ಪ್ರಧಾನ ಮಂತ್ರಿಯವರ ಕಛೇರಿ
ಹೇಮ್ವತಿ ನಂದನ್ ಬಹುಗುಣ ಅವರ ಸ್ಮರಣೆಯ ಅಂಚೆ ಚೀಟಿ ಬಿಡುಗಡೆ ಮಾಡಿದ ಪ್ರಧಾನಮಂತ್ರಿ
प्रविष्टि तिथि:
26 APR 2018 4:24PM by PIB Bengaluru
ಹೇಮ್ವತಿ ನಂದನ್ ಬಹುಗುಣ ಅವರ ಸ್ಮರಣೆಯ ಅಂಚೆ ಚೀಟಿ ಬಿಡುಗಡೆ ಮಾಡಿದ ಪ್ರಧಾನಮಂತ್ರಿ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ದಿವಂಗತ ಹೇಮ್ವತಿ ನಂದನ್ ಬಹುಗುಣ ಅವರ ಸ್ಮರಣೆಯ ಅಂಚೆ ಚೀಟಿಯನ್ನು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಗಳು, ಶ್ರೀ ಬಹುಗುಣ ಅವರು, ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಬದ್ಧರಾಗಿದ್ದ ನಾಯಕರಾಗಿದ್ದರು ಎಂದು ಬಣ್ಣಿಸಿದರು. ಮಹಾತ್ಮ ಗಾಂಧಿ, ಆಚಾರ್ಯ ವಿನೋಬಾ ಭಾವೆ, ಆಚಾರ್ಯ ನರೇಂದ್ರ ದೇವ್, ರಾಮ್ ಮನೋಹರ್ ಲೋಹಿಯಾ ಮತ್ತು ಚಂದ್ರಶೇಖರ್ ಆಜಾದ್ ಸೇರಿದಂತೆ ಹಲವು ನಾಯಕರಿಂದ ಶ್ರೀ ಬಹುಗುಣ ಅವರು ಸ್ಫೂರ್ತಿ ಪಡೆದಿದ್ದರು ಎಂದರು.
ಶ್ರೀ ಬಹುಗುಣ ಅವರು, ಶಿಕ್ಷಣ ಕ್ಷೇತ್ರಕ್ಕೆ ಮತ್ತು ದೇಶದ ಗುಡ್ಡಗಾಡು ಪ್ರದೇಶಗಳ ಅಭಿವೃದ್ಧಿಗೆ ನೀಡಿರುವ ಕೊಡುಗೆ ಕುರಿತು ಪ್ರಧಾನಮಂತ್ರಿಗಳು ಅತ್ಯಂತ ವಿಸ್ತಾರವಾಗಿ ಮಾತನಾಡಿದರು.
ಸಂವಹನ ಖಾತೆ ರಾಜ್ಯ ಸಚಿವ (ಸ್ವತಂತ್ರ ಹೊಣೆಗಾರಿಕೆ) ಶ್ರೀ ಮನೋಜ್ ಸಿನ್ಹ, ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಶ್ರೀ ವಿಜಯ್ ಬಹುಗುಣ ಮತ್ತು ಡಾ. ರೀಟಾ ಬಹುಗುಣ ಸೇರಿದಂತೆ ಶ್ರೀ ಹೇಮ್ವತಿ ನಂದನ್ ಬಹುಗುಣ ಅವರ ಕುಟುಂಬದ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
(रिलीज़ आईडी: 1530403)
आगंतुक पटल : 95