ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಭಾರತದ ಶುದ್ಧ ಇಂಧನ ಪರಿವರ್ತನೆಯಲ್ಲಿ ಸೌರಶಕ್ತಿಯ ಪಾತ್ರದ ಕುರಿತು ಲೇಖನವನ್ನು ಹಂಚಿಕೊಂಡ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 02 NOV 2026 1:04PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ದೇಶದ ಇಂಧನ ಅಗತ್ಯಗಳನ್ನು ಪೂರೈಸುವಲ್ಲಿ ಸೌರಶಕ್ತಿಯು ವಹಿಸುತ್ತಿರುವ ಹೆಚ್ಚಿನ ಪಾತ್ರ ಹಾಗೂ ಭಾರತದ ಶುದ್ಧ ಇಂಧನ ಪರಿವರ್ತನೆಯು ಹೇಗೆ ವೇಗವನ್ನು ಪಡೆಯುತ್ತಿದೆ ಎಂಬುದರ ಕುರಿತು ಕೇಂದ್ರ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಮತ್ತು ಶ್ರೀ ಮೈಕ್ ಬ್ಲೂಮ್‌ಬರ್ಗ್ ಅವರ ಲೇಖನವನ್ನು ಹಂಚಿಕೊಂಡಿದ್ದಾರೆ. ನವೀಕರಿಸಬಹುದಾದ ಇಂಧನದ ಬೆಳವಣಿಗೆ, ಮೇಲ್ಛಾವಣಿ ಸೌರಶಕ್ತಿಯ ವಿಸ್ತರಣೆ ಮತ್ತು ಸಂಗ್ರಹಣೆ ಮತ್ತು ಪ್ರಸರಣದಲ್ಲಿನ ಹೂಡಿಕೆಗಳಲ್ಲಿನ ಬೆಳವಣಿಗೆಗಳನ್ನು ಲೇಖನವು ಪ್ರಸ್ತಾಪಿಸುತ್ತದೆ ಎಂದು ಶ್ರೀ ನರೇಂದ್ರ ಮೋದಿ ಅವರು ಪ್ರತಿಪಾದಿಸಿದ್ದಾರೆ. ಮತ್ತು ಈ ಬದಲಾವಣೆಯು ವಿದ್ಯುತ್ ಶುಲ್ಕ ಪಾವತಿಯನ್ನು ತಗ್ಗಿಸಲು, ಉದ್ಯೋಗಗಳನ್ನು ಸೃಷ್ಟಿಸಲು ಮತ್ತು ಇಂಧನ ಭದ್ರತೆ ಬಲವರ್ಧನೆಗೆ ಹೇಗೆ ಸಹಾಯ ಮಾಡುತ್ತಿದೆ ಎಂಬುದನ್ನು ಲೇಖನದಲ್ಲಿ ವಿವರಿಸಲಾಗಿದೆ.

ಶ್ರೀ ಮೋದಿ ಅವರು ತಮ್ಮ X ಪೋಸ್ಟ್ ನಲ್ಲಿ  ಹೀಗೆ ಬರೆದಿದ್ದಾರೆ;

ದೇಶದ ಇಂಧನ ಅಗತ್ಯಗಳನ್ನು ಪೂರೈಸುವಲ್ಲಿ ಸೌರಶಕ್ತಿಯ ಪಾತ್ರ ಹೆಚ್ಚುತ್ತಿರುವಂತೆಯೇ ಭಾರತದ ಶುದ್ಧ ಇಂಧನ ಪರಿವರ್ತನೆಯು ವೇಗವನ್ನು ಪಡೆಯುತ್ತಿದೆ.

@MikeBloomberg ಮತ್ತು ಕೇಂದ್ರ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ @JoshiPralhad ನವೀಕರಿಸಬಹುದಾದ ಇಂಧನದ ಬೆಳವಣಿಗೆ, ಮೇಲ್ಛಾವಣಿ ಸೌರಶಕ್ತಿಯ ವಿಸ್ತರಣೆ ಮತ್ತು ಸಂಗ್ರಹಣೆ ಮತ್ತು ಪ್ರಸರಣದಲ್ಲಿನ ಹೂಡಿಕೆಗಳ ಬಗ್ಗೆ ಬರೆದಿದ್ದಾರೆ.

ಈ ಬದಲಾವಣೆಯು ವಿದ್ಯುತ್ ಬಿಲ್‌ ಪಾವತಿ ತಗ್ಗಿಸಲು, ಉದ್ಯೋಗಗಳನ್ನು ಸೃಷ್ಟಿಸಲು ಮತ್ತು ಇಂಧನ ಭದ್ರತೆ ಬಲವರ್ಧನೆಗೊಳಿಸಲು ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ಅವರು ಲೇಖನದಲ್ಲಿ ಪ್ರಧಾನವಾಗಿ ಪ್ರಸ್ತಾಪಿಸಿದ್ದಾರೆ.

 

*****


(ಪ್ರಕಟಣೆ ಐ.ಡಿ.: 2331501) ವಿಸಿಟರ್ ಕೌಂಟರ್ : 16
ಪ್ರಕಟಣೆಯನ್ನು ಇದರಲ್ಲಿ ಓದಿ: English , Khasi , Urdu , हिन्दी , Marathi , Bengali , Bengali-TR , Assamese , Gujarati , Tamil , Telugu