಗನುಗುಣವಾಗಿ ವಿಸ್ತರಣೆ ಮಾಡುತ್ತದೆ.
ಹಿನ್ನೆಲೆ:
ಭಾರತೀಯ ಚಾರ್ಟರ್ಡ್ ಅಕೌಂಟೆಂಟರುಗಳ ಸಂಸ್ಥೆ (ಐ.ಸಿ.ಎ.ಐ.) ಒಂದು ಶಾಸನಾತ್ಮಕ ಸಂಸ್ಥೆಯಾಗಿದ್ದು, ಭಾರತದ ಸಂಸತ್ತಿನ ಕಾಯಿದೆಯಡಿ ಸ್ಥಾಪಿತವಾಗಿದ್ದು, ಚಾರ್ಟರ್ಡ್ ಅಕೌಂಟೆಂಟರುಗಳ ಕಾಯಿದೆ 1949, ಭಾರತದಲ್ಲ ಚೌರ್ಟರ್ಡ್ ಅಕೌಂಟೆನ್ಸಿಯ ವೃತ್ತಿಯನ್ನು ನಿಯಂತ್ರಿಸುತ್ತದೆ. ಐರ್ಲೆಂಡ್ ನ ಪ್ರಮಾಣೀಕೃತ ಸಾರ್ವಜನಿಕ ಲೆಕ್ಕಪತ್ರ ಸಂಸ್ಥೆ (ಸಿಪಿಎ ಐರ್ಲೆಂಡ್) ಒಂದು ಪ್ರಮುಖ ಐರಿಶ್ ಲೆಕ್ಕಪತ್ರದ ಕಾಯವಾಗಿದ್ದು 5000 ವಿದ್ಯಾರ್ಥಿಗಳು ಮತ್ತು ಸದಸ್ಯರನ್ನು ಒಳಗೊಂಡಿದೆ.
(Release ID: 1539389)
Visitor Counter : 103