ಸಂಪುಟ

ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್ ಗೌರ್ನರ್ ಗಳ ವೇತನ ಮತ್ತು ಭತ್ಯೆಗಳ ಪರಿಷ್ಕರಣೆಗೆ ಸಂಪುಟದ ಅನುಮೋದನೆ

Posted On: 11 APR 2018 2:03PM by PIB Bengaluru

ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್ ಗೌರ್ನರ್ ಗಳ ವೇತನ ಮತ್ತು ಭತ್ಯೆಗಳ ಪರಿಷ್ಕರಣೆಗೆ ಸಂಪುಟದ ಅನುಮೋದನೆ 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್ ಗೌರ್ನರ್ ಗಳ ವೇತನ ಮತ್ತು ಭತ್ಯೆಯನ್ನು ಪರಿಷ್ಕರಿಸಲು ತನ್ನ ಅನುಮೋದನೆ ನೀಡಿದೆ. ಇದು ಲೆಫ್ಟಿನೆಂಟ್ ಗೌರ್ನರ್ ಗಳ ವೇತನ ಮತ್ತು ಭತ್ಯೆಯನ್ನು ಭಾರತ ಸರ್ಕಾರದ ಕಾರ್ಯದರ್ಶಿಗಳ ಸಮಕ್ಕೆ ತರುತ್ತದೆ.

 ವಿವರಗಳು: 

2016ರ ಜನವರಿ 1ರಿಂದ  ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್ ಗೌರ್ನರ್ ಗಳ ವೇತನ ಮತ್ತು ಭತ್ಯೆಗಳನ್ನು ಮಾಸಿಕ 80,000 ರೂ ಮತ್ತು ತುಟ್ಟಿಭತ್ಯೆ, ಮಾಸಿಕ ರೂ. 4000 ದರದಲ್ಲಿ ಪೂರಕ ಭತ್ಯೆ ಮತ್ತು ಸ್ಥಳೀಯ ಭತ್ಯೆಯಿಂದ ಮಾಸಿಕ 2,25,000 ರೂ ಮತ್ತು ತುಟ್ಟಿಭತ್ಯೆ, ರೂ. 4000 ದರದಲ್ಲಿ ಪೂರಕ ಭತ್ಯೆ ಮತ್ತು ಭಾರತ ಸರ್ಕಾರದ ಕಾರ್ಯದರ್ಶಿಗಳ ಶ್ರೇಣಿಯ ಅಧಿಕಾರಿಗಳಿಗೆ ಅನ್ವಯವಾಗುವ ಸ್ಥಳೀಯ ಭತ್ಯೆಗೆ ಆದರೆ ಒಟ್ಟಾರೆ ವೇತನ (ಪೂರಕ ಭತ್ಯೆ ಮತ್ತು ಸ್ಥಳೀಯ ಭತ್ಯೆ ಹೊರತುಪಡಿಸಿ)ಯು ಇತರ ರಾಜ್ಯದ ರಾಜ್ಯಪಾಲರು ಪಡೆಯುವುದಕ್ಕಿಂತ ಹೆಚ್ಚಾಗದಂತೆ  ಹೆಚ್ಚಿಸುವ ಪ್ರಸ್ತಾಪಕ್ಕೆ ಸಂಪುಟ ತನ್ನ ಅನುಮೋದನೆ ನೀಡಿದೆ.  

ಹಿನ್ನೆಲೆ:

ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್ ಗೌರ್ನರುಗಳ ವೇತನ ಮತ್ತು ಭತ್ಯೆಗಳು ಭಾರತ ಸರ್ಕಾರದ ಕಾರ್ಯದರ್ಶಿ ಶ್ರೇಣಿಯ ಅಧಿಕಾರಿಗಳ ವೇತನಕ್ಕೆ ಸಮನಾಗಿರುತ್ತದೆ. ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್ ಗೌರ್ನರ್ ಗಳ ವೇತನ ಮತ್ತು ಭತ್ಯೆಯನ್ನು ಸಂಪುಟದ ಅನುಮೋದನೆಯೊಂದಿಗೆ 2006ರ ಜನವರಿ 1ರಿಂದ ಅನ್ವಯವಾಗುವಂತೆ ಮಾಸಿಕ 26 ಸಾವಿರ ರೂಪಾಯಿಗಳಿಂದ  ಮಾಸಿಕ 80000 ರೂಪಾಯಿ (ಫಿಕ್ಸೆಡ್) ಮತ್ತು ತುಟ್ಟಿಭತ್ಯೆ, ರೂ. 4000 ದರದಲ್ಲಿ ಪೂರಕ ಭತ್ಯೆ ಹಾಗೂ ಸ್ಥಳೀಯ ಭತ್ಯೆಗಳಿಗೆ ಪರಿಷ್ಕರಿಲಾಗಿತ್ತು.

ಭಾರತ ಸರ್ಕಾರದ ಕಾರ್ಯದರ್ಶಿಗಳ ಶ್ರೇಣಿಯ ಅಧಿಕಾರಿಗಳ ವೇತನವನ್ನು 2016ರ ಸಿಸಿಎಸ್ (ಪರಿಷ್ಕೃತ)ವೇತನ ನಿಯಮದ ರೀತ್ಯ 01.01.2016ರಿಂದ ಜಾರಿಗೆ ಬರುವಂತೆಮಾಸಿಕ 80,000 ರೂಪಾಯಿಗಳಿಂದ ಮಾಸಿಕ 2,25,000 ರೂಪಾಯಿಗಳಿಗೆ  ಪರಿಷ್ಕರಿಸಲಾಗಿತ್ತು.

 *****



(Release ID: 1528683) Visitor Counter : 81