ಪ್ರಕಟಣಾ ದಿನಾಂಕ:
24 NOV 2026 8:42AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 'ಲಚಿತ್ ದಿವಸ’ದ ಅಂಗವಾಗಿ ಮಹಾನ್ ವ್ಯಕ್ತಿತ್ವದ ಲಚಿತ್ ಬೋರ್ಫುಕನ್ ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ. ಅಸ್ಸಾಂ ಅನ್ನು ರಕ್ಷಿಸುವಲ್ಲಿ ಅವರು ತೋರಿದ ಸ್ಥೈರ್ಯ ಮತ್ತು ದೃಢನಿಶ್ಚಯವನ್ನು ಇದೇ ವೇಳೆ ಸ್ಮರಿಸಿದ್ದಾರೆ.
ಲಚಿತ್ ಬೋರ್ಫುಕನ್ ಅವರ ಅಸಾಧಾರಣ ನಾಯಕತ್ವ ಮತ್ತು ಜನರ ಮೇಲಿನ ಅವರ ಸಮರ್ಪಣಾ ಭಾವವು ಪೀಳಿಗೆಗಳಿಗೆ ಸ್ಫೂರ್ತಿ ನೀಡುತ್ತಲಿರಲಿದೆ ಹಾಗೂ ಅಸ್ಸಾಂನ ಶಕ್ತಿ ಮತ್ತು ಚೈತನ್ಯವನ್ನು ಎಲ್ಲರಿಗೂ ನೆನಪು ಮಾಡಿಕೊಡುತ್ತದೆ ಎಂದು ಪ್ರಧಾನಮಂತ್ರಿ ಹೇಳಿದ್ದಾರೆ.
ಪ್ರಧಾನಮಂತ್ರಿಗಳು ಎಕ್ಸ್ ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:
“ಲಚಿತ್ ದಿವಸದಂದು, ಅಸ್ಸಾಂ ಅನ್ನು ರಕ್ಷಿಸಲು ತಮ್ಮ ಧೈರ್ಯ ಮತ್ತು ದೃಢನಿಶ್ಚಯದ ಮೂಲಕ ನೆರವಾದ ಮಹಾನ್ ವ್ಯಕ್ತಿ ಲಚಿತ್ ಬೋರ್ಫುಕನ್ ಅವರಿಗೆ ನಾವು ಗೌರವ ನಮನ ಸಲ್ಲಿಸುತ್ತೇವೆ.
ಅವರ ಅಪ್ರತಿಮ ನಾಯಕತ್ವ ಮತ್ತು ಜನಸೇವೆಗಾಗಿನ ಸಮರ್ಪಣಾ ಭಾವವು ಪೀಳಿಗೆಗಳಿಗೆ ಸ್ಫೂರ್ತಿ ನೀಡುತ್ತಲಿರಲಿದೆ; ಜೊತೆಗೆ, ಅಸ್ಸಾಂನ ಶಕ್ತಿ, ಸ್ಥೈರ್ಯ ಮತ್ತು ಚೈತನ್ಯವನ್ನು ನೆನಪಿಸಿಕೊಡುತ್ತದೆ."
লাচিত দিৱসৰ পৱিত্ৰ ক্ষণত আমি মহান বীৰ লাচিত বৰফুকনক শ্ৰদ্ধাৰে স্মৰণ কৰিছোঁ, যাৰ সাহস আৰু দৃঢ় সংকল্পই অসমক সুৰক্ষিত কৰাত গুৰুত্বপূৰ্ণ ভূমিকা পালন কৰিছিল।
তেওঁৰ অসাধাৰণ নেতৃত্ব আৰু জনসাধাৰণৰ প্ৰতি থকা একনিষ্ঠ সেৱাৰ মনোভাবে আজিও প্ৰজন্মৰ পিছত প্ৰজন্মক অনুপ্ৰাণিত কৰি আহিছে। একেদৰে, তেওঁৰ জীৱনাদৰ্শই আমাক অসমৰ শক্তি, সাহস আৰু স্বাভিমানৰ কথাও সোঁৱৰাই দিয়ে।"
*****