• Skip to Content
  • Sitemap
  • Advance Search
Economy

ಕಾರ್ಮಿಕ ಸುಧಾರಣೆಗಳು: ಭಾರತದ ತಾತ್ಕಾಲಿಕ ಮತ್ತು ಅರೆಕಾಲಿಕ ಉದ್ಯೋಗಿಗಳನ್ನು ಔಪಚಾರಿಕಗೊಳಿಸುವುದು ಮತ್ತು ರಕ್ಷಿಸುವುದು

प्रविष्टि तिथि: 09 DEC 2025 13:11 PM

ಪ್ರಮುಖ ಮಾರ್ಗಸೂಚಿಗಳು

  • ತಾತ್ಕಾಲಿಕ ಮತ್ತು ಅರೆಕಾಲಿಕ ಉದ್ಯೋಗಿಗಳನ್ನು ಕಾರ್ಮಿಕ ಕಾನೂನಿನ ಅಡಿಯಲ್ಲಿ ಔಪಚಾರಿಕವಾಗಿ ಗುರುತಿಸಲಾಗಿದೆ.
  • ಸಾಮಾಜಿಕ ಭದ್ರತಾ ಪ್ರಯೋಜನಗಳು ಜೀವ ಮತ್ತು ಅಂಗವೈಕಲ್ಯ ವಿಮೆ, ಆರೋಗ್ಯ ಮತ್ತು ಮಾತೃತ್ವ ಪ್ರಯೋಜನಗಳು, ಪಿಂಚಣಿ, ಅಪಘಾತ ವಿಮೆ, ಮತ್ತು ಶಿಶುಪಾಲನಾ ಕೇಂದ್ರದ (crèche) ಸೌಲಭ್ಯಗಳನ್ನು ಒಳಗೊಂಡಿವೆ.
  • ಸಂಗ್ರಾಹಕರ ಸಾಮಾಜಿಕ ಭದ್ರತಾ ನಿಧಿಗೆ ಕೊಡುಗೆ ನೀಡಬೇಕು. ಕಾರ್ಮಿಕರ ಕುಂದುಕೊರತೆಗಳನ್ನು ಪರಿಹರಿಸಲು ಸರ್ಕಾರದಿಂದ ಸುಗಮ ಕೇಂದ್ರಗಳನ್ನು ಸ್ಥಾಪಿಸಲಾಗುವುದು.
  • ಪ್ರತಿ ಕಾರ್ಮಿಕನಿಗೆ ಇ-ಶ್ರಮ್ ಪೋರ್ಟಲ್‌ನಲ್ಲಿ ಒಂದು ವಿಶಿಷ್ಟ ಆಧಾರ್-ಸಂಯೋಜಿತ ಐಡಿ ದೊರೆಯುತ್ತದೆ. ಇದು ಪ್ರಯೋಜನಗಳನ್ನು ಯಾವುದೇ ಪ್ಲಾಟ್‌ಫಾರ್ಮ್‌ಗಳಲ್ಲಿ ಪೋರ್ಟಬಲ್ (ಎಲ್ಲಿ ಬೇಕಾದರೂ ವರ್ಗಾಯಿಸಲು ಅಥವಾ ಬಳಸಲು) ಆಗಿ ಬಳಸಲು ಅನುಕೂಲ ಮಾಡಿಕೊಡುತ್ತದೆ.

