ಸಂಪುಟ

ಕಾನೂನು ಮತ್ತು ಸುವ್ಯವಸ್ಥೆ ಕ್ಷೇತ್ರದಲ್ಲಿ ಸಹಕಾರ ವರ್ಧನೆಗೆ ಭಾರತ-ಯುನೈಟೆಡ್ ಕಿಂಗ್ಡಮ್ ನಡುವಿನ ಒಡಂಬಡಿಕೆ ಮತ್ತು ಜಂಟಿ ಸಮಾಲೋಚನಾ ಸಮಿತಿಯ ರಚನೆಗೆ ಕೇಂದ್ರ ಸಂಪುಟ ಅಸ್ತು

Posted On: 04 JUL 2018 2:29PM by PIB Bengaluru

ಕಾನೂನು ಮತ್ತು ಸುವ್ಯವಸ್ಥೆ ಕ್ಷೇತ್ರದಲ್ಲಿ ಸಹಕಾರ ವರ್ಧನೆಗೆ ಭಾರತ-ಯುನೈಟೆಡ್ ಕಿಂಗ್ಡಮ್ ನಡುವಿನ ಒಡಂಬಡಿಕೆ ಮತ್ತು ಜಂಟಿ ಸಮಾಲೋಚನಾ ಸಮಿತಿಯ ರಚನೆಗೆ ಕೇಂದ್ರ ಸಂಪುಟ ಅಸ್ತು 
 
ಕಾನೂನು ಮತ್ತು ಸುವ್ಯವಸ್ಥೆ ಕ್ಷೇತ್ರದಲ್ಲಿ ಸಹಕಾರ ವರ್ಧನೆಗೆ ಮತ್ತು ಜಂಟಿ ಸಮಾಲೋಚನಾ ಸಮಿತಿಯನ್ನು ರಚಿಸಲು ಭಾರತ ಮತ್ತು ಯುನೈಟೆಡ್ ಕಿಂಗ್ಡಮ್ ಮಾಡಿಕೊಂಡಿದ್ದ ಒಡಂಬಡಿಕೆಗೆ ಮಾನ್ಯ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ತನ್ನ ಅನುಮೋದನೆ ನೀಡಿತು. 

ಈ ಒಡಂಬಡಿಕೆಯು ವೃತ್ತಿನಿರತ ಕಾನೂನು ಪರಿಣತರು ಮತ್ತು ಸರಕಾರಿ ಅಧಿಕಾರಿಗಳ ಅನುಭವಗಳ ಪರಸ್ಪರ ವಿನಿಮಯ, ಅವರ ತರಬೇತಿ, ನಾನಾ ನ್ಯಾಯಾಲಯಗಳು ಮತ್ತು ನ್ಯಾಯಾಧಿಕರಣಗಳ ಮುಂದೆ ಇರುವ ವಿವಾದಗಳ ಇತ್ಯರ್ಥ, ಮತ್ತು ಉದ್ದೇಶಿತ ಜಂಟಿ ಸಮಾಲೋಚನಾ ಸಮಿತಿಯ ರಚನೆ ಮುಂತಾದ ವಿಚಾರಗಳ ಕಡೆಗೆ ಗಮನ ಹರಿಸಲಿದೆ. 

(Release ID: 1537955) Visitor Counter : 88