ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಏಷ್ಯನ್ ಗೇಮ್ಸ್ ನಲ್ಲಿ ಚಿನ್ನ ಉಳಿಸಿಕೊಂಡ ಭಾರತೀಯ ಪುರುಷರ ಹಾಕಿ ತಂಡವನ್ನು ಅಭಿನಂದಿಸಿದ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 03 OCT 2026 7:32PM by PIB Bengaluru

ಏಷ್ಯನ್ ಗೇಮ್ಸ್ ನ ಫೈನಲ್ ನಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಚಿನ್ನವನ್ನು ಉಳಿಸಿಕೊಂಡ ಭಾರತೀಯ ಪುರುಷರ ಹಾಕಿ ತಂಡವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.

ತಂಡವು ಮೊದಲ ಬಾರಿಗೆ ಏಷ್ಯನ್ ಗೇಮ್ಸ್ ಚಿನ್ನವನ್ನು ಗೆದ್ದಿದೆ ಮತ್ತು ಒಟ್ಟಾರೆಯಾಗಿ ಐದನೇ ಚಿನ್ನವನ್ನು ಗೆದ್ದಿದೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು. ಜತೆಗೆ ಇದು ಆಟಗಾರರ ಅಸಾಧಾರಣ ಅಭಿಯಾನ ಎಂದು ಬಣ್ಣಿಸಿದರು.

ಇದೇ ಮೊದಲ ಬಾರಿಗೆ ಭಾರತದ ಪುರುಷರ ಮತ್ತು ಮಹಿಳಾ ಹಾಕಿ ತಂಡಗಳೆರಡೂ ಒಂದೇ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದಿರುವುದರಿಂದ ಈ ಗೆಲುವು ಇನ್ನಷ್ಟು ವಿಶೇಷವಾಗಿದೆ ಎಂದು ಪ್ರಧಾನಿ ಹೇಳಿದರು. ಏಷ್ಯನ್ ವೇದಿಕೆಯಲ್ಲಿ ಭಾರತೀಯ ಹಾಕಿ ಎತ್ತರಕ್ಕೆ ನಿಂತಿದೆ ಎಂದು ಅವರು ಹೇಳಿದರು.

ಪ್ರಧಾನ ಮಂತ್ರಿಗಳ ಕಾರ್ಯಾಲಯ ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿದೆ;

"2026 ರ ಏಷ್ಯನ್ ಗೇಮ್ಸ್ ಭಾರತೀಯ ಹಾಕಿಗೆ ನಿಜವಾಗಿಯೂ ವಿಶೇಷವಾಗಿದೆ!

ಏಷ್ಯನ್ ಗೇಮ್ಸ್ ಫೈನಲ್ ನಲ್ಲಿ ಭರ್ಜರಿ ಗೆಲುವಿನೊಂದಿಗೆ ಚಿನ್ನವನ್ನು ಉಳಿಸಿಕೊಂಡ ನಮ್ಮ ಪುರುಷರ ಹಾಕಿ ತಂಡಕ್ಕೆ ಅಭಿನಂದನೆಗಳು. ಏಷ್ಯನ್ ಗೇಮ್ಸ್ ನಲ್ಲಿ ಮೊದಲ ಬಾರಿಗೆ ಚಿನ್ನ ಮತ್ತು ಒಟ್ಟಾರೆಯಾಗಿ ಐದನೇ ಚಿನ್ನ... ಇದು ನಮ್ಮ ಆಟಗಾರರ ಅಸಾಧಾರಣ ಅಭಿಯಾನವಾಗಿದೆ.

ಇದೇ ಮೊದಲ ಬಾರಿಗೆ ನಮ್ಮ ಪುರುಷರ ಮತ್ತು ಮಹಿಳಾ ಹಾಕಿ ತಂಡಗಳೆರಡೂ ಒಂದೇ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದಿರುವುದರಿಂದ ಈ ಗೆಲುವು ಇನ್ನಷ್ಟು ವಿಶೇಷವಾಗಿದೆ. ಏಷ್ಯನ್ ವೇದಿಕೆಯಲ್ಲಿ ಭಾರತೀಯ ಹಾಕಿ ಎತ್ತರಕ್ಕೆ ನಿಂತಿದೆ ಎಂಬುದು ಸ್ಪಷ್ಟವಾಗಿದೆ: ಪ್ರಧಾನಮಂತ್ರಿ @narendramodi" ಎಂದು ತಿಳಿಸಿದರು.

 

 

******


(ಪ್ರಕಟಣೆ ಐ.ಡಿ.: 2319095) ವಿಸಿಟರ್ ಕೌಂಟರ್ : 22
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Assamese , Bengali , Manipuri , Punjabi , Gujarati , Telugu , Malayalam