ಭಾರತದ ಗಿಗ್ ಆರ್ಥಿಕತೆಗೆ ಒಂದು ಐತಿಹಾಸಿಕ ಸುಧಾರಣೆ

ಭಾರತದ ವೇಗವಾಗಿ ವಿಸ್ತರಿಸುತ್ತಿರುವ ತಾತ್ಕಾಲಿಕ ಮತ್ತು ಅರೆಕಾಲಿಕ ಉದ್ಯೋಗಿ ಬಳಗವು ಯುವ ಜನಸಂಖ್ಯೆ, ಡಿಜಿಟಲ್ ಅಳವಡಿಕೆ ಮತ್ತು ಕ್ಷಿಪ್ರ ನಗರೀಕರಣದಿಂದಾಗಿ ಹೊಸ ಆರ್ಥಿಕ ಪರಿಸರ ವ್ಯವಸ್ಥೆಯ ಪ್ರಮುಖ ಚಾಲಕ ಶಕ್ತಿಯಾಗಿ ಹೊರಹೊಮ್ಮಿದೆ. ಅವರ ಪಾತ್ರವನ್ನು ಗುರುತಿಸಿ, ಸಾಮಾಜಿಕ ಭದ್ರತಾ ಸಂಹಿತೆ, 2020 ಇತ್ತೀಚಿನ ಕಾರ್ಮಿಕ ಸುಧಾರಣೆಯಲ್ಲಿ ಜಾರಿಗೆ ತಂದ ನಾಲ್ಕು ಕಾರ್ಮಿಕ ಸಂಹಿತೆಗಳಲ್ಲಿ ಒಂದು) ತಾತ್ಕಾಲಿಕ ಮತ್ತು ಅರೆಕಾಲಿಕ ಉದ್ಯೋಗಿಗಳನ್ನು ಔಪಚಾರಿಕವಾಗಿ ವ್ಯಾಪಕ ರಕ್ಷಣಾ ಛತ್ರಿಯ ಅಡಿಗೆ ತರುತ್ತದೆ.

ಈ ಸುಧಾರಣೆಯು, ಭಾರತದ ಡಿಜಿಟಲ್ ಆರ್ಥಿಕತೆಗೆ ದೀರ್ಘಕಾಲದವರೆಗೆ ಶಕ್ತಿ ತುಂಬಿದರೂ ಸಮರ್ಪಕ ರಕ್ಷಣೆಗಳಿಲ್ಲದ ಈ ಕಾರ್ಮಿಕರಿಗೆ, ಬಹುಕಾಲದಿಂದ ಬಾಕಿ ಉಳಿದಿದ್ದ ಭದ್ರತೆಯನ್ನು ಸಾಂಸ್ಥೀಕರಣಗೊಳಿಸುತ್ತದೆ.

ತಾತ್ಕಾಲಿಕ ಮತ್ತು ಅರೆಕಾಲಿಕ ಉದ್ಯೋಗಿಗಳಿಗೆ ಸಬಲೀಕರಣ

ಕಾನೂನು ಮಾನ್ಯತೆ, ಪೋರ್ಟಬಲ್ ಸಾಮಾಜಿಕ ಭದ್ರತಾ ಪ್ರಯೋಜನಗಳು (ಒಂದು ಕಡೆಯಿಂದ ಇನ್ನೊಂದು ಕಡೆಗೆ ವರ್ಗಾಯಿಸಬಹುದಾದ ಸೌಲಭ್ಯಗಳು), ಮೀಸಲಾದ ಕಲ್ಯಾಣ ನಿಧಿ ಮತ್ತು ರಾಷ್ಟ್ರೀಯ ನೋಂದಣಿ ಚೌಕಟ್ಟನ್ನು ಒದಗಿಸುವುದರ ಮೂಲಕ, ಈ ವರ್ಧಿತ ನಿಬಂಧನೆಗಳು ತಾತ್ಕಾಲಿಕ ಮತ್ತು ಅರೆಕಾಲಿಕ ಉದ್ಯೋಗಿಗಳಿಗೆ ಅಗತ್ಯವಾದ ಸುರಕ್ಷತೆಗಳನ್ನು ಒದಗಿಸುತ್ತವೆ. ಇದು ಅವರಿಗೆ ಪೋರ್ಟಬಲ್ ಹಕ್ಕುಗಳೊಂದಿಗೆ ಸಬಲೀಕರಣ ನೀಡುತ್ತದೆ ಮತ್ತು ಅನೌಪಚಾರಿಕ ಕೆಲಸವನ್ನು ಸುರಕ್ಷಿತ, ಮಾನ್ಯತೆ ಪಡೆದ ಮತ್ತು ಸುಸ್ಥಿರ ಜೀವನೋಪಾಯವಾಗಿ ಪರಿವರ್ತಿಸುತ್ತದೆ.

