ಸಂಪುಟ

ಸಿಟಿಡಿಪಿಅಡಿಈಶಾನ್ಯಭಾಗದಮೇಘಾಲಯದಲ್ಲಿಮೊಬೈಲ್ಸೇವೆಗಳನ್ನುಒದಗಿಸುವಯುಎಸ್ಒಎಫ್ವ್ಯವಸ್ಥೆಜಾರಿಗೆಕೇಂ

Posted On: 23 MAY 2018 3:49PM by PIB Bengaluru

ಸಿಟಿಡಿಪಿಅಡಿಈಶಾನ್ಯಭಾಗದಮೇಘಾಲಯದಲ್ಲಿಮೊಬೈಲ್ಸೇವೆಗಳನ್ನುಒದಗಿಸುವಯುಎಸ್ಒಎಫ್ವ್ಯವಸ್ಥೆಜಾರಿಗೆಕೇಂದ್ರಸಂಪುಟಅನುಮೋದನೆ
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈಶಾನ್ಯ ಭಾಗದ ಮೇಘಾಲಯದಲ್ಲಿ ಸಮಗ್ರ ದೂರಸಂಪರ್ಕ ಅಭಿವೃದ್ಧಿ ಯೋಜನೆ (ಸಿಟಿಡಿಪಿ) ಜಾರಿಗೆ ಅನುಮೋದನೆ ನೀಡಲಾಯಿತು. ಏಕರೂಪದ ಸೇವಾ ಪೂರೈಕೆ ನಿಧಿ (ಯುಎಸ್ಒಎಫ್) ಅಡಿಯಲ್ಲಿ 3,911 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಈ ಯೋಜನೆ ಕೈಗೆತ್ತಿಕೊಳ್ಳಲು ಅನುಮೋದಿಸಲಾಯಿತು. ಒಟ್ಟಾರೆ ಈಶಾನ್ಯ ಭಾಗದಲ್ಲಿ 8,120.81 ಕೋಟಿ ರೂ. ವೆಚ್ಚದಲ್ಲಿ ಈ ಸಿಟಿಡಿಪಿಗೆ ಅನುಮೋದನೆ ನೀಡಿದಂತಾಗಿದೆ (ಹಿಂದೆ 2014ರ ಸೆಪ್ಟೆಂಬರ್ 10ರಂದು 5,336.18 ಕೋಟಿ ರೂ. ವೆಚ್ಚದ ಯೋಜನೆಗೆ ಅನುಮೋದನೆ ನೀಡಲಾಗಿತ್ತು.)

 

ಪ್ರಮುಖಾಂಶಗಳು :

         

ಯೋಜನೆ  ಕೆಳಗಿನ ಅಂಶಗಳನ್ನೊಳಗೊಂಡಿದೆ.

 

ಎ. ಮೇಘಾಲಯ ರಾಜ್ಯದಲ್ಲಿ ಗುರುತಿಸಲಾದ ದೂರವಾಣಿ ಸೇವೆ ಸಂಪರ್ಕ ಹೊಂದಿಲ್ಲದ ಪ್ರದೇಶಗಳಿಗೆ 2ಜಿ ಮತ್ತು 4ಜಿ ಮೊಬೈಲ್ ಸೇವೆ ಒದಗಿಸುವುದು.

 

ಬಿ. ಮೇಘಾಲಯದ ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯಲ್ಲಿ 2ಜಿ ಮತ್ತು 4ಜಿ ನಿರಂತರ ಮೊಬೈಲ್ ಸೇವೆ ಕಲ್ಪಿಸುವುದು.

 

 

ಪ್ರಯೋಜನಗಳು :

 

  1. ದೂರವಾಣಿ ಸಂಪರ್ಕಜಾಲ ವ್ಯವಸ್ಥೆ ಬಲವರ್ಧನೆಯಿಂದ ಮೇಘಾಲಯದಲ್ಲಿ ಮೊಬೈಲ್ ಬಳಕೆ ಹೆಚ್ಚಾಗಲಿದೆ ಮತ್ತು ಅದರಿಂದ ಜನರಿಗೆ ಕೈಗೆಟಕುವ ದರದಲ್ಲಿ ಸಂವಹನ ಮಾಹಿತಿ ಮತ್ತು ಆಡಳಿತ ಲಭಿಸುತ್ತದೆ.

 

  1. ಸಾರ್ವಜನಿಕ ಮೊಬೈಲ್ ಸಂಪರ್ಕಜಾಲ ಹೊಂದಿಲ್ಲದ ಮೇಘಾಲಯದ ಜನರಿಗೆ ಸಂಪರ್ಕ ಕಲ್ಪಿಸುವ ಮೂಲಕ ಐಸಿಟಿ ಪ್ರಯೋಜನಗಳನ್ನು ನಾಗರಿಕರಿಗೆ ಕಲ್ಪಿಸಿ, ಅವರನ್ನು ಸಬಲೀಕರಣಗೊಳಿಸುವ ಜತೆಗೆ ಸಾಮಾಜಿಕ, ಆರ್ಥಿಕ ಅಭಿವೃದ್ಧಿಗೂ ಸಹಕಾರಿಯಾಗುತ್ತದೆ.

 

  1. ಸಂಪರ್ಕಜಾಲ ಹೊಂದಿಲ್ಲದ ಪ್ರದೇಶಗಳಿಗೆ ಆವಿಷ್ಕಾರಿ ಕೌಶಲ ಬಳಸಿ, ಬ್ರಾಡ್ ಬ್ಯಾಂಡ್ ಮತ್ತು ಅಂರ್ಜಾಲ ಲಭ್ಯತೆಯನ್ನು ಹೆಚ್ಚಿಸಬಹುದಾಗಿದೆ.


(Release ID: 1533459) Visitor Counter : 133