ಪ್ರಕಟಣಾ ದಿನಾಂಕ:
21 OCT 2026 6:48PM by PIB Bengaluru
ಏಷ್ಯನ್ ಪ್ಯಾರಾ ಗೇಮ್ಸ್ 2026ರ ಪುರುಷರ ಶಾಟ್ ಪುಟ್ ಎಫ್ 46 ವಿಭಾಗದಲ್ಲಿ, ಋತುವಿನ ಅತ್ಯುತ್ತಮ ಎಸೆತದೊಂದಿಗೆ ಕಂಚಿನ ಪದಕ ಗೆದ್ದಿರುವ ಪರ್ವೀನ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ ಹಾಗೂ ಈ ಸಾಧನೆಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.
ಪರ್ವೀನ್ ಅವರ ಸಮರ್ಪಣಾ ಭಾವ ಮತ್ತು ಒಲವು ಗಮನಾರ್ಹ ಎಂದು ಹೇಳುತ್ತಾ ಶ್ರೀ ಮೋದಿ ಅವರು, ಈ ಯಶಸ್ಸು ಅವರಿಗೆ ಭವಿಷ್ಯದಲ್ಲಿ ಇನ್ನೂ ದೊಡ್ಡ ಮೈಲಿಗಲ್ಲುಗಳನ್ನು ಸಾಧಿಸಲು ಪ್ರೇರಣೆಯಾಗಲಿ ಎಂದು ಆಶಿಸಿದ್ದಾರೆ.
ಪ್ರಧಾನಮಂತ್ರಿಯವರ ಕಾರ್ಯಾಲಯ ಎಕ್ಸ್ ಪೋಸ್ಟ್ ನಲ್ಲಿ ಹೀಗೆ ಹಂಚಿಕೊಂಡಿದೆ:
"ಏಷ್ಯನ್ ಪ್ಯಾರಾ ಗೇಮ್ಸ್ 2026ರಲ್ಲಿ, ಪುರುಷರ ಶಾಟ್ ಪುಟ್ ಎಫ್ 46 ವಿಭಾಗದಲ್ಲಿ ಪರ್ವೀನ್ ಅವರು ಈ ಋತುವಿನ ತಮ್ಮ ಅತ್ಯುತ್ತಮ ಎಸೆತದೊಂದಿಗೆ ಕಂಚಿನ ಪದಕ ಜಯಿಸಿ ನಮಗೆ ಹೆಮ್ಮೆ ತಂದಿದ್ದಾರೆ. ಅವರ ಬದ್ಧತೆ ಮತ್ತು ಉತ್ಸಾಹ ಶ್ಲಾಘನೀಯ. ಈ ಯಶಸ್ಸು ಅವರಿಗೆ ಭವಿಷ್ಯದಲ್ಲಿ ಇನ್ನೂ ಮಹತ್ವದ ಮೈಲಿಗಲ್ಲುಗಳನ್ನು ಸಾಧಿಸಲು ಸ್ಫೂರ್ತಿಯಾಗಲಿ: ಪ್ರಧಾನಮಂತ್ರಿ @narendramodi"
*****