ಪ್ರಕಟಣಾ ದಿನಾಂಕ:
15 NOV 2026 3:02PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜಾರ್ಖಂಡ್ ರಾಜ್ಯ ಸಂಸ್ಥಾಪನಾ ದಿನದ ಅಂಗವಾಗಿ ಆ ರಾಜ್ಯದ ಜನರಿಗೆ ಹೃತ್ಪೂರ್ವಕ ಶುಭಾಶಯ ಕೋರಿದ್ದಾರೆ.
ಜಾರ್ಖಂಡ್ ರಾಜ್ಯವು ಬುಡಕಟ್ಟು ಹೆಮ್ಮೆ, ಸಾಂಸ್ಕೃತಿಕ ವೈವಿಧ್ಯತೆ ಮತ್ತು ನೈಸರ್ಗಿಕ ಸಂಪತ್ತಿನ ವಿಶಿಷ್ಟ ಸಂಗಮ ಎಂದು ಬಣ್ಣಿಸಿರುವ ಪ್ರಧಾನಮಂತ್ರಿಯವರು, ಅಲ್ಲಿನ ದಟ್ಟ ಅರಣ್ಯಗಳು, ರಮಣೀಯ ಜಲಪಾತಗಳು ಮತ್ತು ಐತಿಹಾಸಿಕ ತಾಣಗಳು ಅದರ ವಿಶಿಷ್ಟ ಗುರುತನ್ನು ಶ್ರೀಮಂತಗೊಳಿಸಿವೆ. ಅಲ್ಲದೆ, ಭಗವಾನ್ ಬಿರ್ಸಾ ಮುಂಡಾ ಅವರ ಶೌರ್ಯ ಮತ್ತು ತ್ಯಾಗದ ಕಥೆಗಳು ಅಲ್ಲಿನ ಸಂಪ್ರದಾಯಗಳಿಗೆ ನಿರಂತರ ಪ್ರೇರಣೆ ನೀಡುತ್ತಲಿವೆ ಎಂದು ಹೇಳಿದ್ದಾರೆ.
ಖನಿಜಗಳು ಮತ್ತು ಇಂಧನದಿಂದ ಹಿಡಿದು ಕರಕುಶಲ ವಸ್ತುಗಳು ಮತ್ತು ಪ್ರವಾಸೋದ್ಯಮದವರೆಗೆ ರಾಜ್ಯದ ಅಪಾರ ಸಾಮರ್ಥ್ಯವನ್ನು ವಿವರಿಸಿರುವ ಅವರು, ಕಠಿಣ ಪರಿಶ್ರಮಿ ಹಾಗೂ ಪ್ರತಿಭಾವಂತ ನಾಗರಿಕರ ದೃಢ ಸಂಕಲ್ಪ ಮತ್ತು ಸಾಮರ್ಥ್ಯದ ಬಲದೊಂದಿಗೆ ಜಾರ್ಖಂಡ್ ಅಭಿವೃದ್ಧಿಯ ಹೊಸ ಶಿಖರವನ್ನೇರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾ ಅವರು, ಎಲ್ಲರಿಗೂ ಸಂತೋಷ ಮತ್ತು ಸಮೃದ್ಧಿಯನ್ನು ಹಾರೈಸಿದ್ದಾರೆ.
ಪ್ರಧಾನಮಂತ್ರಿಗಳು ಎಕ್ಸ್ ನಲ್ಲಿ ಹೀಗೆ ಹಂಚಿಕೊಂಡಿದ್ದಾರೆ:
"झारखंड के सभी भाई-बहनों को राज्य के स्थापना दिवस की हार्दिक शुभकामनाएं!
हमारा यह प्रदेश जनजातीय गौरव, सांस्कृतिक विविधता और प्राकृतिक संपदा का अनूठा संगम है। यहां के घने वन, मनोरम जलप्रपात और ऐतिहासिक स्थल इसकी विशिष्ट पहचान को समृद्ध करते हैं।
भगवान बिरसा मुंडा जी की वीरता और बलिदान की गाथाओं से यहां की परंपराओं को निरंतर प्रेरणा मिलती रही है।
खनिज और ऊर्जा से लेकर हस्तशिल्प और पर्यटन तक इस राज्य में अपार संभावनाएं हैं।
मुझे विश्वास है कि यहां के मेरे मेहनती और प्रतिभाशाली परिवारजनों के संकल्प और सामर्थ्य के बल पर यह प्रदेश विकास की नई ऊंचाइयों को छुएगा।
मेरी कामना है कि यह विशेष अवसर यहां के सभी लोगों के जीवन में सुख-समृद्धि और खुशहाली लेकर आए।"
*****