ಪ್ರಕಟಣಾ ದಿನಾಂಕ:
26 NOV 2026 1:46PM by PIB Bengaluru
ಲೋಕಸಭೆಯ ಮಾಜಿ ಸ್ಪೀಕರ್ ಶ್ರೀ ರಬಿ ರೇ ಅವರ ಜನ್ಮದಿನದ ಅಂಗವಾಗಿ ಸಂವಿಧಾನ ಸದನದ ಕೇಂದ್ರ ಸಭಾಂಗಣದಲ್ಲಿಂದು ಲೋಕಸಭಾ ಸ್ಪೀಕರ್ ಶ್ರೀ ಓಂ ಬಿರ್ಲಾ ಅವರು ಪುಷ್ಪ ನಮನ ಸಲ್ಲಿಸಿದರು.
ರಾಜ್ಯಸಭೆಯ ಉಪಸಭಾಪತಿ ಶ್ರೀ ಹರಿವಂಶ್, ಸಂಸತ್ ಸದಸ್ಯರು ಮತ್ತು ಮಾಜಿ ಸಂಸದರು ಈ ಸಂದರ್ಭದಲ್ಲಿ ಶ್ರೀ ರಾಯ್ ಅವರಿಗೆ ಗೌರವ ನಮನ ಸಲ್ಲಿಸಿದರು.
ಲೋಕಸಭೆಯ ಮಹಾ ಪ್ರಧಾನ ಕಾರ್ಯದರ್ಶಿ ಶ್ರೀ ಉತ್ಪಲ್ ಕುಮಾರ್ ಸಿಂಗ್ ಮತ್ತು ರಾಜ್ಯಸಭೆಯ ಪ್ರಧಾನ ಕಾರ್ಯದರ್ಶಿ ಶ್ರೀ ಪಿ. ಸಿ. ಮೋದಿ ಅವರು ಸಹ ಶ್ರೀ ರಬಿ ರೇ ಅವರಿಗೆ ಪುಷ್ಪ ನಮನ ಸಲ್ಲಿಸಿದರು.
ಶ್ರೀ ರಬಿ ರೇ ಅವರು 1926ರ ನವೆಂಬರ್ 26ರಂದು ಒಡಿಶಾದ (ಅಂದಿನ ಒರಿಸ್ಸಾ) ಪುರಿ ಜಿಲ್ಲೆಯ ಭನಾರಗಢ ಗ್ರಾಮದಲ್ಲಿ ಜನಿಸಿದರು. ಅವರು 1967ರಲ್ಲಿ (4ನೇ ಲೋಕಸಭೆ) ಮೊದಲ ಬಾರಿಗೆ ಲೋಕಸಭೆಗೆ ಆಯ್ಕೆಯಾದರು. ಶ್ರೀ ರೇ ಅವರು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ಶ್ರೀ ರಬಿ ರೇ ಅವರು ಒಂಭತ್ತನೇ ಲೋಕಸಭೆಯ ಸಭಾಪತಿಯಾಗಿ 19 ಡಿಸೆಂಬರ್ 1989 ರಿಂದ 09 ಜುಲೈ 1991 ರವರೆಗೆ ಸೇವೆ ಸಲ್ಲಿಸಿದ್ದರು.
ಸಂವಿಧಾನ ಸದನದ ಹೊರಗಿನ ಅಂಗಣದಲ್ಲಿರುವ ಶ್ರೀ ರಬಿ ರೇ ಅವರ ಭಾವಚಿತ್ರವನ್ನು ಅಂದಿನ ಭಾರತದ ರಾಷ್ಟ್ರಪತಿ ಶ್ರೀ ಪ್ರಣಬ್ ಮುಖರ್ಜಿ ಅವರು 2014ರ ಫೆಬ್ರವರಿ 10 ರಂದು ಅನಾವರಣಗೊಳಿಸಿದ್ದರು.
*****