ಪ್ರಧಾನ ಮಂತ್ರಿಯವರ ಕಛೇರಿ
ಏಷ್ಯನ್ ಪ್ಯಾರಾ ಕ್ರೀಡಾಕೂಟದಲ್ಲಿ ಸ್ವರ್ಣ ಗೆದ್ದಿರುವ ದೇವೇಂದರ್ ಕುಮಾರ್ ಅವರಿಗೆ ಪ್ರಧಾನಮಂತ್ರಿ ಅಭಿನಂದನೆ
ಪ್ರಕಟಣಾ ದಿನಾಂಕ:
20 OCT 2026 9:36PM by PIB Bengaluru
ಏಷ್ಯನ್ ಪ್ಯಾರಾ ಗೇಮ್ಸ್ 2026ರ ಪುರುಷರ ಡಿಸ್ಕಸ್ ಥ್ರೋ ಎಫ್ 43/ ಎಫ್ 44/ ಎಫ್ 62/ ಎಫ್ 64 ವಿಭಾಗದಲ್ಲಿ ಅತ್ಯುತ್ತಮ ಎಸೆತದೊಂದಿಗೆ ಚಿನ್ನದ ಪದಕ ಜಯಿಸಿರುವ ದೇವೇಂದರ್ ಕುಮಾರ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.
ಈ ಗೆಲುವು ಅಪಾರ ಹರ್ಷದ ಕ್ಷಣವಾಗಿದ್ದು, ಪ್ಯಾರಾ-ಕ್ರೀಡೆಗಳಲ್ಲಿ ಭಾರತದ ವರ್ಧಿಸುತ್ತಿರುವ ಶ್ರೇಷ್ಠತೆಯ ಸಂಭ್ರಮಾಚರಣೆಯಾಗಿದೆ ಎಂದು ಉದ್ಗರಿಸುತ್ತಾ ಶ್ರೀ ಮೋದಿ ಅವರು ದೇವೇಂದರ್ ಕುಮಾರ್ ಅವರನ್ನು ಅಭಿನಂದಿಸಿದ್ದಾರೆ ಮತ್ತು ಭವಿಷ್ಯದಲ್ಲಿ ಉತ್ತಮಕ್ಕಾಗಿ ಶುಭ ಹಾರೈಸಿದ್ದಾರೆ.
ಪ್ರಧಾನಮಂತ್ರಿಗಳ ಕಾರ್ಯಾಲಯ ಎಕ್ಸ್ ನಲ್ಲಿ ಹೀಗೆ ಪೋಸ್ಟ್ ಮಾಡಿದೆ:
"ಏಷ್ಯನ್ ಪ್ಯಾರಾ ಗೇಮ್ಸ್ 2026ರ ಪುರುಷರ ಡಿಸ್ಕಸ್ ಥ್ರೋ (ಎಫ್43/ಎಫ್44/ಎಫ್62/ಎಫ್64) ವಿಭಾಗದಲ್ಲಿ ದೇವೇಂದರ್ ಕುಮಾರ್ ಅವರು ಅತ್ಯುತ್ತಮ ಎಸೆತದೊಂದಿಗೆ ವಿಜೇತರಾಗಿದ್ದಾರೆ! ಇದು ಅತ್ಯಂತ ಸಂತೋಷದ ಕ್ಷಣವಾಗಿದ್ದು, ಪ್ಯಾರಾ-ಕ್ರೀಡೆಗಳಲ್ಲಿ ಭಾರತದ ನಿರಂತರ ಉತ್ಕೃಷ್ಟತೆಯನ್ನು ಸಂಭ್ರಮಿಸುವ ಅವಕಾಶವಾಗಿದೆ. ಚಿನ್ನದ ಪದಕ ಜಯಿಸಿರುವ ದೇವೇಂದರ್ ಅವರಿಗೆ ಅಭಿನಂದನೆಗಳು. ಮುಂದಿನ ದಿನಗಳಲ್ಲಿ ಅವರಿಗೆ ಇನ್ನಷ್ಟು ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ: ಪ್ರಧಾನಮಂತ್ರಿ @narendramodi"
*****
(ಪ್ರಕಟಣೆ ಐ.ಡಿ.: 2325837)
ವಿಸಿಟರ್ ಕೌಂಟರ್ : 5