ಸಂಪುಟ

ಭಾರತ ಮತ್ತು ಈಕ್ವಟೋರಿಯಲ್ ಗುನಿಯಾ ನಡುವೆ ಔಷಧೀಯ ಸಸ್ಯಗಳ ಕ್ಷೇತ್ರಗಳ ಸಹಕಾರ ಕುರಿತ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ

Posted On: 16 MAY 2018 3:43PM by PIB Bengaluru

ಭಾರತ ಮತ್ತು ಈಕ್ವಟೋರಿಯಲ್ ಗುನಿಯಾ ನಡುವೆ ಔಷಧೀಯ ಸಸ್ಯಗಳ ಕ್ಷೇತ್ರಗಳ ಸಹಕಾರ ಕುರಿತ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ 
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತ ಮತ್ತು ಈಕ್ವಟೋರಿಯಲ್ ಗುನಿಯಾ ನಡುವೆ ಔಷಧೀಯ ಸಸ್ಯಗಳ ಕ್ಷೇತ್ರಗಳ ಸಹಕಾರ ಕುರಿತ ತಿಳಿವಳಿಕೆ ಒಪ್ಪಂದ (ಎಂ.ಓ.ಯು.)ಕ್ಕೆ ತನ್ನ ಪೂರ್ವಾನ್ವಯ ಅನುಮೋದನೆ ನೀಡಿದೆ. 

ಈ ತಿಳಿವಳಿಕೆ ಒಪ್ಪಂದವು ಎರಡೂ ರಾಷ್ಟ್ರಗಳ ನಡುವೆ ಔಷಧೀಯ ಸಸ್ಯಗಳ ಕ್ಷೇತ್ರದಲ್ಲಿನ ದ್ವಿಪಕ್ಷೀಯ ಸಹಕಾರವನ್ನು ಮತ್ತಷ್ಟು ಹೆಚ್ಚಿಸಲಿದೆ. 

ಸಂಶೋಧನೆ, ತರಬೇತಿ ಕೋರ್ಸ್ ಗಳು, ಸಮಾವೇಶಗಳು/ಸಭೆಗಳು ಮತ್ತು ಪರಿಣತರ ನಿಯುಕ್ತಿಗೆ ಅಗತ್ಯವಾದ ಆರ್ಥಿಕ ಸಂಪನ್ಮೂಲಗಳನ್ನು ಆಯುಷ್ ಸಚಿವಾಲಯದ ಹಾಲಿ ಯೋಜನೆಗಳು ಮತ್ತು ಮಂಜೂರಾಗಿರುವ ಆಯವ್ಯಯದಿಂದಲೇ ಭರಿಸಲಾಗುವುದು. 

ಹಿನ್ನೆಲೆ: 

15 ಕೈಷಿ –ವಾಯುಗುಣ ಪ್ರದೇಶಗಳನ್ನು ಒಳಗೊಂಡಿರುವ ಭಾರತ ಜೀವ ವೈವಿಧ್ಯದ ವಿಚಾರದಲ್ಲಿ ವಿಶ್ವದ ಅತ್ಯಂತ ಶ್ರೀಮಂತ ರಾಷ್ಟ್ರಗಳಲ್ಲಿ ಒಂದಾಗಿದೆ. ಇರುವ 17000-18000 ಪುಷ್ಪ ಪ್ರಭೇದಗಳ ಪೈಕಿ ಸುಮಾರು 7000 ಪ್ರಭೇದಗಳು ಜನಪದ ಮತ್ತು ಆಯುರ್ವೇದ, ಯುನಾನಿ, ಸಿದ್ಧ ಮತ್ತು ಹೋಮಿಯೋಪತಿ (ಆಯುಷ್ ವೈದ್ಯ ಪದ್ಧತಿ) ಸೇರಿದಂತೆ ದಾಖಲಿತ ವೈದ್ಯ ಪದ್ಧತಿಯಲ್ಲಿ ಔಷಧೀಯ ಬಳಕೆಯಲ್ಲಿವೆ. ಸುಮಾರು 1178 ಔಷಧೀಯ ಸದಸ್ಯ ಪ್ರಭೇದಗಳು ವಾಣಿಜ್ಯದಲ್ಲಿದ್ದು, ಈ ಪೈಕಿ 242 ಪ್ರಭೇದಗಳು ವಾರ್ಷಿಕ 100 ಮೆಟ್ರಿಕ್ ಟನ್ ಬಳಕೆಯಲ್ಲಿವೆ. ಈ ಔಷಧೀಯ ಸದಸ್ಯಗಳು ಕೇವಲ ಸಾಂಪ್ರದಾಯಿಕ ಔಷಧ ಮತ್ತು ಗಿಡಮೂಲಿಕೆ ಕೈಗಾರಿಕೆಗೆ ಮಾತ್ರವೇ ಪ್ರಮುಖ ಸಂಪನ್ಮೂಲದ ನೆಲೆಯಲ್ಲ, ಜೊತೆಗೆ ಭಾರತದ ಬಹುದೊಡ್ಡ ಸಂಖ್ಯೆಯ ಜನತೆಗೆ ಜೀವನೋಪಾಯ ಮತ್ತು ಆರೋಗ್ಯ ಭದ್ರತೆಯನ್ನು ಒದಗಿಸುತ್ತಿದೆ. ಸಾಂಪ್ರದಾಯಿಕ ಮತ್ತು ಪರ್ಯಾಯ ಆರೋಗ್ಯ ಆರೈಕೆ ವ್ಯವಸ್ಥೆಗಳಲ್ಲಿ ಜಾಗತಿಕ ಪುನರುಜ್ಜೀವನದ ಫಲವಾಗಿ ವಿಶ್ವ ಗಿಡಮೂಲಿಕೆಗಳ ವ್ಯಾಪಾರ 120 ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ್ದಾಗಿದೆ ಮತ್ತು 2050 ರ ಹೊತ್ತಿಗೆ ಇದು 7 ಟ್ರಿಲಿಯನ್ ಅಮೆರಿಕನ್ ಡಾಲರ್ ತಲುಪಲಿದೆ. ಮಿಗಿಲಾಗಿ, ಅತಿ ದೊಡ್ಡ ಸಂಖ್ಯೆಯ ಔಷಧೀಯ ಸಸ್ಯಗಳು, ಅದರಲ್ಲೂ ಉಷ್ಣವಲಯದ ಪ್ರದೇಶದಲ್ಲಿ ದೊರಕುವ ಔಷಧ ಸಸ್ಯಗಳು ಒಂದೇ ರೀತಿಯ ವಾಯುಗುಣವುಳ್ಳ ಎರಡೂ ದೇಶಗಳ ನಡುವೆ ಸಮಾನವಾಗಿವೆ. 



(Release ID: 1532586) Visitor Counter : 100