ಪ್ರಧಾನ ಮಂತ್ರಿಯವರ ಕಛೇರಿ
ಜೀವಗಳನ್ನು ಉಳಿಸುವಲ್ಲಿ ಅಪಾರ ಧೈರ್ಯ ಮತ್ತು ಶೌರ್ಯ ತೋರಿದ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರನ್ನು ಶ್ಲಾಘಿಸಿದ ಪ್ರಧಾನಮಂತ್ರಿ
ಪ್ರಕಟಣಾ ದಿನಾಂಕ:
01 OCT 2026 7:56AM by PIB Bengaluru
ಗಂಭೀರ ಅಪಾಯವನ್ನು ಎದುರಿಸುತ್ತಿದ್ದ ಸಂದರ್ಭದಲ್ಲಿಯೂ ತೀವ್ರವಾಗಿ ಗಾಯಗೊಂಡಿದ್ದರೂ ಸಹ ಇತರರ ಜೀವಗಳನ್ನು ರಕ್ಷಿಸುವಲ್ಲಿ ಅವರ ಅಪಾರ ಧೈರ್ಯ ಮತ್ತು ಅಚಲ ಸಂಕಲ್ಪ ತೋರಿದ್ದಕ್ಕಾಗಿ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ.
ಕ್ಯಾಪ್ಟನ್ ಮಚ್ಚರ್ ಅವರ ಶೌರ್ಯವು ನೂರಾರು ಜೀವಗಳನ್ನು ಉಳಿಸಲು ಮತ್ತು ದೊಡ್ಡ ದುರಂತವನ್ನು ತಪ್ಪಿಸಲು ಸಹಾಯ ಮಾಡಿದೆ ಎಂದು ಪ್ರಧಾನಮಂತ್ರಿ ಹೇಳಿದರು.
ಕ್ಯಾಪ್ಟನ್ ಮಚ್ಚರ್ ಅವರ ಬಗ್ಗೆ ಭಾರತವು ಹೆಮ್ಮೆಪಡುತ್ತದೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು ಮತ್ತು ಅವರ ಶೀಘ್ರ ಚೇತರಿಕೆ, ಹೊಸ ಚೈತನ್ಯ ಮತ್ತು ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥಿಸಿದರು.
ಶ್ರೀ ನರೇಂದ್ರ ಮೋದಿ ತಮ್ಮ X ಪೋಸ್ಟ್ ನಲ್ಲಿ ಹೀಗೆ ಬರೆದಿದ್ದಾರೆ.
“ಕ್ಯಾಪ್ಟನ್ ಸ್ಮಿತ್ ಮಚ್ಚರ್ ಹಿರೋ.
ಗಂಭೀರ ಅಪಾಯವನ್ನು ಎದುರಿಸುತ್ತಿದ್ದ ಸಂದರ್ಭದಲ್ಲಿಯೂ ತೀವ್ರವಾಗಿ ಗಾಯಗೊಂಡಿದ್ದರೂ ಸಹ ಇತರರ ಜೀವಗಳನ್ನು ರಕ್ಷಿಸುವಲ್ಲಿ ಅವರ ಅಪಾರ ಧೈರ್ಯ ಮತ್ತು ಅಚಲ ಸಂಕಲ್ಪ ತೋರಿದ್ದಾರೆ.
ಅವರ ಶೌರ್ಯವು ನೂರಾರು ಜೀವಗಳನ್ನು ಉಳಿಸಲು ಮತ್ತು ದೊಡ್ಡ ದುರಂತವನ್ನು ತಪ್ಪಿಸಲು ಸಹಾಯ ಮಾಡಿದೆ.
ಭಾರತವು ಕ್ಯಾಪ್ಟನ್ ಮಚ್ಚರ್ ಅವರ ಬಗ್ಗೆ ಹೆಮ್ಮೆಪಡುತ್ತದೆ.
ಅವರ ಶೀಘ್ರ ಚೇತರಿಕೆ, ಹೊಸ ಚೈತನ್ಯ ಮತ್ತು ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತೇನೆ.’’
*****
(ಪ್ರಕಟಣೆ ಐ.ಡಿ.: 2317562)
ವಿಸಿಟರ್ ಕೌಂಟರ್ : 14
ಪ್ರಕಟಣೆಯನ್ನು ಇದರಲ್ಲಿ ಓದಿ:
Telugu
,
English
,
Urdu
,
Marathi
,
हिन्दी
,
Nepali
,
Assamese
,
Bengali
,
Manipuri
,
Punjabi
,
Gujarati
,
Tamil
,
Malayalam