ಪ್ರಕಟಣಾ ದಿನಾಂಕ:
21 OCT 2026 10:20PM by PIB Bengaluru
ಏಷ್ಯನ್ ಪ್ಯಾರಾ ಗೇಮ್ಸ್ 2026 ರ ಪುರುಷರ ಲಾಂಗ್ ಜಂಪ್ ಟಿ 42 / ಟಿ 61 / ಟಿ 63 ಸ್ಪರ್ಧೆಯಲ್ಲಿ 5.57 ಮೀಟರ್ ಅತ್ಯುತ್ತಮ ಜಿಗಿತದೊಂದಿಗೆ ಕಂಚಿನ ಪದಕ ಗೆದ್ದ ಶೈಲೇಶ್ ಕುಮಾರ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದರು.
ಅವರ ದೃಢನಿಶ್ಚಯ, ಸಮರ್ಪಣೆ ಮತ್ತು ಕ್ರೀಡಾ ಶ್ರೇಷ್ಠತೆಗೆ ಅವರ ಬದ್ಧತೆ ನಿಜವಾಗಿಯೂ ಶ್ಲಾಘನೀಯ ಎಂದು ಶ್ರೀ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ಎಕ್ಸ್ ಖಾತೆಯಲ್ಲಿ ಪ್ರಧಾನಮಂತ್ರಿ ಕಾರ್ಯಾಲಯ ಈ ರೀತಿ ಹಂಚಿಕೊಂಡಿದೆ:
"ಶೈಲೇಶ್ ಕುಮಾರ್ ಅವರಿಗೆ ವಿಶೇಷ ಕಂಚು!
ಏಷ್ಯನ್ ಪ್ಯಾರಾ ಗೇಮ್ಸ್ 2026 ರ ಪುರುಷರ ಲಾಂಗ್ ಜಂಪ್ ಟಿ 42 /ಟಿ 61 / ಟಿ 63 ಸ್ಪರ್ಧೆಯಲ್ಲಿ 5.57 ಮೀಟರ್ ಎತ್ತರದ ಜಿಗಿತದೊಂದಿಗೆ ಕಂಚಿನ ಪದಕ ಗೆದ್ದ ಶೈಲೇಶ್ ಅವರಿಗೆ ಅಭಿನಂದನೆಗಳು. ಅವರ ದೃಢನಿಶ್ಚಯ, ಸಮರ್ಪಣೆ ಮತ್ತು ಕ್ರೀಡಾ ಶ್ರೇಷ್ಠತೆಗೆ ಅವರ ಬದ್ಧತೆ ನಿಜವಾಗಿಯೂ ಶ್ಲಾಘನೀಯ: ಪ್ರಧಾನಮಂತ್ರಿ @narendramodi"
*****