ಪ್ರಕಟಣಾ ದಿನಾಂಕ:
25 NOV 2026 7:50PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವೆನಿಸ್ ಆರ್ಟ್ ಬಿಯೆನ್ನೇಲ್ ನಲ್ಲಿ ಅತ್ಯುತ್ತಮ ರಾಷ್ಟ್ರೀಯ ಪವಿಲಿಯನ್ ಗೆ ಭಾರತ ಪೆವಿಲಿಯನ್ ಗೆ ಗೌರವಾನ್ವಿತ ವಿಸಿಟರ್ಸ್ ಲಯನ್ ಪ್ರಶಸ್ತಿ ಸಿಕ್ಕಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಜತೆಗೆ ಇದನ್ನು ಭಾರತದ ಕಲಾ ಮತ್ತು ಸಾಂಸ್ಕೃತಿಕ ಜಗತ್ತಿಗೆ ಹೆಮ್ಮೆಯ ಕ್ಷಣ ಎಂದು ಬಣ್ಣಿಸಿದ್ದಾರೆ.
ಈ ಸಂಬಂಧ ಎಕ್ಸ್ ಖಾತೆಯಲ್ಲಿ ಶ್ರೀ ಮೋದಿ ಅವರು ಹೀಗೆ ಬರೆದಿದ್ದಾರೆ;
"ಭಾರತದ ಕಲಾ ಮತ್ತು ಸಾಂಸ್ಕೃತಿಕ ಜಗತ್ತಿಗೆ ಹೆಮ್ಮೆಯ ಕ್ಷಣ!
ವೆನಿಸ್ ಆರ್ಟ್ ಬಿಯೆನ್ನಾಲೆಯಲ್ಲಿ ಭಾರತದ ಪೆವಿಲಿಯನ್ ಪ್ರತಿಷ್ಠಿತ ‘ವಿಸಿಟರ್ಸ್ ಲಯನ್ – ಅತ್ಯುತ್ತಮ ರಾಷ್ಟ್ರೀಯ ಪೆವಿಲಿಯನ್’ ಪ್ರಶಸ್ತಿಯನ್ನು ಗೆದ್ದಿರುವುದು ಅತ್ಯಂತ ಸಂತೋಷದ ಮತ್ತು ಹೆಮ್ಮೆಯ ಸಂಗತಿಯಾಗಿದೆ.
ನಮ್ಮ ಕಲಾವಿದರು ಭಾರತದ ಶ್ರೀಮಂತ ಮತ್ತು ವೈವಿಧ್ಯಮಯ ಸಾಂಸ್ಕೃತಿಕ ಪರಂಪರೆಯಿಂದ ಸ್ಫೂರ್ತಿ ಪಡೆದು, ಜಾಗತಿಕ ಕಲಾಲೋಕಕ್ಕೆ ಹೊಸ ದೃಷ್ಟಿಕೋನಗಳನ್ನು ಪರಿಚಯಿಸುತ್ತಿದ್ದಾರೆ.
ಈ ಸಾಧನೆಯು ಇನ್ನೂ ಅನೇಕ ಯುವ ಭಾರತೀಯರಿಗೆ ಕಲೆಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಹಾಗೂ ಹೊಸ ಸೃಜನಶೀಲ ಸಾಧ್ಯತೆಗಳನ್ನು ಅನ್ವೇಷಿಸಲು ಪ್ರೇರಣೆಯಾಗಲಿ ಎಂದು ಆಶಿಸುತ್ತೇನೆ.’’
*****