ಕಾನೂನು ಮಾನ್ಯತೆ

ವೇತನ ಪಾವತಿ ಕಾಯಿದೆ (1936), ಕನಿಷ್ಠ ವೇತನ ಕಾಯಿದೆ (1948), ಇಪಿಎಫ್ ಕಾಯಿದೆ ಅಥವಾ ಇಎಸ್‌ಐ ಕಾಯಿದೆಗಳ ಅಡಿಯಲ್ಲಿ ಯಾವುದೇ ಮಾನ್ಯತೆ ಇಲ್ಲದ ಕಾರಣ, ತಾತ್ಕಾಲಿಕ ಮತ್ತು ಅರೆಕಾಲಿಕ ಉದ್ಯೋಗಿಗಳನ್ನು ಅನೌಪಚಾರಿಕ ಅಥವಾ ಅಸಂಘಟಿತ ವಲಯದ ಭಾಗವೆಂದು ಪರಿಗಣಿಸಲಾಗಿತ್ತು.

ಸಾಮಾಜಿಕ ಭದ್ರತಾ ಸಂಹಿತೆಯು ಮೊದಲ ಬಾರಿಗೆ ತಾತ್ಕಾಲಿಕ ಮತ್ತು ಅರೆಕಾಲಿಕ ಉದ್ಯೋಗಿಗಳಿಗೆ ಔಪಚಾರಿಕ ಮಾನ್ಯತೆಯನ್ನು ಒದಗಿಸುತ್ತದೆ, ಅವರನ್ನು ಸಾಮಾಜಿಕ ಭದ್ರತೆ ಮತ್ತು ಕಾನೂನು ರಕ್ಷಣೆಯ ವ್ಯಾಪ್ತಿಗೆ ತರುತ್ತದೆ.

ಮಾನ್ಯತೆಯನ್ನು ಹೆಚ್ಚಿಸಲು ಕೆಲವು ವ್ಯಾಖ್ಯಾನಗಳನ್ನು ಸಹ ಸೇರಿಸಲಾಗಿದೆ:

  • ಸಂಗ್ರಾಹಕ”: ಖರೀದಿದಾರ ಅಥವಾ ಸೇವೆಯ ಬಳಕೆದಾರರನ್ನು ಮಾರಾಟಗಾರ ಅಥವಾ ಸೇವಾ ಪೂರೈಕೆದಾರರೊಂದಿಗೆ ಸಂಪರ್ಕಿಸಲು ಬಳಸುವ ಒಂದು ಡಿಜಿಟಲ್ ಮಧ್ಯವರ್ತಿ ಅಥವಾ ಮಾರುಕಟ್ಟೆ ಸ್ಥಳ.
  • ತಾತ್ಕಾಲಿಕ ಉದ್ಯೋಗಿ’: ಸಾಂಪ್ರದಾಯಿಕ ಉದ್ಯೋಗದಾತ-ಉದ್ಯೋಗಿ ಸಂಬಂಧದಿಂದ ಹೊರತಾಗಿ ಕೆಲಸ ಮಾಡುವ ಅಥವಾ ಕೆಲಸದ ವ್ಯವಸ್ಥೆಯಲ್ಲಿ ಭಾಗವಹಿಸುವ ಮತ್ತು ಅಂತಹ ಚಟುವಟಿಕೆಗಳಿಂದ ಗಳಿಸುವ ವ್ಯಕ್ತಿ.
  • ಅರೆಕಾಲಿಕ ಉದ್ಯೋಗಿ’ ಅರೆಕಾಲಿಕ ಕೆಲಸದಲ್ಲಿ ತೊಡಗಿರುವ ಅಥವಾ ಅದನ್ನು ಕೈಗೊಳ್ಳುವ ವ್ಯಕ್ತಿ.
  • ಅರೆಕಾಲಿಕ ಕೆಲಸ’: ಸಾಂಪ್ರದಾಯಿಕ ಉದ್ಯೋಗದಾತ-ಉದ್ಯೋಗಿ ಸಂಬಂಧದಿಂದ ಹೊರತಾದ ಕೆಲಸದ ವ್ಯವಸ್ಥೆ, ಇದರಲ್ಲಿ ಸಂಸ್ಥೆಗಳು ಅಥವಾ ವ್ಯಕ್ತಿಗಳು ನಿರ್ದಿಷ್ಟ ಸಮಸ್ಯೆಗಳನ್ನು ಪರಿಹರಿಸಲು ಅಥವಾ ನಿರ್ದಿಷ್ಟ ಸೇವೆಗಳನ್ನು ಒದಗಿಸಲು ಆನ್‌ಲೈನ್ ಪ್ಲಾಟ್‌ಫಾರ್ಮ್ ಅನ್ನು ಬಳಸುತ್ತಾರೆ, ಪಾವತಿಗೆ ಬದಲಾಗಿ ಕೇಂದ್ರ ಸರ್ಕಾರವು ಸೂಚಿಸಬಹುದಾದ ಯಾವುದೇ ಇತರ ಚಟುವಟಿಕೆಗಳು ಸಹ ಇದರಲ್ಲಿ ಸೇರಿವೆ.

