ಸಿಬ್ಬಂದಿ, ಸಾರ್ವಜನಿಕ ಅಹವಾಲು ಮತ್ತು ಪಿಂಚಣಿ ಸಚಿವಾಲಯ
azadi ka amrit mahotsav

ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆಯಿಂದ 2026ರ ನ. 1 ರಿಂದ 30ರವರೆಗೆ 'ರಾಷ್ಟ್ರವ್ಯಾಪಿ ಡಿಜಿಟಲ್ ಜೀವಿತ ಪ್ರಮಾಣಪತ್ರ (ಡಿ ಎಲ್ ಸಿ) ಅಭಿಯಾನ-5' ಆಯೋಜನೆ


ದೇಶಾದ್ಯಂತ 2000 ಜಿಲ್ಲೆಗಳು/ನಗರಗಳಲ್ಲಿ ಶಿಬಿರಗಳ ಆಯೋಜನೆ: ಇದು ಈವರೆಗಿನ ಅತಿದೊಡ್ಡ ಡಿ ಎಲ್ ಸಿ ಅಭಿಯಾನ

ಮುಖ ಗುರುತಿಸುವಿಕೆ ತಂತ್ರಜ್ಞಾನ ಬಳಸಿ ಪಿಂಚಣಿದಾರರನ್ನು ಡಿಜಿಟಲ್ ಮೂಲಕ ಸಬಲೀಕರಣ ಉತ್ತೇಜಿಸುವುದು ಇದರ ಉದ್ದೇಶ

ಒಟ್ಟು 2.30 ಕೋಟಿ ಡಿಜಿಟಲ್ ಜೀವಿತ ಪ್ರಮಾಣಪತ್ರ (ಡಿ ಎಲ್ ಸಿ) ಪಡೆಯುವ ಗುರಿ ಹೊಂದಲಾಗಿದ್ದು, ಅದರಲ್ಲಿ 1.50 ಕೋಟಿ ಪ್ರಮಾಣಪತ್ರಗಳನ್ನು 'ಮುಖ ಗುರುತಿಸುವಿಕೆ' ತಂತ್ರಜ್ಞಾನದ ಮೂಲಕವೇ ಪಡೆಯುವ ಮಾದರಿ ಉದ್ದೇಶ

ಒಂದು ತಿಂಗಳ ಕಾಲ ನಡೆಯಲಿರುವ ಈ ಅಭಿಯಾನಕ್ಕೆ ಸಹಯೋಗ ನೀಡಲಿರುವ  19 ಬ್ಯಾಂಕುಗಳು, 785 ಜಿಲ್ಲಾ ಅಂಚೆ ಕಚೇರಿಗಳು, 56 ಕಲ್ಯಾಣ ಸಂಘಗಳು, MeitY (ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ) ಹಾಗೂ UIDAI ತಂಡಗಳು, CGDA, ರೈಲ್ವೆ ಇಲಾಖೆ, ದೂರಸಂಪರ್ಕ ಇಲಾಖೆ, EPFO ​​ಮತ್ತು ರಾಜ್ಯ ಸರ್ಕಾರಗಳು

ಪ್ರಕಟಣಾ ದಿನಾಂಕ: 30 OCT 2026 1:35PM by PIB Bengaluru

ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆಯು 2026ರ ನವೆಂಬರ್ 1 ರಿಂದ 30ರವರೆಗೆ ಭಾರತದಾದ್ಯಂತ 2000 ನಗರಗಳು/ಜಿಲ್ಲೆಗಳಲ್ಲಿ 5ನೇ ರಾಷ್ಟ್ರವ್ಯಾಪಿ ಡಿಜಿಟಲ್ ಜೀವಿತ ಪ್ರಮಾಣಪತ್ರ (ಡಿ ಎಲ್ ಸಿ) ಅಭಿಯಾನವನ್ನು ಆಯೋಜಿಸಲಿದೆ. ಈ ಕುರಿತ ಮಾರ್ಗಸೂಚಿಗಳನ್ನು ಇಲಾಖೆಯು 2026ರ ಆಗಸ್ಟ್ 13ರಂದು ಹೊರಡಿಸಿದ ಅಧಿಕೃತ ಜ್ಞಾಪಕ ಪತ್ರದ (O.M.) ಮೂಲಕ ತಿಳಿಸಿದೆ. ಇದು ಈವರೆಗೆ ಕೈಗೊಳ್ಳಲಾದ ಅತಿ ದೊಡ್ಡ ಡಿಎಲ್ ಸಿ ಅಭಿಯಾನವಾಗಿದೆ.

ದೇಶದ ಅತ್ಯಂತ ದೂರದ ಮೂಲೆ ಮೂಲೆಗಳಲ್ಲಿರುವ ಪಿಂಚಣಿದಾರರನ್ನು ತಲುಪುವ ಉದ್ದೇಶದಿಂದ ಪಿಂಚಣಿ ವಿತರಣಾ ಬ್ಯಾಂಕ್‌ಗಳು, ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್, ಪಿಂಚಣಿದಾರರ ಕಲ್ಯಾಣ ಸಂಘಗಳು, ಸಿಜಿಡಿಎ, ಡಿಒಟಿ, ರೈಲ್ವೆ ಇಲಾಖೆ, ಇಪಿಎಫ್‌ಒ, ರಾಜ್ಯ ಸರ್ಕಾರಗಳು, ಯುಐಡಿಎಐ ಮತ್ತು ಎಂಇಐಟಿವೈ ಜೊತೆ ಸಮನ್ವಯದ ಮೂಲಕ ಸಂಪೂರ್ಣ ಸರ್ಕಾರಿ ವಿಧಾನವನ್ನು ಅಳವಡಿಸಿಕೊಳ್ಳಲಾಗುವುದು.

