ಪ್ರಧಾನ ಮಂತ್ರಿಯವರ ಕಛೇರಿ
ಭಾರತದ ನೀಲಿ ಆರ್ಥಿಕತೆಯ ಕುರಿತಾದ ಲೇಖನವನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ
ಪ್ರಕಟಣಾ ದಿನಾಂಕ:
08 OCT 2026 6:49PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಕೇಂದ್ರ ರಾಜ್ಯ ಸಚಿವರಾದ ಶ್ರೀ ಜಿತೇಂದ್ರ ಸಿಂಗ್ ಅವರು ಬರೆದ ಲೇಖನವನ್ನು ಹಂಚಿಕೊಂಡಿದ್ದಾರೆ.
ಈ ಲೇಖನವು ಭಾರತದ ನೀಲಿ ಆರ್ಥಿಕತೆಯನ್ನು ಸಮೃದ್ಧಿ, ಸುಸ್ಥಿರತೆ ಮತ್ತು ರಾಷ್ಟ್ರೀಯ ಶಕ್ತಿಯ ಮಾರ್ಗವಾಗಿ ಎತ್ತಿ ತೋರಿಸುತ್ತದೆ. ಈ ಲೇಖನವು ಸಪ್ತ-ಧಾರ ದೃಷ್ಟಿಯ ಭಾಗವಾಗಿ, ಇದು ಜೀವನೋಪಾಯ, ಆಹಾರ ಮತ್ತು ಇಂಧನ ಭದ್ರತೆಯನ್ನು ಬಲಪಡಿಸಲು ಮತ್ತು ಯುವಕರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಲು ವಿಜ್ಞಾನ, ತಂತ್ರಜ್ಞಾನ ಮತ್ತು ಉದ್ಯಮವನ್ನು ಪ್ರಬಲಗೊಳಿಸುತ್ತದೆ ಎಂದು ತಿಳಿಸುತ್ತದೆ.
ಪ್ರಧಾನ ಮಂತ್ರಿಯವರ ಕಾರ್ಯಾಲಯವು X ನಲ್ಲಿ;
“ಭಾರತದ ನೀಲಿ ಆರ್ಥಿಕತೆಯು ಸಮೃದ್ಧಿ, ಸುಸ್ಥಿರತೆ ಮತ್ತು ರಾಷ್ಟ್ರೀಯ ಶಕ್ತಿಗೆ ಪ್ರಬಲ ಮಾರ್ಗವಾಗಿ ಹೊರಹೊಮ್ಮುತ್ತಿದೆ ಎಂದು ಕೇಂದ್ರ ಸಚಿವರಾದ @DrJitendraSingh ಅವರು ಬರೆದಿದ್ದಾರೆ.
ಸಪ್ತ-ಧಾರ ದೃಷ್ಟಿಯ ಭಾಗವಾಗಿ, ಇದು ಜೀವನೋಪಾಯ, ಆಹಾರ ಮತ್ತು ಇಂಧನ ಭದ್ರತೆಯನ್ನು ಬಲಪಡಿಸಲು ಮತ್ತು ಯುವಕರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಲು ವಿಜ್ಞಾನ, ತಂತ್ರಜ್ಞಾನ ಮತ್ತು ಉದ್ಯಮವನ್ನು ಒಟ್ಟುಗೂಡಿಸುತ್ತದೆ.”
*****
(ಪ್ರಕಟಣೆ ಐ.ಡಿ.: 2321086)
ವಿಸಿಟರ್ ಕೌಂಟರ್ : 6