ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಛತ್ ಮಹಾಪರ್ವದ ಸಂಧ್ಯಾ ಅರ್ಘ್ಯದ ನಿಮಿತ್ತ ರಾಷ್ಟ್ರಕ್ಕೆ ಪ್ರಧಾನಮಂತ್ರಿ ಅವರಿಂದ ಶುಭಾಶಯ

ಪ್ರಕಟಣಾ ದಿನಾಂಕ: 15 NOV 2026 3:52PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 'ಛತ್ ಮಹಾಪರ್ವ'ದ 'ಸಂಧ್ಯಾ ಅರ್ಘ್ಯ'ದ ಪ್ರಯುಕ್ತ ದೇಶಾದ್ಯಂತದ ಎಲ್ಲಾ ನಾಗರಿಕರಿಗೆ ಹೃತ್ಪೂರ್ವಕ ಶುಭಾಶಯ ಕೋರಿದ್ದಾರೆ.

ಪ್ರಕೃತಿ ಆರಾಧನೆಗೆ ಮೀಸಲಾದ ಈ ಪವಿತ್ರ ಸಂದರ್ಭವು ಎಲ್ಲರಲ್ಲೂ ಹೊಸ ಪ್ರಜ್ಞೆ ಹಾಗೂ ಚೈತನ್ಯವನ್ನು ತುಂಬಲಿ, ಜೊತೆಗೆ ಸಮಾಜದಲ್ಲಿ ಸಾಮರಸ್ಯ ಮತ್ತು ಸಾಮಾಜಿಕ ಒಗ್ಗಟ್ಟನ್ನು ಇನ್ನಷ್ಟು ಗಟ್ಟಿಗೊಳಿಸಲಿ ಎಂದು ಪ್ರಧಾನಮಂತ್ರಿ ಆಶಿಸಿದ್ದಾರೆ. ಸೂರ್ಯದೇವನ ಕೃಪೆಯಿಂದ ಪ್ರತಿಯೊಬ್ಬರ ಜೀವನವೂ ಬೆಳಗಲಿ ಎಂದು ಪ್ರಾರ್ಥಿಸಿರುವ ಅವರು, 'ಛಠೀ ಮೈಯಾ'ಗೆ ನಮಿಸಿದ್ದಾರೆ.

ಪ್ರಧಾನಮಂತ್ರಿಗಳು ಎಕ್ಸ್ ನಲ್ಲಿ ಹೀಗೆ ಹಂಚಿಕೊಂಡಿದ್ದಾರೆ: 

"सभी देशवासियों को महापर्व छठ के संध्या अर्घ्य की अनेकानेक शुभकामनाएं। प्रकृति-पूजन को समर्पित यह पावन अवसर हर किसी के लिए नई चेतना और स्फूर्ति लेकर आए, साथ ही समाज में सद्भाव एवं समरसता को और अधिक प्रगाढ़ करे। सूर्यदेव की कृपा से सभी का जीवन आलोकित हो। जय छठी मइया!"

 

*****


(ಪ್ರಕಟಣೆ ಐ.ಡಿ.: 2336770) ವಿಸಿಟರ್ ಕೌಂಟರ್ : 2