ಪ್ರಧಾನ ಮಂತ್ರಿಯವರ ಕಛೇರಿ

ದೇಶದ ವಿವಿಧೆಡೆ ವಿದ್ವಂಸಕ ಕೃತ್ಯಗಳ ವರದಿ, ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದ ತೀವ್ರ ಖಂಡನೆ. ಗೃಹ ಸಚಿವರ ಜೊತೆ ಮಾತುಕತೆ, ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮಕ್ಕೆ ಸೂಚನೆ.

Posted On: 07 MAR 2018 10:43AM by PIB Bengaluru

ದೇಶದ ವಿವಿಧೆಡೆ ವಿದ್ವಂಸಕ ಕೃತ್ಯಗಳ ವರದಿ, ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದ ತೀವ್ರ ಖಂಡನೆ. 

ಗೃಹ ಸಚಿವರ ಜೊತೆ ಮಾತುಕತೆ, ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮಕ್ಕೆ ಸೂಚನೆ. 
 

ಶ್ರೀ ನರೇಂದ್ರ ಮೋದಿ ಅವರು ದೇಶದ ಕೆಲವು ಭಾಗಗಳಲ್ಲಿ ನಡೆಯುತ್ತಿರುವ ವಿದ್ವಂಸಕ ಕೃತ್ಯಗಳನ್ನು ಬಲವಾಗಿ ಖಂಡಿಸಿದ್ದಾರೆ ಮತ್ತು ಈ ವಿಷಯದಲ್ಲಿ ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ. ದೇಶದ ನಿರ್ದಿಷ್ಟ ಭಾಗಗಳಿಂದ ಪ್ರತಿಮೆಗಳನ್ನು ಬುಡಮೇಲು ಮಾಡಿದ , ಉರುಳಿಸಿದ ಘಟನೆಗಳು ವರದಿಯಾಗಿವೆ. ಪ್ರಧಾನ ಮಂತ್ರಿಗಳು ಗೃಹ ಸಚಿವ ರಾಜನಾಥ್ ಸಿಂಗ್ ಅವರ ಜತೆ ಈ ನಿಟ್ಟಿನಲ್ಲಿ ಮಾತನಾಡಿದ್ದು, ಇಂತಹ ಕೃತ್ಯಗಳ ಬಗ್ಗೆ ತಮ್ಮ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಗೃಹ ಮಂತ್ರಾಲಯವು ಈ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿದೆ. ಗೃಹ ಮಂತ್ರಾಲಯವು ಇಂತಹ ಕೃತ್ಯಗಳನ್ನು ತಡೆಯಲು ಅವಶ್ಯ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯಗಳಿಗೆ ಸೂಚಿಸಿದೆ.

ಇಂತಹ ಕೃತ್ಯಗಳಲ್ಲಿ ತೊಡಗುವ ವ್ಯಕ್ತಿಗಳನ್ನು ಕಠಿಣ ಕ್ರಮಕ್ಕೆ ಒಳಪಡಿಸಬೇಕು ಮತ್ತು ಸೂಕ್ತ ಕಾನೂನು ಪ್ರಸ್ತಾವಗಳ ಅನ್ವಯ ಪ್ರಕರಣ ದಾಖಲಿಸಿಕೊಳ್ಳಬೇಕು ಎಂದೂ ಸೂಚಿಸಿದೆ.
 

***(Release ID: 1523435) Visitor Counter : 87