ಕಲ್ಯಾಣ / ಸಾಮಾಜಿಕ ಭದ್ರತಾ ನಿಧಿ

ಸಾಮಾಜಿಕ ಭದ್ರತಾ ಸಂಹಿತೆ ಅಡಿಯಲ್ಲಿ, ಸಂಗ್ರಾಹಕರು ಈಗ ತಮ್ಮ ವಾರ್ಷಿಕ ವಹಿವಾಟಿನ ಶೇ. 1 ರಿಂದ 2 ರಷ್ಟು (ತಾತ್ಕಾಲಿಕ ಮತ್ತು ಅರೆಕಾಲಿಕ ಉದ್ಯೋಗಿಗಳಿಗೆ ಮಾಡಿದ ಅಥವಾ ಪಾವತಿಸಬೇಕಾದ ಪಾವತಿಗಳ ಶೇ. 5 ಕ್ಕೆ ಸೀಮಿತಗೊಳಿಸಲಾಗಿದೆ) ಮೊತ್ತವನ್ನು ಸಾಮಾಜಿಕ ಭದ್ರತಾ ನಿಧಿಗೆ ಕೊಡುಗೆಯಾಗಿ ನೀಡಬೇಕಾಗುತ್ತದೆ.

ಈ ಹಿಂದೆ, ಈ ಕಾರ್ಮಿಕರು ಎಲ್ಲಾ ಅಪಾಯಗಳನ್ನು ಸ್ವತಃ ನಿಭಾಯಿಸಬೇಕಾಗಿತ್ತು ಮತ್ತು ಅವರ ಕಲ್ಯಾಣಕ್ಕೆ ಕೊಡುಗೆ ನೀಡುವ ಜವಾಬ್ದಾರಿ ಸಂಗ್ರಾಹಕರ ಮೇಲೆ ಇರಲಿಲ್ಲ. ಈಗ, ಈ ನಿಧಿಯು ಕಾರ್ಮಿಕರಿಗಾಗಿ ವಿವಿಧ ಕಲ್ಯಾಣ ಯೋಜನೆಗಳಿಗೆ ಹಣಕಾಸು ಒದಗಿಸುತ್ತದೆ. ಸರ್ಕಾರದಿಂದ, ಸಿಎಸ್‌ಆರ್ ಉಪಕ್ರಮಗಳಿಂದ ಹೀಗೆ ಅನೇಕ ಹಣಕಾಸು ಒದಗಿಸುವ ಕಾರ್ಯವಿಧಾನಗಳಿಗೆ ಸಂಹಿತೆಯಲ್ಲಿ ಅವಕಾಶವಿದೆ.

