57th International Film Festival of India 2026
20 – 28 Nov 2026

'ಭಾಯಿ ಬ್ಯಾಂಡ್' ಐ ಎಫ್ ಎಫ್ ಐ 2026ರಲ್ಲಿ ಸಹೋದರತ್ವ, ಸಂಪ್ರದಾಯ ಮತ್ತು ಬದಲಾಗುತ್ತಿರುವ ಕಾಲಘಟ್ಟದ ಮಧುರ ಕಥೆ

ಪ್ರಕಟಣಾ ದಿನಾಂಕ: 25 NOV 2026 3:17PMby PIB Bengaluruಪ್ರಕಟಣೆ ಐ.ಡಿ.: 2341242Views: 8

ಮನೀಷ್ ಸೈನಿ ನಿರ್ದೇಶನದ ಗುಜರಾತಿ ಚಿತ್ರ ಭಾಯಿ ಬ್ಯಾಂಡ್, ಇಂದು ಗೋವಾದಲ್ಲಿ ನಡೆಯುತ್ತಿರುವ 57ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐಎಫ್ ಎಫ್ ಐ) 2026 ರ ಗಾಲಾ ಪ್ರೀಮಿಯರ್ ವಿಭಾಗದಲ್ಲಿ ಕಾಣಿಸಿಕೊಂಡಿದೆ. ಚಿತ್ರವು ತಮ್ಮ ಹಳ್ಳಿಯಲ್ಲಿ ಪರಂಪರಗತ ಮದುವೆ ಬ್ಯಾಂಡ್ ನಡೆಸುವ ಇಬ್ಬರು ಸಹೋದರರನ್ನು ಅನುಸರಿಸುತ್ತದೆ. ಅವರ ಜೀವನದಲ್ಲಿ ಅಪ್ರತೀಕ್ಷಿತ ತಿರುವು ಬರುತ್ತದೆ, ಏಕೆಂದರೆ ಒಂದು ಭಿನ್ನಾಭಿಪ್ರಾಯವು ಅವರನ್ನು ದೂರ ಮಾಡುತ್ತದೆ. ಒಬ್ಬ ಸಹೋದರನು ವಾರಗಳ ನಂತರ ಡಿಜೆ ವ್ಯವಸ್ಥೆ ಮತ್ತು ಭಾರೀ ಸ್ಪೀಕರ್ ಗಳೊಂದಿಗೆ ಮರಳಿದಾಗ ತನ್ನ ಫೋನಿನಲ್ಲಿ ಪ್ಲೇಲಿಸ್ಟ್ ಮಾತ್ರ ಇದ್ದಾಗ, ಪಾರಂಪರಿಕ ಬ್ಯಾಂಡ್ ಅಪ್ರತೀಕ್ಷಿತ ಸವಾಲನ್ನು ಎದುರಿಸುತ್ತದೆ. ಮುಂದುವರಿಯುವ ತಂತ್ರಜ್ಞಾನ ಅಭಿವೃದ್ಧಿಯ ಪಾರಂಪರಿಕ ಉದ್ಯೋಗಗಳ ಮೇಲೆ ಮತ್ತು ಕುಟುಂಬಗಳನ್ನು ಒಟ್ಟಿಗೆ ಹಿಡಿದಿರುವ ಸಂಬಂಧಗಳ ಮೇಲೆ ಪರಿಣಾಮವನ್ನು ಪರಿಶೀಲಿಸುವ ಕಥೆ ಇದಾಗಿದೆ.

