ಪ್ರಧಾನ ಮಂತ್ರಿಯವರ ಕಛೇರಿ

ಮಿರ್ಜಾಪುರದಲ್ಲಿ ಪ್ರಧಾನಮಂತ್ರಿ, ಬನ್ಸಾಗರ್ ಕಾಲುವೆ ಯೋಜನೆ ದೇಶಕ್ಕೆಸಮರ್ಪಣೆ

Posted On: 15 JUL 2018 12:25PM by PIB Bengaluru

ಮಿರ್ಜಾಪುರದಲ್ಲಿ ಪ್ರಧಾನಮಂತ್ರಿ, ಬನ್ಸಾಗರ್ ಕಾಲುವೆ ಯೋಜನೆ ದೇಶಕ್ಕೆಸಮರ್ಪಣೆ 
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಮಿರ್ಜಾಪುರದಲ್ಲಿಂದು ಬನ್ಸಾರ್ ನಾಲೆ ಯೋಜನೆಯನ್ನು ದೇಶಕ್ಕೆ ಸಮರ್ಪಿಸಿದರು. ಈ ಯೋಜನೆಯು ವಲಯದಲ್ಲಿ ನೀರಾವರಿಗೆ ಚೈತನ್ಯ ನೀಡಲಿದೆ ಮತ್ತು ಉತ್ತರ ಪ್ರದೇಶದ ಮಿರ್ಜಾಪುರ ಮತ್ತು ಅಲಹಾಬಾದ್ ಜಿಲ್ಲೆಗಳ ರೈತರಿಗೆ ದೊಡ್ಡ ಪ್ರಮಾಣದಲ್ಲಿ ನೆರವಾಗಲಿದೆ.

 

ಶ್ರೀ ನರೇಂದ್ರ ಮೋದಿ ಅವರು ಮಿರ್ಜಾಪುರ ವೈದ್ಯಕೀಯ ಕಾಲೇಜಿಗೆ ಶಿಲಾನ್ಯಾಸ ನೆರವೇರಿಸಿದರು. ರಾಜ್ಯದಲ್ಲಿ 100 ಜನೌಷಧಿ ಕೇಂದ್ರಗಳನ್ನೂ ಅವರು ಉದ್ಘಾಟಿಸಿದರು. ಮಿರ್ಜಾಪುರ ಮತ್ತು ವಾರಾಣಸಿ ನಡುವೆ ಸಂಪರ್ಕ ಕಲ್ಪಿಸಲು ಬಾಲುಘಾಟ್, ಚೌನಾರ್ ನಲ್ಲಿ ಗಂಗಾ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಸೇತುವೆಯನ್ನು ಅವರು ದೇಶಕ್ಕೆ ಸಮರ್ಪಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, ಮಿರ್ಜಾಪುರ ಪ್ರದೇಶ ಅಪಾರ ಸಾಮರ್ಥ್ಯ ಹೊಂದಿದೆ ಎಂದು ಹೇಳಿದರು. ಸೌರ ಘಟಕದ ಉದ್ಘಾಟನೆಗಾಗಿ ಫ್ರೆಂಚ್ ಅಧ್ಯಕ್ಷ ಮ್ಯಾಕ್ರಾನ್ ಅವರೊಂದಿಗೆ ಮಿರ್ಜಾಪುರಕ್ಕೆ ತಾವು ನೀಡಿದ್ದ ಹಿಂದಿನ ಭೇಟಿಯನ್ನು ಸ್ಮರಿಸಿದರು.

ಕಳೆದ ಎರಡು ದಿನಗಳಿಂದ ತಾವು ಶಿಲಾನ್ಯಾಸ ನೆರವೇರಿಸಿರುವ ಅಥವಾ ಉದ್ಘಾಟಿಸಿರುವ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಪ್ರಧಾನಮಂತ್ರಿ ಪ್ರಸ್ತಾಪಿಸಿದರು.

ಬನ್ಸಾಗರ್ ಯೋಜನೆ ಮೊದಲಿಗೆ ನಾಲ್ಕು ದಶಕಗಳ ಹಿಂದೆ ರೂಪುಗೊಂಡಿತ್ತು, 1978ರಲ್ಲೇ ಶಂಕುಸ್ಥಾಪನೆಯನ್ನೂ ನೆರವೇರಿಸಲಾಗಿತ್ತು, ಆದರೆ ಯೋಜನೆ ಅನಗತ್ಯವಾಗಿ ವಿಳಂಬವಾಯಿತು ಎಂದು ಹೇಳಿದರು. 2014ರ ತರುವಾಯ ಈ ಯೋಜನೆಯನ್ನು ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯ ಭಾಗವಾಗಿ ಮಾಡಲಾಯಿತು ಮತ್ತು ಇದನ್ನು ಪೂರ್ಣಗೊಳಿಸಲು ಸರ್ವ ಪ್ರಯತ್ನ ಮಾಡಲಾಯಿತು ಎಂದು ತಿಳಿಸಿದರು.

ರೈತರ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರ ಕೈಗೊಂಡಿರುವ ಉಪಕ್ರಮಗಳ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಮುಂಗಾರು ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನು ಇತ್ತೀಚೆಗೆ ಹೆಚ್ಚಿಸಿದ್ದನ್ನು ಉಲ್ಲೇಖಿಸಿದರು.

ಜನಾಷಧಿ ಕೇಂದ್ರಗಳೂ ಸೇರಿದಂತೆ ಬಡಜನರಿಗೆ ಕೈಗೆಟಕುವ ದರದಲ್ಲಿ ಆರೋಗ್ಯ ಆರೈಖೆ ಒದಗಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ಅವರು ಮಾತನಾಡಿದರು. ಸ್ವಚ್ಛ ಭಾರತ ಅಭಿಯಾನ ಕಾಯಿಲೆಗಳನ್ನು ತಡೆಗಟ್ಟಲು ಸಮರ್ಥವಾಗಿದೆ ಎಂದರು. ಆರೋಗ್ಯ ಖಾತ್ರಿ ಯೋಜನೆ – ಆಯುಷ್ಮಾನ್ ಭಾರತ ಶೀಘ್ರವೇ ಜಾರಿಯಾಗಲಿದೆ ಎಂದೂ ತಿಳಿಸಿದರು. ಪ್ರಧಾನಮಂತ್ರಿಯವರು ಕೇಂದ್ರ ಸರ್ಕಾರದ ವಿವಿಧ ಸಾಮಾಜಿಕ ಕಲ್ಯಾಣ ಯೋಜನೆಗಳ ಬಗ್ಗೆಯೂ ಮಾತನಾಡಿದರು.

*****


(Release ID: 1538717) Visitor Counter : 95