ಸಾಮಾಜಿಕ ಭದ್ರತಾ ಯೋಜನೆ

ತಾತ್ಕಾಲಿಕ ಮತ್ತು ಅರೆಕಾಲಿಕ ಉದ್ಯೋಗಿಗಳಿಗೆ ಮಹತ್ವದ ಸುಧಾರಣೆಗಳು ಈ ಹಿಂದೆ, ಪಿಎಫ್, ಇಎಸ್‌ಐ, ಪಿಂಚಣಿ ಅಥವಾ ವಿಮೆಗಾಗಿ ಯಾವುದೇ ಶಾಸನಬದ್ಧ ಅರ್ಹತೆ ಇಲ್ಲದೆ, ಕೇವಲ ಸ್ವಯಂಪ್ರೇರಿತ ಯೋಜನೆಗಳು ಅಥವಾ ಸಿಎಸ್‌ಆರ್ ಉಪಕ್ರಮಗಳ ಮೇಲೆ ಮಾತ್ರ ಅವಲಂಬಿತವಾಗಿದ್ದ ತಾತ್ಕಾಲಿಕ ಮತ್ತು ಅರೆಕಾಲಿಕ ಉದ್ಯೋಗಿಗಳು ಈಗ ಸರ್ಕಾರ-ಅಧಿಸೂಚಿತ ಸಾಮಾಜಿಕ ಭದ್ರತಾ ಪ್ರಯೋಜನಗಳಿಗೆ ಅರ್ಹರಾಗಿದ್ದಾರೆ. ಇವು ಅಪಘಾತ ವಿಮೆ, ಆರೋಗ್ಯ ಮತ್ತು ಮಾತೃತ್ವ ಪ್ರಯೋಜನಗಳು, ಮತ್ತು ಯಾವುದೇ ಇತರ ಪ್ರಯೋಜನಗಳನ್ನು ಒಳಗೊಂಡಿವೆ.

ಈ ಐತಿಹಾಸಿಕ ಸುಧಾರಣೆಯು ಈ ಕಾರ್ಮಿಕರನ್ನು ಕಾನೂನು ಚೌಕಟ್ಟಿನಲ್ಲಿ ಕಾಣದ ವರ್ಗದಿಂದ ತೆಗೆದುಹಾಕಿ, ಔಪಚಾರಿಕ ಸಾಮಾಜಿಕ ಭದ್ರತಾ ಚೌಕಟ್ಟಿನ ಭಾಗವಾಗಿಸಿದೆ.

ಪ್ರಯೋಜನಗಳ ಪೋರ್ಟಬಿಲಿಟಿ

ತಾತ್ಕಾಲಿಕ ಮತ್ತು ಅರೆಕಾಲಿಕ ಉದ್ಯೋಗಿಗಳು ಉದ್ಯೋಗ ಅಥವಾ ಪ್ಲಾಟ್‌ಫಾರ್ಮ್‌ಗಳನ್ನು ಬದಲಾಯಿಸಿದಾಗಲೂ ತಮ್ಮ ಸಾಮಾಜಿಕ ಭದ್ರತಾ ಪ್ರಯೋಜನಗಳನ್ನು ಮುಂದುವರಿಸಲು ಸಾಧ್ಯವಾಗುತ್ತದೆ. ಇದರಿಂದ ನಿರಂತರತೆ ಮತ್ತು ಭದ್ರತೆ ಖಚಿತವಾಗುತ್ತದೆ. ಈ ಹಿಂದೆ, ಉದ್ಯೋಗ ಬದಲಾಯಿಸಿದಾಗ ಈ ಪ್ರಯೋಜನಗಳು ನಷ್ಟವಾಗುತ್ತಿದ್ದವು.

