ಪ್ರಕಟಣಾ ದಿನಾಂಕ:
22 OCT 2026 6:04PM by PIB Bengaluru
ಏಷ್ಯನ್ ಪ್ಯಾರಾ ಗೇಮ್ಸ್ 2026ರ ಮಿಶ್ರ ಡಬಲ್ಸ್ ಎಸ್‌ಎಚ್ 6 ಪ್ಯಾರಾ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ನಿತ್ಯಾಶ್ರೀ ಸುಮತಿ ಶಿವನ್ ಮತ್ತು ಕೃಷ್ಣ ನಗರ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದರು.
ಅವರ ಸಮರ್ಪಣೆಯು ಭಾರತೀಯ ಪ್ಯಾರಾ ಬ್ಯಾಡ್ಮಿಂಟನ್‌ಗೆ ಮತ್ತೊಂದು ಹೆಮ್ಮೆಯ ಕ್ಷಣವನ್ನು ತಂದಿದೆ ಎಂದು ಹೇಳಿದ ಶ್ರೀ ನರೇಂದ್ರ ಮೋದಿ, ಮುಂದಿನ ಸ್ಪರ್ಧೆಗಳಲ್ಲಿ ಅವರಿಗೆ ಯಶಸ್ಸು ಸಿಗಲಿ ಎಂದು ಹಾರೈಸಿದರು.
ಎಕ್ಸ್ ಖಾತೆಯಲ್ಲಿ ಪ್ರಧಾನಮಂತ್ರಿ ಕಾರ್ಯಾಲಯ ಈ ರೀತಿ ಹಂಚಿಕೊಂಡಿದೆ:
‘‘ಏಷ್ಯನ್ ಪ್ಯಾರಾ ಗೇಮ್ಸ್ 2026ರ ಮಿಶ್ರ ಡಬಲ್ಸ್ ಎಸ್‌ಎಚ್ 6 ಪ್ಯಾರಾ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ನಿತ್ಯಾಶ್ರೀ ಸುಮತಿ ಶಿವನ್ ಮತ್ತು ಕೃಷ್ಣ ನಾಗರ್ ಅವರಿಗೆ ಅಭಿನಂದನೆಗಳು! ಅವರ ಸಮರ್ಪಣೆಯು ಭಾರತೀಯ ಪ್ಯಾರಾ ಬ್ಯಾಡ್ಮಿಂಟನ್‌ಗೆ ಮತ್ತೊಂದು ಹೆಮ್ಮೆಯ ಕ್ಷಣವನ್ನು ತಂದಿದೆ. ಮುಂದಿನ ಸ್ಪರ್ಧೆಗಳಲ್ಲಿಅವರಿಗೆ ನಿರಂತರ ಯಶಸ್ಸನ್ನು ಹಾರೈಸುತ್ತೇನೆ: ಪ್ರಧಾನಮಂತ್ರಿ @narendramodi’’
*****