ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಏಷ್ಯನ್ ಪ್ಯಾರಾ ಕ್ರೀಡಾಕೂಟದಲ್ಲಿ ಕಂಚು ಪದಕ ಗೆದ್ದ ಹಿಮಾಂಶು ನಂದಲ್ ಅವರನ್ನು ಅಭಿನಂದಿಸಿದ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 20 OCT 2026 7:49PM by PIB Bengaluru

ಏಷ್ಯನ್ ಪ್ಯಾರಾ ಕ್ರೀಡಾಕೂಟ 2026 ರಲ್ಲಿ, ಪುರುಷರ 400 ಮೀಟರ್ ಫ್ರೀಸ್ಟೈಲ್ ಎಸ್ 11 ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಹಿಮಾಂಶು ನಂದಲ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಭಿನಂದಿಸಿದ್ದಾರೆ.

ಹಿಮಾಂಶು ನಂದಲ್ ಅವರ ಅದ್ಭುತ ಈಜುವಿಕೆಯನ್ನು ಶ್ಲಾಘಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಅವರ ಕ್ರೀಡಾ ಪ್ರದರ್ಶನವು ಅವರ ಪ್ರಯತ್ನ, ಸಹಿಷ್ಣುತೆ ಮತ್ತು ಶಿಸ್ತನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು ಹಾಗೂ ಅವರ ಮುಂಬರುವ ಕ್ರೀಡಾ ಪ್ರಯಾಣಕ್ಕೆ ಶುಭ ಹಾರೈಸಿದರು.

ಪ್ರಧಾನಮಂತ್ರಿಯವರ ಕಾರ್ಯಾಲಯವು ಎಕ್ಸ್ ತಾಣದಲ್ಲಿ ಈ ರೀತಿ ಸಂದೇಶ ಹಂಚಿಕೊಂಡಿದೆ:

"ಹಿಮಾನ್ಶು ನಂದಲ್ ಅವರಿಂದ ಅದ್ಭುತ ಈಜು!

ಏಷ್ಯನ್ ಪ್ಯಾರಾ ಕ್ರೀಡಾಕೂಟ 2026 ರಲ್ಲಿ ಪುರುಷರ 400 ಮೀಟರ್ ಫ್ರೀಸ್ಟೈಲ್ ಎಸ್ 11 ಸ್ಪರ್ಧೆಯಲ್ಲಿ ಅವರು ಕಂಚು ಪದಕ ಗೆದ್ದಿದ್ದಾರೆ. ಅವರ ಪ್ರದರ್ಶನವು ಅವರ ಪ್ರಯತ್ನ, ಸಹಿಷ್ಣುತೆ ಮತ್ತು ಶಿಸ್ತನ್ನು ಪ್ರತಿಬಿಂಬಿಸುತ್ತದೆ. ಅವರಿಗೆ ಅಭಿನಂದನೆಗಳು.

ಅವರ ಮುಂಬರುವ ಕ್ರೀಡಾ ಪ್ರಯಾಣಕ್ಕೆ ಶುಭ ಹಾರೈಸುತ್ತೇನೆ: ಪ್ರಧಾನಮಂತ್ರಿ @narendramodi"

 

*****


(ಪ್ರಕಟಣೆ ಐ.ಡಿ.: 2325694) ವಿಸಿಟರ್ ಕೌಂಟರ್ : 3
ಪ್ರಕಟಣೆಯನ್ನು ಇದರಲ್ಲಿ ಓದಿ: Urdu , English , Marathi , हिन्दी , Assamese , Bengali , Manipuri , Punjabi , Gujarati , Telugu , Malayalam