ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಭಾರತದ ಜಲ ನಿರ್ವಹಣೆ ಮಾದರಿಯು ವಿಶಾಲ ಜಾಗತಿಕ ದಕ್ಷಿಣ ದೇಶಗಳಿಗೆ ಹೇಗೆ ಉಪಯುಕ್ತ ಮಾಹಿತಿಗಳನ್ನು ನೀಡುತ್ತಿದೆ ಎಂಬುದರ ಕುರಿತಾದ ಲೇಖನವನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 06 OCT 2026 3:18PM by PIB Bengaluru

ಭಾರತದ ಜಲ ನಿರ್ವಹಣಾ ವ್ಯವಸ್ಥೆಗಳ ಮಾದರಿಯು ವಿಶಾಲ ಜಾಗತಿಕ ದಕ್ಷಿಣ ದೇಶಗಳಿಗೆ ಹೇಗೆ ಉಪಯುಕ್ತ ಮಾಹಿತಿಗಳನ್ನು ನೀಡುತ್ತಿದೆ ಎಂಬುದರ ಕುರಿತು ಬರೆದ ಲೇಖನವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಹಂಚಿಕೊಂಡಿದ್ದಾರೆ. ಜಲ ಭದ್ರತೆಯು ಮೂಲಸೌಕರ್ಯವನ್ನು ನಿರ್ಮಿಸುವುದರ ಬಗ್ಗೆ ಮಾತ್ರವಲ್ಲದೆ ಉತ್ತಮ ಯೋಜನೆ, ಬಲವಾದ ಸ್ಥಳೀಯ ವ್ಯವಸ್ಥೆಗಳು ಮತ್ತು ನೀರಿನ ನಿರ್ವಹಣೆಯಲ್ಲಿ ಸಮುದಾಯಗಳನ್ನು ಒಳಗೊಳ್ಳುವುದರ ಬಗ್ಗೆಯೂ ಆಗಿದೆ ಎಂದು ಶ್ರೀ ಮೋದಿ ಅವರು ತಮ್ಮ ಸಂದೇಶದಲ್ಲಿ ಹೇಳಿದರು.

"ಗುಜರಾತ್‌ ನಲ್ಲಿ ನೀರಿನ ಸುಧಾರಣೆಗಳಿಂದ ದೊಡ್ಡ ಪ್ರಮಾಣದ ರಾಷ್ಟ್ರೀಯ ಕಾರ್ಯಕ್ರಮಗಳವರೆಗಿನ ಭಾರತದ ಪ್ರಯಾಣವು ನೀರಿನ ನಿರ್ವಹಣೆಯನ್ನು ಸುಧಾರಿಸಲು ಮತ್ತು ಬೆಳೆಯುತ್ತಿರುವ ನೀರಿನ ಅಗತ್ಯಗಳನ್ನು ಪೂರೈಸಲು ಬಯಸುವ ದೇಶಗಳಿಗೆ ಪ್ರಾಯೋಗಿಕ ಉದಾಹರಣೆಯನ್ನು ನೀಡುತ್ತದೆ" ಎಂದು ಶ್ರೀ ಮೋದಿ ಅವರು ತಮ್ಮ ಟಿಪ್ಪಣಿಯಲ್ಲಿ ವಿವರಿಸಿದ್ದಾರೆ.

ಶ್ರೀ ಮೋದಿ ಅವರು ಎಕ್ಸ್ ತಾಣದಲ್ಲಿ ಈ ರೀತಿ ಸಂದೇಶ ಹಂಚಿಕೆ ಮಾಡಿದ್ದಾರೆ ;

ಭಾರತದಿಂದ, ಜಲ ನಿರ್ವಹಣಾ ಮಾದರಿಯು ವಿಶಾಲ ಜಾಗತಿಕ ದಕ್ಷಿಣಕ್ಕೆ ಉಪಯುಕ್ತ ಮಾಹಿತಿಗಳನ್ನು ನೀಡುತ್ತಿದೆ. ಜಲ ಭದ್ರತೆಯು ಮೂಲಸೌಕರ್ಯವನ್ನು ನಿರ್ಮಿಸುವುದರ ಬಗ್ಗೆ ಮಾತ್ರವಲ್ಲದೆ ಉತ್ತಮ ಯೋಜನೆ, ಬಲವಾದ ಸ್ಥಳೀಯ ವ್ಯವಸ್ಥೆಗಳು ಮತ್ತು ನೀರಿನ ನಿರ್ವಹಣೆಯಲ್ಲಿ ಸಮುದಾಯಗಳನ್ನು ಒಳಗೊಳ್ಳುವಿಕೆಯ ಬಗ್ಗೆಯೂ ಆಗಿದೆ.

ಗುಜರಾತ್‌ ನಲ್ಲಿ ನೀರಿನ ಸುಧಾರಣೆಗಳಿಂದ ಹಿಡಿದು ದೊಡ್ಡ ಪ್ರಮಾಣದ ರಾಷ್ಟ್ರೀಯ ಕಾರ್ಯಕ್ರಮಗಳವರೆಗಿನ ಭಾರತದ ಪ್ರಯಾಣವು ನೀರಿನ ನಿರ್ವಹಣೆಯನ್ನು ಸುಧಾರಿಸಲು ಮತ್ತು ಹೆಚ್ಚುತ್ತಿರುವ ನೀರಿನ ಅಗತ್ಯಗಳನ್ನು ಪೂರೈಸಲು ಬಯಸುವ ದೇಶಗಳಿಗೆ ಪ್ರಾಯೋಗಿಕ ಉದಾಹರಣೆಯನ್ನು ನೀಡುತ್ತದೆ.

https://indianexpress.com/article/opinion/columns/from-india-to-global-south-a-gujarat-water-governance-model-10908115/lite/

 

*****


(ಪ್ರಕಟಣೆ ಐ.ಡಿ.: 2319993) ವಿಸಿಟರ್ ಕೌಂಟರ್ : 5