ಪ್ರಧಾನ ಮಂತ್ರಿಯವರ ಕಛೇರಿ
ರೈತರ ಆದಾಯ ವರ್ಧಿಸಲು ಮತ್ತು ಗ್ರಾಮೀಣ ಸಮೃದ್ಧಿಯನ್ನು ಮುನ್ನಡೆಸಲು ಕೃಷಿ ಸೌರಶಕ್ತಿ ಸಾಮರ್ಥ್ಯವನ್ನು ವಿವರಿಸಿರುವ ಕೇಂದ್ರ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಮತ್ತು ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರ ಲೇಖನ ಹಂಚಿಕೊಂಡಿರುವ ಪ್ರಧಾನಮಂತ್ರಿ
ಪ್ರಕಟಣಾ ದಿನಾಂಕ:
21 OCT 2026 11:52AM by PIB Bengaluru
ಕೇಂದ್ರ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಮತ್ತು ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಬರೆದಿರುವ ಲೇಖನವೊಂದನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹಂಚಿಕೊಂಡಿದ್ದಾರೆ.
ಕೇಂದ್ರ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಮತ್ತು ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಈ ಲೇಖನದಲ್ಲಿ, ಕೃಷಿಯೊಂದಿಗೆ ಸೌರಶಕ್ತಿ ಉತ್ಪಾದನೆಯನ್ನು ಸಂಯೋಜಿಸುವ 'ಅಗ್ರಿವೋಲ್ಟಾಯಿಕ್ಸ್' ವ್ಯವಸ್ಥೆಯು ರೈತರ ಆದಾಯವನ್ನು ವರ್ಧಿಸಬಲ್ಲ ಸಾಮರ್ಥ್ಯದ ಬಗ್ಗೆ ಬರೆದಿದ್ದಾರೆ. ಅಗ್ರಿವೋಲ್ಟಾಯಿಕ್ಸ್ ಹೇಗೆ ಹೆಚ್ಚುವರಿ ಆದಾಯ ಒದಗಿಸಬಲ್ಲದು, ಇಂಧನ ವೆಚ್ಚವನ್ನು ತಗ್ಗಿಸಬಲ್ಲದು ಮತ್ತು ಬೆಳೆ ಉತ್ಪಾದಕತೆಯನ್ನು ಹೆಚ್ಚಿಸಲು ನೆರವಾಗಬಲ್ಲದು ಎಂಬುದನ್ನು ಲೇಖನ ವಿವರಿಸಿದೆ. ಅಲ್ಲದೇ, ಕೃಷಿ ಪ್ರದೇಶಗಳಿಗೆ ಇಂಧನ ಒದಗಿಸುವ ಮತ್ತು ಗ್ರಾಮೀಣ ಸಮೃದ್ಧಿಯನ್ನು ಮುನ್ನಡೆಸುವ ಕುರಿತಂತೆ ಒಂದು ಅರ್ಥಪೂರ್ಣ ಒಳನೋಟ ನೀಡಿದೆ.
ಪ್ರಧಾನಮಂತ್ರಿಗಳ ಕಾರ್ಯಾಲಯ ಎಕ್ಸ್ ನಲ್ಲಿ ಹೀಗೆ ಪೋಸ್ಟ್ ಮಾಡಿದೆ:
ಕೇಂದ್ರ ಸಚಿವರಾದ ಶ್ರೀ @JoshiPralhad ಮತ್ತು ಶ್ರೀ @ChouhanShivraj ಅವರು ಕೃಷಿಯೊಂದಿಗೆ ಸೌರಶಕ್ತಿ ಉತ್ಪಾದನೆಯನ್ನು ಸಂಯೋಜಿಸುವ 'ಅಗ್ರಿವೋಲ್ಟಾಯಿಕ್ಸ್' ವ್ಯವಸ್ಥೆಯು ರೈತರ ಆದಾಯವನ್ನು ಹೇಗೆ ಹೆಚ್ಚಿಸಬಲ್ಲದು ಎಂಬುದರ ಬಗ್ಗೆ ಬರೆದಿದ್ದಾರೆ. ಇದು ಹೇಗೆ ಹೆಚ್ಚುವರಿ ಆದಾಯ ಒದಗಿಸಬಲ್ಲದು, ಇಂಧನ ವೆಚ್ಚ ತಗ್ಗಿಸಬಲ್ಲದು ಮತ್ತು ಬೆಳೆ ಉತ್ಪಾದಕತೆ ಹೆಚ್ಚಿಸಲು ಹೇಗೆ ಪೂರಕವಾಗಬಲ್ಲದು ಎಂಬುದನ್ನು ಅವರು ವಿವರಿಸಿದ್ದಾರೆ.
ಕೃಷಿ ಕ್ಷೇತ್ರಗಳಿಗೆ ಇಂಧನ ಒದಗಿಸುವಿಕೆ ಮತ್ತು ಗ್ರಾಮೀಣ ಸಮೃದ್ಧಿ ಉತ್ತೇಜನ ಕುರಿತಾದ ಆಳವಾದ ಮಾಹಿತಿಯುಳ್ಳ ಲೇಖನವಿದು.
https://indianexpress.com/article/opinion/columns/india-solar-farming-viksit-bharat-agrivoltaics-10929961/lite/
*****
(ಪ್ರಕಟಣೆ ಐ.ಡಿ.: 2325927)
ವಿಸಿಟರ್ ಕೌಂಟರ್ : 5
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
Marathi
,
हिन्दी
,
Bengali
,
Bengali-TR
,
Assamese
,
Gujarati
,
Tamil
,
Telugu
,
Malayalam