ಆದರೆ ಈಗ, ಪ್ರತಿ ಕಾರ್ಮಿಕನಿಗೆ ಇ-ಶ್ರಮ್ ಮೂಲಕ ನೋಂದಣಿಯಾದ ನಂತರ ವಿಶಿಷ್ಟವಾದ ಆಧಾರ್-ಸಂಯೋಜಿತ ಐಡಿ ದೊರೆಯುತ್ತದೆ. ಇದು ಅವರ ಸಾಮಾಜಿಕ ಭದ್ರತಾ ಪ್ರಯೋಜನಗಳನ್ನು ಎಲ್ಲಾ ಪ್ಲಾಟ್‌ಫಾರ್ಮ್‌ಗಳಲ್ಲಿಯೂ ಪೋರ್ಟಬಲ್ (ಎಲ್ಲಿ ಬೇಕಾದರೂ ಬಳಸಲು ಮತ್ತು ವರ್ಗಾಯಿಸಲು) ಆಗಿ ಬಳಸಲು ಅನುಮತಿಸುತ್ತದೆ. ಅನೇಕ ಪ್ಲಾಟ್‌ಫಾರ್ಮ್‌ಗಳಲ್ಲಿ ಕೆಲಸ ಮಾಡಿದರೂ ಅಥವಾ ಒಂದು ಪ್ಲಾಟ್‌ಫಾರ್ಮ್‌ನಿಂದ ಇನ್ನೊಂದಕ್ಕೆ ಬದಲಾದರೂ, ಕಾರ್ಮಿಕರು ತಡೆರಹಿತವಾಗಿ ಮುಂದುವರಿಯುವ ಒಂದು ಏಕೀಕೃತ ಪ್ರಯೋಜನಗಳನ್ನು ಉಳಿಸಿಕೊಳ್ಳುತ್ತಾರೆ.

ನೋಂದಣಿ ಮತ್ತು ದತ್ತಾಂಶ ಸಂಗ್ರಹ

ತಾತ್ಕಾಲಿಕ ಮತ್ತು ಅರೆಕಾಲಿಕ ಉದ್ಯೋಗಿಗಳು ಸರ್ಕಾರಿ ಇ-ಶ್ರಮ್ ಪೋರ್ಟಲ್‌ನಲ್ಲಿ ಸ್ವಯಂ-ನೋಂದಣಿ ಮಾಡಿಕೊಳ್ಳಬಹುದು. ಇದು ಸಾಮಾಜಿಕ ಭದ್ರತೆ, ಕೌಶಲ್ಯ ಅಭಿವೃದ್ಧಿ, ಕಲ್ಯಾಣ ಪ್ರಯೋಜನಗಳ ಉದ್ದೇಶಿತ ವಿತರಣೆ ಮತ್ತು ನೀತಿ ನಿರೂಪಣೆಗೆ ಬೆಂಬಲ ನೀಡುವ ಒಂದು ಸಮಗ್ರ ರಾಷ್ಟ್ರೀಯ ದತ್ತಾಂಶ ಸಂಗ್ರಹವನ್ನು ರಚಿಸುತ್ತದೆ.

ಕುಂದುಕೊರತೆಗಳ ಪರಿಹಾರ

ಈ ಹಿಂದೆ, ತಾತ್ಕಾಲಿಕ ಮತ್ತು ಅರೆಕಾಲಿಕ ಉದ್ಯೋಗಿಗಳಿಗೆ ಔಪಚಾರಿಕ ಕಾರ್ಮಿಕ ಕಾನೂನುಗಳಿಗೆ ಪ್ರವೇಶವಿರಲಿಲ್ಲ, ಮತ್ತು ಆದ್ದರಿಂದ ಯಾವುದೇ ರಚನಾತ್ಮಕ ಕುಂದುಕೊರತೆ ಪರಿಹಾರ ಕಾರ್ಯವಿಧಾನ ಇರಲಿಲ್ಲ.