ಇಂದು ಪಿಐಬಿ ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ಮನೀಷ್ ಸೈನಿ, ಗುಜರಾತಿ ಭಾಷೆ ಮತ್ತು ಸಾಂಸ್ಕೃತಿಕ ಹಿನ್ನೆಲೆಯಲ್ಲಿ ಬೇರೂರಿದ್ದರೂ  ಚಿತ್ರದ ಮೂಲಭೂತ ಸಂದೇಶ ಮತ್ತು ಕಥಾವಸ್ತು ವಿಶ್ವವ್ಯಾಪಿ ಮತ್ತು ಭಾರತಾದ್ಯಾಂತ ಪ್ರೇಕ್ಷಕರಿಗೆ ಸಂಬಂಧಿಸಿದಂತೆ ಇದೆ ಎಂದು ಒತ್ತಿಹೇಳಿದರು. ಪ್ರಾದೇಶಿಕ ಸಿನೆಮಾದಲ್ಲಿ ಆಧಾರಿತ ಕಲಾತ್ಮಕ ಅಭಿವ್ಯಕ್ತಿಗಳು ಮತ್ತು ಕಥೆಗಳನ್ನು ಜನಪ್ರಿಯಗೊಳಿಸುವ ಮಹತ್ವವನ್ನು ಅವರು ಬಿಂಬಿಸಿದರು. ಇದರಿಂದ ಅವು ಹೆಚ್ಚಿನ ಪ್ರೇಕ್ಷಕರಿಗೆ ತಲುಪಬಹುದು. ಸೈನಿ ಅವರು ಚಿತ್ರದ ಶೀರ್ಷಿಕೆಯನ್ನು ವಿಶೇಷವಾಗಿ ಇಷ್ಟಪಟ್ಟಿದ್ದಾರೆ. ಏಕೆಂದರೆ ಇದನ್ನು ಇಬ್ಬರು ಸಹೋದರರ ನಡುವಿನ ಸ್ನೇಹಭಾವದ ಉಲ್ಲೇಖ ಮತ್ತು ಮದುವೆ ಬ್ಯಾಂಡ್ ಗೆ ಉಲ್ಲೇಖವಾಗಿ ಅರ್ಥಮಾಡಿಕೊಳ್ಳಬಹುದು.

ನಟ ಪ್ರೀತ್ ಕಮಾನಿ, ಭಾಯಿ ಬ್ಯಾಂಡ್ ಅನ್ನು ಬಣ್ಣಗಳು ಮತ್ತು ಉತ್ಸಾಹದಿಂದ ತುಂಬಿದ ವಿಶಿಷ್ಟ ಚಿತ್ರವೆಂದು ವರ್ಣಿಸಿದರು. ತಮ್ಮ ಮೊದಲ ಗುಜರಾತಿ ಚಿತ್ರವನ್ನು ಗುರುತಿಸಿ, ನಿರ್ದೇಶಕ ಮನೀಷ್ ಸೈನಿ ಅವರೊಂದಿಗೆ ಕೆಲಸ ಮಾಡಿದ ಅನುಭವವನ್ನು ಹಂಚಿಕೊಂಡು, ಚಲನಚಿತ್ರ ನಿರ್ಮಾಣ ಪ್ರಕ್ರಿಯೆಯಲ್ಲಿ ಅನುಭವಿಸಿದ ಸೃಜನಾತ್ಮಕ ಸ್ವಾತಂತ್ರ್ಯವನ್ನು ಮೆಚ್ಚಿದರು. ನಟರು ಪಾತ್ರ ಆಯ್ಕೆ ಪ್ರಕ್ರಿಯೆಯಿಂದ ಬಂದ ಮನರಂಜನೆಯ ಕಥೆಯನ್ನು ಹಂಚಿಕೊಂಡ ಅವರು, ನಿರ್ದೇಶಕರಿಗೆ ಸ್ಕ್ರೀನ್ ಟೆಸ್ಟ್ ನಡೆಸಲು ವಿನಂತಿಸಿದ್ದನ್ನು ನೆನಪಿಸಿಕೊಂಡರು.

