ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಸರ್ಕಾರದ ಮುಖ್ಯಸ್ಥರಾಗಿ ರಾಷ್ಟ್ರಕ್ಕೆ 25 ವರ್ಷಗಳ ಸೇವೆ ಪೂರೈಸಿದ ಸಂದರ್ಭದಲ್ಲಿ ಶುಭಾಶಯ ಕೋರಿದ ಗ್ರೇನೆಡಾದ ಪ್ರಧಾನಮಂತ್ರಿ ಅವರಿಗೆ ಕೃತಜ್ಞತೆ ಸಲ್ಲಿಸಿದ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 08 OCT 2026 7:21PM by PIB Bengaluru

ಸರ್ಕಾರದ ಮುಖ್ಯಸ್ಥರಾಗಿ ರಾಷ್ಟ್ರಕ್ಕೆ 25 ವರ್ಷಗಳ ಸೇವೆ ಪೂರೈಸಿದ ಸಂದರ್ಭದಲ್ಲಿ ಆತ್ಮೀಯ ಶುಭಾಶಯಗಳನ್ನು ಕೋರಿದ ಗ್ರೆನೇಡಾದ ಪ್ರಧಾನಮಂತ್ರಿ ಶ್ರೀ ಡಿಕಾನ್ ಮಿಚೆಲ್ ಅವರಿಗೆ ಭಾರತದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

ಭಾರತ ಮತ್ತು ಗ್ರೆನೇಡಾ ನಡುವಿನ ಸ್ನೇಹವನ್ನು ಅತ್ಯಂತ ಗೌರವಿಸುವುದಾಗಿ ಹಾಗೂ ಉಭಯ ದೇಶಗಳ ನಡುವಿನ ನಿಕಟ ಬಾಂಧವ್ಯವನ್ನು ಇನ್ನಷ್ಟು ಬಲಪಡಿಸಲು ಎದುರು ನೋಡುತ್ತಿರುವುದಾಗಿ ಪ್ರಧಾನ ಮಂತ್ರಿ ತಿಳಿಸಿದ್ದಾರೆ.

ಶ್ರೀ ಮೋದಿ ಅವರು 'ಎಕ್ಸ್' ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ.

"ಪ್ರಧಾನಮಂತ್ರಿ ಡಿಕಾನ್ ಮಿಚೆಲ್ ಅವರೇ, ನಿಮ್ಮ ಆತ್ಮೀಯ ಶುಭಾಶಯಗಳಿಗೆ ಧನ್ಯವಾದಗಳು. ಭಾರತ ಮತ್ತು ಗ್ರೆನೇಡಾ ನಡುವಿನ ಸ್ನೇಹವನ್ನು ನಾನು ಅತ್ಯಂತ ಗೌರವಿಸುತ್ತೇನೆ ಮತ್ತು ನಮ್ಮ ನಿಕಟ ಬಾಂಧವ್ಯವನ್ನು ಇನ್ನಷ್ಟು ಬಲಪಡಿಸಲು ಎದುರು ನೋಡುತ್ತಿದ್ದೇನೆ.

@hondickon”

 

*****


(ಪ್ರಕಟಣೆ ಐ.ಡಿ.: 2321072) ವಿಸಿಟರ್ ಕೌಂಟರ್ : 6
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Assamese , Gujarati , Tamil , Telugu