ಸಾಮಾಜಿಕ ಭದ್ರತಾ ಸಂಹಿತೆ ಅಡಿಯಲ್ಲಿ, ಸೂಕ್ತ ಸರ್ಕಾರವು ಕಾರ್ಮಿಕರ ಕುಂದುಕೊರತೆಗಳನ್ನು ಪರಿಹರಿಸಲು ಮತ್ತು ಸಕಾಲಿಕ ಬೆಂಬಲವನ್ನು ಖಚಿತಪಡಿಸಿಕೊಳ್ಳಲು ಶುಲ್ಕ-ರಹಿತ ಸಹಾಯವಾಣಿ, ಕಾಲ್ ಸೆಂಟರ್, ಅಥವಾ ಸುಗಮ ಕೇಂದ್ರವನ್ನು ಸ್ಥಾಪಿಸಬಹುದು.

ತಾತ್ಕಾಲಿಕ ಆರ್ಥಿಕತೆಯ ಪರಿವರ್ತನೆ: ಅನೌಪಚಾರಿಕತೆಯಿಂದ ರಕ್ಷಿತ ಸ್ಥಿತಿಗೆ

ಒಂದು ಕಾಲದಲ್ಲಿ ಹೆಚ್ಚಾಗಿ ಕಾಣದ, ತೀವ್ರ ದುರ್ಬಲ ಮತ್ತು ಏಕರೂಪದ ಪ್ರಯೋಜನಗಳಿಲ್ಲದ ತಾತ್ಕಾಲಿಕ ಮತ್ತು ಅರೆಕಾಲಿಕ ಉದ್ಯೋಗಿಗಳು ಈಗ ಕನಿಷ್ಠ ಮಟ್ಟದ ರಕ್ಷಣೆಗಳು ಮತ್ತು ಸಾಮಾಜಿಕ ಭದ್ರತಾ ವ್ಯಾಪ್ತಿಯನ್ನು ಪಡೆಯುತ್ತಾರೆ.

ಈ ಸುಧಾರಣೆಯು ತಾತ್ಕಾಲಿಕ ಆರ್ಥಿಕತೆಯನ್ನು ಔಪಚಾರಿಕಗೊಳಿಸುವ ನಿಟ್ಟಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ. ಇದು ಈ ಕಾರ್ಮಿಕರಿಗೆ ದೀರ್ಘಕಾಲದವರೆಗೆ ಇಲ್ಲದ ಕಾನೂನು ಮಾನ್ಯತೆ, ಸ್ಪಷ್ಟ ಬೆಂಬಲ ಮತ್ತು ಕಲ್ಯಾಣ ಯೋಜನೆಗಳಿಗೆ ಪ್ರವೇಶವನ್ನು ನೀಡುತ್ತದೆ. ಮೀಸಲಾದ ಸಾಮಾಜಿಕ ಭದ್ರತಾ ನಿಧಿ, ಪೋರ್ಟಬಲ್ ಪ್ರಯೋಜನಗಳು ಮತ್ತು ಇ-ಶ್ರಮ್ ಮೂಲಕ ರಾಷ್ಟ್ರೀಯ ನೋಂದಣಿ ಚೌಕಟ್ಟನ್ನು ಸ್ಥಾಪಿಸುವುದರ ಮೂಲಕ, ಸಾಮಾಜಿಕ ಭದ್ರತಾ ಸಂಹಿತೆ, 2020, ಇಂದಿನ ಕಾರ್ಮಿಕರನ್ನು ರಕ್ಷಿಸುವುದಲ್ಲದೆ, ಹೆಚ್ಚು ಅಂತರ್ಗತ, ಸ್ಥಿತಿಸ್ಥಾಪಕ ಮತ್ತು ಭವಿಷ್ಯಕ್ಕೆ ಸಿದ್ಧವಾದ ತಾತ್ಕಾಲಿಕ ಆರ್ಥಿಕತೆಗೆ ಅಡಿಪಾಯ ಹಾಕುತ್ತದೆ.

Click here to see PDF

 

*****

 

(तथ्य सामग्री आईडी: 150557) आगंतुक पटल : 4


Provide suggestions / comments
इस विश्लेषक को इन भाषाओं में पढ़ें : English , Urdu , Bengali , Assamese , Manipuri , Odia
Link mygov.in
National Portal Of India
STQC Certificate