ನಟ ಚಿರಾಗ್ ಕಟ್ರೆಚಾ ತಮ್ಮ ಪಾತ್ರವನ್ನು ಅರ್ಥಮಾಡಿಕೊಳ್ಳುವ ಮತ್ತು ಒಳಗೊಳ್ಳುವ ಪ್ರಕ್ರಿಯೆಯ ಬಗ್ಗೆ ಮಾತನಾಡಿದರು. ಇದರಿಂದ ಪ್ರದರ್ಶನಕ್ಕೆ ಪ್ರಾಮಾಣಿಕತೆ ಬರುತ್ತದೆ. ಅವರು ಗಾಯಕನ ಪಾತ್ರವನ್ನು ನಿರ್ವಹಿಸುವ ಸವಾಲುಗಳನ್ನು ಬಿಂಬಿಸಿ, ಇದನ್ನು ಬೇಡಿಕೆಯ ಆದರೆ ಆಕರ್ಷಕ ಅನುಭವವೆಂದು ವರ್ಣಿಸಿದರು.

ತಮ್ಮ ಪಾತ್ರದ ಬಗ್ಗೆ ಒಳನೋಟಗಳನ್ನು ಹಂಚಿಕೊಂಡ ನಟಿ ಶ್ರದ್ಧಾ ಡಂಗರ್, ತಮ್ಮ ಪಾತ್ರವನ್ನು ಸುಂದರ ಮತ್ತು ಹರ್ಷಭರಿತ ವ್ಯಕ್ತಿತ್ವವೆಂದು ವರ್ಣಿಸಿದರು. ತಮ್ಮ ಅನುಭವವನ್ನು ನೆನಪಿಸಿಕೊಂಡು, ಅವರು ಸಹಕಾರ ಮತ್ತು ಸಂಪೂರ್ಣ ತಂಡದೊಂದಿಗೆ ಕಳೆದ ಆನಂದಕರ ಸಮಯದ ಬಗ್ಗೆ ಹೃತ್ಪೂರ್ವಕವಾಗಿ ಮಾತನಾಡಿದರು.

ಹಾಸ್ಯ, ಸಂಗೀತ ಮತ್ತು ಆಕರ್ಷಕ ಕಥನದ ಮೂಲಕ, ಭಾಯಿ ಬ್ಯಾಂಡ್ ಮದುವೆ ಆಚರಣೆಗಳ ಬದಲಾಗುತ್ತಿರುವ ಶಬ್ದವನ್ನು ಮೀರಿ ಕಥೆಯನ್ನು ಪರದೆಗೆ ತರುತ್ತದೆ. ಇದು ತಂತ್ರಜ್ಞಾನ, ಪರಂಪರಗತ ಜೀವನೋಪಾಯ ಮತ್ತು ಮಾನವ ಸಂಬಂಧಗಳ ಸಂಧಿಯ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತದೆ. ಜತೆಗೆ ಪ್ರಾದೇಶಿಕ ಕಥನದ ಸಾಂಸ್ಕೃತಿಕ ಚೈತನ್ಯವನ್ನು ಆಚರಿಸುತ್ತದೆ.

ಪತ್ರಿಕಾ ಸಂವಾದವನ್ನು ಶ್ರೀ ಕಿರಣ್ ಮುರಳಿ ನಿರ್ವಹಿಸಿದರು.

ಪೂರ್ಣ ಪತ್ರಿಕಾಗೋಷ್ಠಿಯನ್ನು ಇಲ್ಲಿ ವೀಕ್ಷಿಸಿ:

Read IFFILOID here: https://www.pib.gov.in/iffi/57/iffiLoid.aspx?yr=2026&lang=1&reg=48

 

*****


Great films resonate through passionate voices. Share your love for cinema with #IFFI2026 and #StoriesWithoutBorders. Tag us @pibindia on Instagram and @PIB_India on X, and we will help amplify your festival moments!

For accredited journalists, critics, bloggers, and vloggers seeking 1-on-1 interviews with filmmakers and festival juries, write to us at:
iffi.mediadesk@pib.gov.in with the subject line: Take One with PIB.


Official Release ID: 2341242
•
Media Centre: Goa
•
Festival Dates: Nov 20 – 28, 2026