ಪ್ರಧಾನ ಮಂತ್ರಿಯವರ ಕಛೇರಿ

ವಾರಾಣಸಿ ಮತ್ತು ಪಾಟ್ನಾ ನಡುವಿನ ರೈಲಿಗೆ ಪ್ರಧಾನಿ ಹಸಿರು ನಿಶಾನೆ, ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ, ವಾರಾಣಸಿಯಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಭಾಷಣ

Posted On: 12 MAR 2018 7:34PM by PIB Bengaluru

ವಾರಾಣಸಿ ಮತ್ತು ಪಾಟ್ನಾ ನಡುವಿನ ರೈಲಿಗೆ ಪ್ರಧಾನಿ ಹಸಿರು ನಿಶಾನೆ, ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ, ವಾರಾಣಸಿಯಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಭಾಷಣ 
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಾರಾಣಸಿಯ ಮಂಡುವಡೀಹ ರೈಲು ನಿಲ್ದಾಣದಲ್ಲಿ ವಾರಾಣಸಿ ಮತ್ತು ಪಾಟ್ನಾ ನಡುವಿನ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿದರು. ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಹಸಿರು ನಿಶಾನೆ ತೋರಿದ ಅವರು, ವಾರಾಣಸಿಯ ಡಿಎಲ್.ಡಬ್ಲ್ಯು. ಮೈದಾನದಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಭಾಷಣ ಮಾಡಿದರು. 

ಫ್ರೆಂಚ್ ಅಧ್ಯಕ್ಷ ಎಮ್ಯಾನ್ಯುಯಲ್ ಮೆಕ್ರಾನ್ ಅವರಿಗೆ ಆತ್ಮೀಯ ಸ್ವಾಗತ ನೀಡಿದ ಕಾಶಿಯ ಜನತೆಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ವಾರಾಣಸಿಯ ಕೈಗಾರಿಕಾ ಅಭಿವೃದ್ಧಿಯ ಸಂಕೇತವಾದ ಡಿಎಲ್.ಡಬ್ಲ್ಯು. ಮೇಲ್ದರ್ಜೆಗೇರಿಸಲು ಮತ್ತು ನಿರಂತರವಾಗಿ ಅಭಿವೃದ್ಧಿಪಡಿಸಲು ಭಾರತ ಸರ್ಕಾರ ಬದ್ಧವಾಗಿದೆ ಎಂದು ಅವರು ಹೇಳಿದರು. 

ಹೆಚ್ಚು ಜನರಿಗೆ ವಸತಿ ಸೌಲಭ್ಯ ದೊರಕುವುದನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ವಸತಿ ವಲಯದಲ್ಲಿ ಮಾಡಿರುವ ಪ್ರಯತ್ನಗಳನ್ನು ಅವರು ಪ್ರಶಂಸಿಸಿದರು. 

ಕಾರ್ಯಕ್ರಮ ಸ್ಥಳದಲ್ಲಿ ಆಯೋಜಿಸಿದ್ದ ತ್ಯಾಜ್ಯದಿಂದ ಸಂಪತ್ತು ಉಪಕ್ರಮ ಕುರಿತ ವಿವಿಧ ವಸ್ತುಪ್ರದರ್ಶನಗಳಿಗೂ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. 

ವಾರಾಣಸಿಯಲ್ಲಿ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶವಿದೆ ಎಂದ ಅವರು, ನಗರವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಸಕಲ ಪ್ರಯತ್ನ ಮಾಡಬೇಕು ಎಂದರು. 

ಇತ್ತೀಚೆಗೆ ಪ್ರಕಟಿಸಲಾದ ಆಯುಷ್ಮಾನ್ ಭಾರತ ಯೋಜನೆ ಆರೋಗ್ಯ ಕ್ಷೇತ್ರದಲ್ಲಿ ಪರಿವರ್ತನೆ ತರಲಿದೆ ಎಂದು ಪ್ರಧಾನಿ ತಿಳಿಸಿದರು. ಇದು ಬಡವರಿಗೆ ಉತ್ತಮ ಗುಣಮಟ್ಟದ ಆರೋಗ್ಯ ರಕ್ಷಣೆ ಚಿಕಿತ್ಸೆ ಒದಗಿಸಲಿದೆ ಎಂದರು. 

ಯೋಜನೆಯನ್ನು ಅತ್ಯುತ್ತಮವಾಗಿ ಅನುಷ್ಠಾನ ಮಾಡಿರುವ ಉತ್ತರ ಪ್ರದೇಶ ಸರ್ಕಾರವನ್ನು ಪ್ರಧಾನಿ ಪ್ರಶಂಸಿಸಿದರು. 



(Release ID: 1524030) Visitor Counter : 95