ಮುಖ ದೃಢೀಕರಣ ತಂತ್ರಜ್ಞಾನವನ್ನು ಉತ್ತೇಜಿಸುವತ್ತ ಪ್ರಮುಖ ಗಮನ ಹರಿಸಲಾಗಿದೆ. ಈ ಅಭಿಯಾನದ ಸಮಯದಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಮತ್ತು ಯುಐಡಿಎಐ ತಾಂತ್ರಿಕ ನೆರವನ್ನು ಒದಗಿಸುತ್ತವೆ. ಡಿಜಿಟಲ್ ಲೈಫ್ ಸರ್ಟಿಫಿಕೇಟ್‌ಗಾಗಿ ಮುಖ ದೃಢೀಕರಣವು ಡಿಎಲ್‌ಸಿ ಸಿದ್ಧಪಡಿಸಲು ತಡೆರಹಿತ ಮತ್ತು ವೇಗದ ವಿಧಾನವಾಗಿದ್ದು, ಇದನ್ನು ಆಂಡ್ರಾಯ್ಡ್ ಮತ್ತು ಐಒಎಸ್‌ನಲ್ಲಿ ಬಳಸಬಹುದು, ಇದು ವಯಸ್ಸಾದ ಪಿಂಚಣಿದಾರರಿಗೆ ಸುಲಭ ಮತ್ತು ಅನುಕೂಲಕರವಾಗಿದೆ.

ದೂರದರ್ಶನ, ಆಕಾಶವಾಣಿ ಮತ್ತು ಭಾರತೀಯ ವಾರ್ತಾ ಶಾಖೆ (ಪಿಐಬಿ)ತಂಡಗಳು ಆಡಿಯೋ, ದೃಶ್ಯ ಮತ್ತು ಮುದ್ರಣ ಪ್ರಚಾರಕ್ಕಾಗಿ ಈ ಅಭಿಯಾನಕ್ಕೆ ಸಂಪೂರ್ಣ ಬೆಂಬಲ ನೀಡಲು ಸಕ್ರಿಯವಾಗಿ ಸಜ್ಜಾಗಿವೆ. ಅದಕ್ಕೆ ಪೂರಕವಾಗಿ ಅಭಿಯಾನದ ಬಗ್ಗೆ ಜಾಗೃತಿ ಮೂಡಿಸಲು ಎಸ್‌ಎಂಎಸ್‌ಗಳು, ಟ್ವೀಟ್‌ಗಳು (#DLCcampaign5), ಜಿಂಗಲ್ಸ್ ಮತ್ತು ಕಿರುಚಿತ್ರಗಳ ಮೂಲಕ ಪ್ರಚಾರದ ಪ್ರಯತ್ನಗಳು ಮತ್ತಷ್ಟು ತೀವ್ರಗೊಳಿಸಲಾಗಿದೆ.

ಈ ಅಭಿಯಾನವು 'ಉತ್ಸವ' ಮಾದರಿಯಲ್ಲಿ ನಡೆಯಲಿದ್ದು, ಪಿಂಚಣಿದಾರರಿಗೆ ಆರೋಗ್ಯ ತಪಾಸಣೆ, ಆಧಾರ್ ನವೀಕರಣದಂತಹ ಸೇವೆಗಳನ್ನೂ ಸಹ ನೀಡಲಾಗುತ್ತದೆ. ಅಗತ್ಯವಿರುವಲ್ಲಿ ಪಿಂಚಣಿದಾರರಿಗೆ ಮನೆ ಬಾಗಿಲಿಗೆ ಸೇವೆಗಳನ್ನು ಒದಗಿಸಲಾಗುವುದು. ಡಿಎಲ್ ಸಿಗಳಿಗೆ ಸಂಬಂಧಿಸಿದ ಕುಂದುಕೊರತೆಗಳನ್ನು ಅಧಿಕಾರಿಗಳು ತಕ್ಷಣದ ಪರಿಹಾರ ವಿಧಾನದೊಂದಿಗೆ ನಿರ್ವಹಿಸುತ್ತಾರೆ.

ಈ ಅಭಿಯಾನವನ್ನು ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆಯ ಹಿರಿಯ ಅಧಿಕಾರಿಗಳು ಮೇಲ್ವಿಚಾರಣೆ ಮಾಡುತ್ತಾರೆ, ಅವರು ಗುರುತಿಸಿರುವ ಕೆಲವು ನಿರ್ದಿಷ್ಟ ರಾಜ್ಯಗಳಲ್ಲಿ ತಳಮಟ್ಟದ ಪರಿಶೀಲನಾ ಕಾರ್ಯಗಳನ್ನು ನಡೆಸುತ್ತಾರೆ. ಪಿಂಚಣಿದಾರರು ಹೆಚ್ಚಿನ ಸಂಖ್ಯೆಯಲ್ಲಿರುವ  ಪ್ರದೇಶಗಳಲ್ಲಿ ಪಾಲುದಾರರು ಬೃಹತ್ ಶಿಬಿರಗಳನ್ನು ನಡೆಸುತ್ತಾರೆ ಮತ್ತು ಈ ಬೃಹತ್ ಶಿಬಿರಗಳಲ್ಲಿ DPPW ನ ಹಿರಿಯ ಅಧಿಕಾರಿಗಳು ಭಾಗವಹಿಸುತ್ತಾರೆ.

 

*****


(ಪ್ರಕಟಣೆ ಐ.ಡಿ.: 2330397) ವಿಸಿಟರ್ ಕೌಂಟರ್ : 13
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Bengali , Bengali-TR , Telugu