ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ನಿಷ್ಪಕ್ಷಪಾತತೆ, ನಿಸ್ವಾರ್ಥತೆ ಮತ್ತು ನ್ಯಾಯದ ಸದ್ಗುಣಗಳನ್ನು ಬಿಂಬಿಸುವ ಸಂಸ್ಕೃತ ಸುಭಾಷಿತ ಹಂಚಿಕೊಂಡ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 09 NOV 2026 10:04AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಿಜವಾದ ಸದ್ಗುಣಶೀಲ ವ್ಯಕ್ತಿಗಳ ಗುಣಗಳನ್ನು ಬಿಂಬಿಸುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿದ್ದಾರೆ. ಈ ಶ್ಲೋಕವು ಎಲ್ಲಾ ಜೀವಿಗಳನ್ನು ಸಮಾನತೆಯಿಂದ ಪರಿಗಣಿಸುವುದು, ವೈಯಕ್ತಿಕ ಆಸೆಗಳು ಮತ್ತು ಕೋಪದಿಂದ ಮುಕ್ತವಾಗಿರುವುದು ಮತ್ತು ನ್ಯಾಯದ ಹಾದಿಯಿಂದ ಎಂದಿಗೂ ವಿಮುಖರಾಗಬಾರದು ಎಂದು ಒತ್ತಿಹೇಳುತ್ತದೆ.

ಸಂಸ್ಕೃತ ಸುಭಾಷಿತ ಪತ್ರವನ್ನು ಹಂಚಿಕೊಂಡ ಶ್ರೀ ನರೇಂದ್ರ ಮೋದಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹೀಗೆ ಬರೆದಿದ್ದಾರೆ;

“समाः सर्वेषु भूतेषु कामक्रोधविवर्जिताः।

न्यायमार्गं न मुञ्चन्ति ते वै सत्पुरुषाः स्मृताः।”

 

*****


(ಪ್ರಕಟಣೆ ಐ.ಡಿ.: 2334280) ವಿಸಿಟರ್ ಕೌಂಟರ್ : 6
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Assamese , Gujarati , Telugu , Malayalam