ಸಂಪುಟ

ದ್ವಿತೆರಿಗೆ ತಪ್ಪಿಸಲು ಮತ್ತು ಆರ್ಥಿಕ ವಂಚನೆ ತಡೆಯುವ ಕುರಿತಂತೆ ಭಾರತ ಮತ್ತು ಇರಾನ್ ನಡುವಿನ ಒಪ್ಪಂದಕ್ಕೆ ಸಂಪುಟದ ಅನುಮೋದನೆ

Posted On: 14 MAR 2018 7:33PM by PIB Bengaluru

ದ್ವಿತೆರಿಗೆ ತಪ್ಪಿಸಲು ಮತ್ತು ಆರ್ಥಿಕ ವಂಚನೆ ತಡೆಯುವ ಕುರಿತಂತೆ ಭಾರತ ಮತ್ತು ಇರಾನ್ ನಡುವಿನ ಒಪ್ಪಂದಕ್ಕೆ ಸಂಪುಟದ ಅನುಮೋದನೆ 
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ದ್ವಿತೆರಿಗೆ ತಪ್ಪಿಸಲು ಮತ್ತು ತೆರಿಗೆಗೆ ಸಂಬಂಧಿಸಿದಂತೆ ಆರ್ಥಿಕ ವಂಚನೆ ತಡೆಸಲು ಭಾರತ ಮತ್ತು ಇರಾನ್ ನಡುವಿನ ಒಪ್ಪಂದಕ್ಕೆ ತನ್ನ ಅನುಮೋದನೆ ನೀಡಿದೆ. 

ಈ ಒಪ್ಪಂದವು, ಭಾರತ ಮತ್ತು ಇರಾನ್ ನಡುವೆ ಎರಡೂ ಕಡೆಯಿಂದ ಹೂಡಿಕೆ, ತಂತ್ರಜ್ಞಾನ ಹಾಗೂ ಸಿಬ್ಬಂದಿಯ ಹರಿವಿಗೆ ಅವಕಾಶ ಮಾಡಿಕೊಡುತ್ತದೆ ಮತ್ತು ದ್ವಿತೆರಿಗೆಯನ್ನು ತಪ್ಪಿಸುತ್ತದೆ. ಇತ್ತೀಚಿನ ಅಂತಾರಾಷ್ಟ್ರೀಯ ಮಾನದಂಡದಂತೆ ಈ ಒಪ್ಪಂದವು ಇಬ್ಬರೂ ಪಕ್ಷಕಾರರ ನಡುವೆ ಮಾಹಿತಿಯ ವಿನಿಮಯಕ್ಕೆ ಅವಕಾಶ ಒದಗಿಸುತ್ತದೆ. ಹೀಗಾಗಿ ಇದು ತೆರಿಗೆ ವಿಚಾರಗಳಲ್ಲಿ ಪಾರದರ್ಶಕತೆಯನ್ನು ಸುಧಾರಿಸಿ, ತೆರಿಗೆ ವಂಚನೆ ಮತ್ತು ತೆರಿಗೆ ತಪ್ಪಿಸುವುದನ್ನು ತಡೆಯುತ್ತದೆ. 

ಈ ಒಪ್ಪಂದವು ಭಾರತವು ಇತರ ರಾಷ್ಟ್ರಗಳೊಂದಿಗೆ ಮಾಡಿಕೊಂಡಿರುವ ಇದೇ ಸ್ವರೂಪದ ಒಪ್ಪಂದಗಳಂತೆಯೇ ಇದೆ. ಉದ್ದೇಶಿತ ಒಪ್ಪಂದವು, ಜಿ-20 ಓಇಸಿಡಿ ಮೂಲದಲ್ಲಿ ವಂಚನೆ ಮತ್ತು ಲಾಭವನ್ನು ವರ್ಗಾಯಿಸುವ (ಬಿ.ಇ.ಪಿ.ಎಸ್.) ಯೋಜನೆಗಳ ಅಡಿಯಲ್ಲಿ ಒಪ್ಪಂದ ಸಂಬಂಧಿತವಾದ ಕನಿಷ್ಠ ಗುಣಮಟ್ಟಗಳನ್ನು ಪೂರೈಸುತ್ತದೆ, ಇದರಲ್ಲಿ ಭಾರತವು ಸಮಾನ ಹೆಜ್ಜೆಯೊಂದಿಗೆ ಭಾಗಿಯಾಗಿದೆ. 

ಈವರೆಗೆ ಭಾರತಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಆದಾಯ ತೆರಿಗೆ ಕಾಯಿದೆ 1961ರ ಸೆಕ್ಷನ್ 90ರ ಅಡಿಯಲ್ಲಿ ವಿದೇಶದೊಂದಿಗೆ ಅಥವಾ ನಿರ್ದಿಷ್ಟ ಪ್ರದೇಶದೊಂದಿಗೆ ಆದಾಯದ ಮೇಲೆ ದ್ವಿತೆರಿಗೆ ತಪ್ಪಿಸಲು, ಆದಾಯ ತೆರಿಗೆ ಕಾಯಿದೆ 1961ರ ಅಡಿಯಲ್ಲಿ ವಿಧಿಸಬಹುದಾದ ಆದಾಯದ ಮೇಲಿಕ ಕರ ತಪ್ಪಿಸುವುದು ಅಥವಾ ವಂಚನೆಯನ್ನು ತಡೆಯಲು ಮಾಹಿತಿಯ ವಿನಿಮಯಕ್ಕೆ ಒಪ್ಪಂದ ಮಾಡಿಕೊಳ್ಳಬಹುದಾಗಿದೆ. 



(Release ID: 1524833) Visitor Counter : 80