ಪ್ರಕಟಣಾ ದಿನಾಂಕ:
23 OCT 2026 8:12AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಇಂದು ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿದ್ದು, ಅದರಲ್ಲಿ ವ್ಯಕ್ತಿಗಳನ್ನು ಭಯ ಮತ್ತು ಅಧೀನತೆಯಿಂದ ಮುಕ್ತಗೊಳಿಸುವುದರಲ್ಲಿ ನಿಜವಾದ ಸ್ವಾತಂತ್ರ್ಯ ಅಡಗಿದೆ, ಅವರು ಆತ್ಮವಿಶ್ವಾಸ ಮತ್ತು ಘನತೆಯಿಂದ ಬದುಕಲು ಅನುವು ಮಾಡಿಕೊಡುತ್ತದೆ ಎಂಬುದನ್ನು ಪ್ರಮುಖವಾಗಿ ಪ್ರಸ್ತಾಪಿಸಲಾಗಿದೆ.
ಪ್ರಧಾನಮಂತ್ರಿ ಅವರು ತಮ್ಮ X ಪೋಸ್ಟ್ ನಲ್ಲಿ ಹೀಗೆ ಬರೆದಿದ್ದಾರೆ;
"यावदस्यास्वतन्त्रत्वं तावदीश्वरतो भयम्।
य एतत्समुपासीरंस्ते मुह्यन्ति शुचार्पिताः॥"
ಒಬ್ಬ ವ್ಯಕ್ತಿಯು ತನ್ನನ್ನು ತಾನು ಸ್ವತಂತ್ರನೆಂದು ಭಾವಿಸದ ಹೊರತು, ಅವನು ತನ್ನದೇ ಆದ ಶಕ್ತಿಗಿಂತ ಮಿಗಿಲಾದ ಯಾವುದೋ ಒಂದು ಶಕ್ತಿಯ ಭಯದಲ್ಲಿ ಬದುಕುತ್ತಾನೆ. ಈ ನಂಬಿಕೆಯನ್ನು ಅಪ್ಪಿಕೊಳ್ಳುವವರು ಭಯ, ದುಃಖ ಮತ್ತು ಭ್ರಮೆಯ ಸೆರೆಯಲ್ಲಿ ಸಿಲುಕಿಕೊಂಡಿರುತ್ತಾರೆ. ಸ್ವಾತಂತ್ರ್ಯದ ನಿಜವಾದ ಮೌಲ್ಯವಿರುವುದು ವ್ಯಕ್ತಿಗಳನ್ನು ಭಯ ಮತ್ತು ಅಧೀನತೆಯಿಂದ ಮುಕ್ತಗೊಳಿಸುವುದರಲ್ಲಿ ಹಾಗೂ ಅವರು ಆತ್ಮವಿಶ್ವಾಸ ಮತ್ತು ಘನತೆಯಿಂದ ಬದುಕುವಂತೆ ಮಾಡುವುದರಲ್ಲಿಯೇ ಆಗಿದೆ.
*****